ಮೈಸೂರು: ಯೋಗ ಮತ್ತು ಇತರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ 6 ಮಂದಿ ಗಣ್ಯರಿಗೆ `ಯೋಗ ಭೂಷಣ’ ಪ್ರಶಸ್ತಿಯನ್ನು ಸುಯೋಗ ಆಸ್ಪತ್ರೆಯ ಸಂಸ್ಥಾಪಕ ಡಾ.ಎಸ್.ಪಿ.ಯೋಗಣ್ಣ ಶನಿವಾರ ಪ್ರದಾನ ಮಾಡಿದರು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ಹಿಮಾಲಯ ಫೌಂಡೇಷನ್ ವತಿ ಯಿಂದ ನಡೆದ ಕಾರ್ಯಕ್ರಮದಲ್ಲಿ ಯೋಗ ಕ್ಷೇತ್ರದ ಸಾಧಕ ರಾದ ವಿ.ಶ್ರೀಕಂಠಸ್ವಾಮಿ ದೀಕ್ಷಿತ್, ಕೆ.ಆರ್. ಯೋಗಾನರಸಿಂಹನ್, ಎಂ.ಪಿ.ರಮೇಶ್‍ಬಾಬು, ಬಿ.ರವಿ, ಅಜಯ್‍ಕುಮಾರ್, ಪ್ರೇಮಾ ಮಂಜುನಾಥ್ ಅವರಿಗೆ ಈ ಸಾಲಿನ `ಯೋಗ ಭೂಷಣ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ನಂತರ…
ಜು.29ರಂದು ಸುಯೋಗ ಡಯಾಬಿಟಿಕ್ಸ್ ಹೆಲ್ತ್ ಕ್ಲಬ್‍ನ ಉದ್ಘಾಟನಾ ಸಮಾರಂಭ
July 29, 2018ಮೈಸೂರು: ಸುಯೋಗ ಆಸ್ಪತ್ರೆ ವತಿಯಿಂದ ಮಧುಮೇಹಿ ರೋಗಿಗಳಿಗಾಗಿ ಆರಂಭಿಸಿರುವ ‘ಸುಯೋಗ ಡಯಾ ಬಿಟಿಕ್ಸ್ ಹೆಲ್ತ್ ಕ್ಲಬ್’ನ ಉದ್ಘಾಟನಾ ಸಮಾರಂಭ ಹಾಗೂ ಸಕ್ಕರೆ ಕಾಯಿಲೆ ಬಗ್ಗೆ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ಜು.29ರಂದು ಏರ್ಪಡಿಸಲಾಗಿದೆ ಎಂದು ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಆವರಣದಲ್ಲಿ ಅಂದು ಬೆಳಿಗ್ಗೆ 10ಕ್ಕೆ ಕ್ಲಬ್ ಅನ್ನು ಸಚಿವ ಸಾ.ರಾ.ಮಹೇಶ್ ಉದ್ಘಾಟಿಸಲಿದ್ದು, ಸಕ್ಕರೆ ಕಾಯಿಲೆಯ ಹಿರಿಯ…
ಖಾಸಗಿ ವೈದ್ಯಕೀಯ ಕ್ಷೇತ್ರ ಜನಮನ್ನಣೆ ಗಳಿಸಿದೆ: ಡಾ.ಎಸ್.ಪಿ.ಯೋಗಣ್ಣ ಅಭಿಮತ
July 2, 2018ಮೈಸೂರು: ಸರ್ಕಾರಿ ವೈದ್ಯಕೀಯ ಕ್ಷೇತ್ರಕ್ಕಿಂತ ಖಾಸಗಿ ವೈದ್ಯಕೀಯ ಕ್ಷೇತ್ರ ಬೃಹತ್ತಾಗಿ ಬೆಳೆದಿದ್ದು, ಹೆಚ್ಚು ಜನಮನ್ನಣೆ ಗಳಿಸಿದೆ ಎಂದು ಮೈಸೂರಿನ ಹೃದ್ರೋಗ ತಜ್ಞ ಡಾ.ಎಸ್.ಪಿ. ಯೋಗಣ್ಣ ಅಭಿಪ್ರಾಯಪಟ್ಟರು. ನಗರದ ಜಯಚಾಮರಾಜೇಂದ್ರ ಒಡೆಯರ್ ಗಾಲ್ಫ್ ಕ್ಲಬ್‍ನಲ್ಲಿ ಭಾರತೀಯ ವೈದ್ಯ ಕೀಯ ಸಂಘ ಮೈಸೂರು ಶಾಖೆ ಭಾನುವಾರ ಆಯೋಜಿಸಿದ್ದ ವೈದ್ಯರ ದಿನಾಚರಣೆ ಯಲ್ಲಿ ಡಾ.ಬಿ.ಸಿ.ರಾಯ್ ಕುರಿತು ಮಾತ ನಾಡಿದ ಅವರು, ದೇಶದಲ್ಲಿ ಶೇ.15ರಷ್ಟು ಮಾತ್ರ ಸರ್ಕಾರಿ ವೈದ್ಯರಿದ್ದರೆ, ಶೇ.85ರಷ್ಟು ಖಾಸಗಿ ವೈದ್ಯರಿದ್ದಾರೆ. ಹಾಗೆಯೇ ರಾಜ್ಯದಲ್ಲಿ 1 ಲಕ್ಷ ವೈದ್ಯರಿದ್ದು, ಅದರಲ್ಲಿ 4…
Nipah Virus: how to get rid of it?
June 1, 2018– ಡಾ. ಎಸ್.ಪಿ. ಯೋಗಣ್ಣ ಮನುಷ್ಯ ಇಂದು ಹಲವಾರು ಸೋಂಕು ರೋಗಗಳಿಗೀಡಾಗುತ್ತಿದ್ದಾನೆ. 19ನೇ ಶತಮಾನ ಮತ್ತು 20ನೇ ಶತಮಾನದ ಪ್ರಾರಂಭದಲ್ಲಿ ಸಿಡುಬು, ಪ್ಲೇಗ್, ಪೋಲಿಯೋ ಇತ್ಯಾದಿ ಸೋಂಕು ರೋಗ ಗಳಿಗೀಡಾಗು ತ್ತಿದ್ದು, ಅವುಗಳನ್ನು ನಿರ್ಮೂಲನೆ ಮಾಡಿದ ಮೇಲೆ ಹೊಸ ಹೊಸ ಭಯಾನಕ ಸೋಂಕು ರೋಗ ಗಳು ಇಂದು ಜನ್ಮತಾಳುತ್ತಿವೆ. ಸೋಂಕಾಣುಗಳು ಸೂಕ್ಷ್ಮಜೀವಿ ನಿರೋಧಕ ಔಷಧಗಳಿಗೆ ಪ್ರತಿರೋಧತ್ವ ವನ್ನು ರೂಢಿಸಿಕೊಂಡು ನಾಶವಾಗದೆ ಉಳಿಯುವ ಉಪಾಯಮಾರ್ಗಗಳನ್ನು ಕಂಡುಕೊಳ್ಳುತ್ತಿವೆ. ಇದು ಹೊಸ ಹೊಸ ಸೂಕ್ಷ್ಮಜೀವಿ ನಿರೋಧಕ ಔಷಧಗಳ ಅನ್ವೇಷಣೆಗಳಿಗೆ ನಾಂದಿಯಾಗುತ್ತಿದೆ. ಸೂಕ್ಷ್ಮಜೀವಿಗಳೂ…