ಖಾಸಗಿ ವೈದ್ಯಕೀಯ ಕ್ಷೇತ್ರ ಜನಮನ್ನಣೆ ಗಳಿಸಿದೆ: ಡಾ.ಎಸ್.ಪಿ.ಯೋಗಣ್ಣ ಅಭಿಮತ
ಮೈಸೂರು

ಖಾಸಗಿ ವೈದ್ಯಕೀಯ ಕ್ಷೇತ್ರ ಜನಮನ್ನಣೆ ಗಳಿಸಿದೆ: ಡಾ.ಎಸ್.ಪಿ.ಯೋಗಣ್ಣ ಅಭಿಮತ

July 2, 2018

ಮೈಸೂರು: ಸರ್ಕಾರಿ ವೈದ್ಯಕೀಯ ಕ್ಷೇತ್ರಕ್ಕಿಂತ ಖಾಸಗಿ ವೈದ್ಯಕೀಯ ಕ್ಷೇತ್ರ ಬೃಹತ್ತಾಗಿ ಬೆಳೆದಿದ್ದು, ಹೆಚ್ಚು ಜನಮನ್ನಣೆ ಗಳಿಸಿದೆ ಎಂದು ಮೈಸೂರಿನ ಹೃದ್ರೋಗ ತಜ್ಞ ಡಾ.ಎಸ್.ಪಿ. ಯೋಗಣ್ಣ ಅಭಿಪ್ರಾಯಪಟ್ಟರು.

ನಗರದ ಜಯಚಾಮರಾಜೇಂದ್ರ ಒಡೆಯರ್ ಗಾಲ್ಫ್ ಕ್ಲಬ್‍ನಲ್ಲಿ ಭಾರತೀಯ ವೈದ್ಯ ಕೀಯ ಸಂಘ ಮೈಸೂರು ಶಾಖೆ ಭಾನುವಾರ ಆಯೋಜಿಸಿದ್ದ ವೈದ್ಯರ ದಿನಾಚರಣೆ ಯಲ್ಲಿ ಡಾ.ಬಿ.ಸಿ.ರಾಯ್ ಕುರಿತು ಮಾತ ನಾಡಿದ ಅವರು, ದೇಶದಲ್ಲಿ ಶೇ.15ರಷ್ಟು ಮಾತ್ರ ಸರ್ಕಾರಿ ವೈದ್ಯರಿದ್ದರೆ, ಶೇ.85ರಷ್ಟು ಖಾಸಗಿ ವೈದ್ಯರಿದ್ದಾರೆ. ಹಾಗೆಯೇ ರಾಜ್ಯದಲ್ಲಿ 1 ಲಕ್ಷ ವೈದ್ಯರಿದ್ದು, ಅದರಲ್ಲಿ 4 ಸಾವಿರ ಸರ್ಕಾರಿ ವೈದ್ಯರಿದ್ದರೆ, ಉಳಿದ ವರೆಲ್ಲಾ ಖಾಸಗಿ ವೈದ್ಯರಾಗಿದ್ದಾರೆ. ಹಾಗಾಗಿ ಖಾಸಗಿ ವೈದ್ಯಕೀಯ ಕ್ಷೇತ್ರವು ಸರ್ಕಾರಿ ವೈದ್ಯಕೀಯ ಕ್ಷೇತ್ರಕ್ಕಿಂತ ಬೃಹತ್ತಾಗಿ ಬೆಳೆ ದಿದೆ. ಜತೆಗೆ ಜನಮನ್ನಣೆ ಗಳಿಸಿದೆ ಎಂದರು.

ಸಾಕಷ್ಟು ವೈದ್ಯರು ಸ್ವಾತಂತ್ರ್ಯ ಚಳವಳಿ ಯಲ್ಲಿ ಭಾಗವಹಿಸಿದ್ದು, ಅವರಲ್ಲಿ ಡಾ.ಬಿ.ಸಿ. ರಾಯ್ ಕೂಡ ಒಬ್ಬರು. ಇವರು ವೃತ್ತಿಯಲ್ಲಿ ವೈದ್ಯರಾದರೂ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ವೈದ್ಯರಾಗಿ, ಸಾಮಾಜಿಕ ಸೇವಕರಾಗಿ, ಶಿಕ್ಷಣ ತಜ್ಞ ಹೀಗೆ ಹಲವು ಕ್ಷೇತ್ರಗಳಲ್ಲಿ ಛಾಪು ಮೂಡಿ ಸಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಯ್ ಅವರು ಕೊಲ್ಕೊತ್ತಾದಲ್ಲಿ ಎಂಬಿ ಬಿಎಸ್ ಪದವಿ ಪಡೆದ ನಂತರ ಎಂಆರ್ ಸಿಬಿ ವ್ಯಾಸಂಗ ಮಾಡಲು ವಿದೇಶಕ್ಕೆ ತೆರಳುತ್ತಾರೆ. ಅಲ್ಲಿನ ಕಾಲೇಜೊಂದರಲ್ಲಿ ಸೀಟು ಪಡೆಯಲು 30 ಬಾರಿ ಪ್ರಯತ್ನಿಸಿ ದರೂ ಸೀಟು ಸಿಗುವುದಿಲ್ಲ. ಆದರೂ ಸ್ವಲ್ಪವೂ ತಾಳ್ಮೆ ಕಳೆದುಕೊಳ್ಳದೆ ಮತ್ತೆ ಪ್ರಯತ್ನಿಸಿ ಸೀಟು ಪಡೆದು ಎಂಆರ್‍ಸಿಬಿ ಪದವಿ ಪಡೆದು ಕೊಳ್ಳುತ್ತಾರೆ. ನಂತರ ಸ್ವದೇಶಕ್ಕೆ ಮರಳಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿ ಸುತ್ತಾರೆ. ಈ ವೇಳೆ ಗಾಂಧೀಜಿರವರ ಆರೋಗ್ಯದಲ್ಲಿ ಏರುಪೇರಾದಾಗ ಇಂಗ್ಲಿಷ್ ಔಷಧಿ ತೆಗೆದುಕೊಳ್ಳುವುದಿಲ್ಲವೆಂದು ಹಠ ಹಿಡಿಯುತ್ತಾರೆ. ಆಗ ರಾಯ್‍ರವರು ಔಷಧಿಗಿಂತ ನೀವು ಮುಖ್ಯವೆಂದು ಅವರ ಮನವೊಲಿಸಿದರು ಎಂದರು.

ರಾಯ್ ಅವರು 14 ವರ್ಷಗಳ ಕಾಲ ವೆಸ್ಟ್ ಬೆಂಗಾಲ್‍ನ ಮುಖ್ಯಮಂತ್ರಿಯಾಗಿ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿ ದ್ದಾರೆ. ಜತೆಗೆ ವಿವಿಯ ಕುಲಪತಿಗಳಾಗಿಯೂ ಉತ್ತಮ ಕೆಲಸಗಳನ್ನು ಮಾಡಿರುವ ರಾಯ್, ಭಾರತರತ್ನ ಪ್ರಶಸ್ತಿಗೂ ಭಾಜನ ರಾಗಿದ್ದರು. ಆಸ್ಪತ್ರೆಗಳನ್ನು ಪ್ರಾರಂಭಿಸುವ ಮೂಲಕ ಸಮಾಜದ ಚಿಕಿತ್ಸಕರಾಗಿ ಹೊರಹೊಮ್ಮಿದ್ದಾರೆ. ಹಾಗಾಗಿ ರಾಯ್ ರವರು ನಮಗೆಲ್ಲಾ ಆದರ್ಶ ಎಂದ ಅವರು, ವೈದ್ಯರು ಧನದಾಹಿಗಳು ಎಂಬ ಆಪಾದನೆ ಕೇಳಿಬರುತ್ತಿದ್ದು, ಈ ಕುರಿತು ವೈದ್ಯರು ಆತ್ಮವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಡಾ.ಎಂ.ಬಿ.ಭಾರತಿ, ಡಾ.ಬಿ.ಆರ್.ನಟರಾಜ್, ಡಾ.ಎಸ್.ರಂಗ ನಾಥಯ್ಯ, ಡಾ.ಜೆವಿಯರ್ ಅಸಿಸ್ಸಿ ಡಿಸೋಜ, ಡಾ.ಪಿ.ಸತ್ಯ ಅವರನ್ನು ಸನ್ಮಾನಿಸಲಾಯಿತು. ನಂತರ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಡಾ.ಎಲ್.ಮಹೇಂದ್ರರವರ ಪುತ್ರಿ ವರ್ಷ(579), ಡಾ.ಪಿ.ಎನ್.ಸವಿತಾರವರ ಪುತ್ರಿ ನಿರೀಕ್ಷಾ(583), ಡಾ.ಆನಂದ್ ಕುಮಾರ್‍ರವರ ಪುತ್ರಿ ಶ್ರೀಯಾ ಆನಂದ್ (542), ಡಾ.ಪಿ.ಎಲ್.ಬಸವಣ್ಣರವರ ಪುತ್ರ ಗೋಪಾಲಕೃಷ್ಣ(574), ಡಾ.ಸುಧಾ ರುದ್ರಪ್ಪರವರ ಪುತ್ರಿ ರಶ್ಮಿ(549) ಹಾಗೂ ಎಸ್‍ಎಸ್‍ಎಲ್‍ಸಿಯಲ್ಲಿ ಆರ್.ಎನ್.ಮಲ್ಲಿ ಕಾರ್ಜುನರವರ ಪುತ್ರಿ ರಕ್ಷಿತಾ(453) ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ನವದೆಹಲಿ ಐಎಂಎ ಹಿಂದಿನ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಬಿ.ವಿ.ರಾಜ್ ಗೋಪಾಲ್, ಚಿತ್ರಾಸ್ ಆಸ್ಪತ್ರೆ ನಿರ್ದೇಶಕ ಡಾ.ಆರ್. ಮಹೇಶ್ ಕುಮಾರ್, ಐಎಂಎ ಮೈಸೂರು ಶಾಖೆ ಅಧ್ಯಕ್ಷ ಡಾ.ಎಂ.ಎಸ್.ವಿಶ್ವೇಶ್ವರ, ಗೌರವ ಕಾರ್ಯದರ್ಶಿ ಡಾ.ಸುಜಾತ ಎಸ್.ರಾವ್, ನಾರಾಯಣ ಆಸ್ಪತ್ರೆ ಮೆಡಿ ಕಲ್ ಸೂಪರಿಟೆಂಡೆಂಟ್ ಡಾ.ದಿಲೀಪ್ ಮತ್ತಿತರರು ಉಪಸ್ಥಿತರಿದ್ದರು.

Translate »