ಪೊರಕೆ ಹಿಡಿದ ವೈದ್ಯರು, ವೈದ್ಯ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳಿಂದ ಸ್ವಚ್ಛತಾ ಆಂದೋಲನ ಮೈಸೂರು: ಪ್ರತಿ ದಿನ ರೋಗಿಗಳ ಆರೋಗ್ಯ ನೋಡಿಕೊಳ್ಳುವ ಕೆ.ಆರ್.ಆಸ್ಪತ್ರೆ ವೈದ್ಯರು ಇಂದು ಪೊರಕೆ ಹಿಡಿದು ಆಸ್ಪತ್ರೆಯ ಅವರಣವನ್ನು ಸ್ವಚ್ಛಗೊಳಿಸುವ ಮೂಲಕ ಆಸ್ಪತ್ರೆ ಪರಿಸರದ ಆರೋಗ್ಯವನ್ನು ನೋಡಿಕೊಂಡರು. ವೈದ್ಯರ ದಿನಾಚರಣೆ ಪ್ರಯುಕ್ತ ಮೈಸೂರಿನ ಕೆ.ಆರ್.ಆಸ್ಪತ್ರೆಯ ಇಡೀ ಆವರಣದಲ್ಲಿ ಭಾನುವಾರ ವಿಶೇಷ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಯಿತು. ವೈದ್ಯರು, ವೈದ್ಯ ವಿದ್ಯಾರ್ಥಿಗಳು, ಲಯನ್ಸ್ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಸೇರಿದಂತೆ ನೂರಾರು ಮಂದಿ ಪೊರಕೆ ಹಿಡಿದು…
ಖಾಸಗಿ ವೈದ್ಯಕೀಯ ಕ್ಷೇತ್ರ ಜನಮನ್ನಣೆ ಗಳಿಸಿದೆ: ಡಾ.ಎಸ್.ಪಿ.ಯೋಗಣ್ಣ ಅಭಿಮತ
July 2, 2018ಮೈಸೂರು: ಸರ್ಕಾರಿ ವೈದ್ಯಕೀಯ ಕ್ಷೇತ್ರಕ್ಕಿಂತ ಖಾಸಗಿ ವೈದ್ಯಕೀಯ ಕ್ಷೇತ್ರ ಬೃಹತ್ತಾಗಿ ಬೆಳೆದಿದ್ದು, ಹೆಚ್ಚು ಜನಮನ್ನಣೆ ಗಳಿಸಿದೆ ಎಂದು ಮೈಸೂರಿನ ಹೃದ್ರೋಗ ತಜ್ಞ ಡಾ.ಎಸ್.ಪಿ. ಯೋಗಣ್ಣ ಅಭಿಪ್ರಾಯಪಟ್ಟರು. ನಗರದ ಜಯಚಾಮರಾಜೇಂದ್ರ ಒಡೆಯರ್ ಗಾಲ್ಫ್ ಕ್ಲಬ್‍ನಲ್ಲಿ ಭಾರತೀಯ ವೈದ್ಯ ಕೀಯ ಸಂಘ ಮೈಸೂರು ಶಾಖೆ ಭಾನುವಾರ ಆಯೋಜಿಸಿದ್ದ ವೈದ್ಯರ ದಿನಾಚರಣೆ ಯಲ್ಲಿ ಡಾ.ಬಿ.ಸಿ.ರಾಯ್ ಕುರಿತು ಮಾತ ನಾಡಿದ ಅವರು, ದೇಶದಲ್ಲಿ ಶೇ.15ರಷ್ಟು ಮಾತ್ರ ಸರ್ಕಾರಿ ವೈದ್ಯರಿದ್ದರೆ, ಶೇ.85ರಷ್ಟು ಖಾಸಗಿ ವೈದ್ಯರಿದ್ದಾರೆ. ಹಾಗೆಯೇ ರಾಜ್ಯದಲ್ಲಿ 1 ಲಕ್ಷ ವೈದ್ಯರಿದ್ದು, ಅದರಲ್ಲಿ 4…
ಆಯುರ್ವೇದ ಪ್ರಚಾರ ಪರಿಷತ್ ಟ್ರಸ್ಟ್ ವತಿಯಿಂದ ವೈದ್ಯರ ದಿನಾಚರಣೆ: ಐವರು ವೈದ್ಯರಿಗೆ ‘ವೈದ್ಯ ಭಾಸ್ಕರ’ ಪ್ರಶಸ್ತಿ
July 2, 2018ಮೈಸೂರು: ತಮ್ಮ ಇಡೀ ಜೀವನವನ್ನು ಜನರ ಆರೋಗ್ಯಕ್ಕಾಗಿಯೇ ಮೀಸಲಿಟ್ಟು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಶ್ರಮಿಸುತ್ತಿರುವ ಐವರು ವೈದ್ಯರಿಗೆ ಮೈಸೂರಿನ ಆಯುರ್ವೇದ ಪ್ರಚಾರ ಪರಿಷತ್ ಟ್ರಸ್ಟ್ ವತಿಯಿಂದ ಭಾನುವಾರ `ವೈದ್ಯ ಭಾಸ್ಕರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೈಸೂರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ವೈದ್ಯರ ದಿನಾಚರಣೆ ಹಾಗೂ ಹಿರಿಯ ಸಾಹಿತಿ ಕೆ.ಭೈರವಮೂರ್ತಿ ಅವರ 74ನೇ ಹುಟ್ಟುಹಬ್ಬದ ಶುಭ ಹಾರೈಕೆ ಕಾರ್ಯಕ್ರಮದಲ್ಲಿ ಮೈಸೂರಿನ ಹೃದ್ರೋಗ ತಜ್ಞ ಡಾ.ಎಸ್.ಪಿ.ಯೋಗಣ್ಣ. ಭಾರತ್ ಕ್ಯಾನ್ಸರ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್.ವಿಶ್ವೇಶ್ವರ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ…
ಆರು ಮಂದಿ ವೈದ್ಯರಿಗೆ ‘ವೈದ್ಯೋನಾರಾಯಣ ಪ್ರಶಸ್ತಿ’ ಪ್ರದಾನ
July 1, 2018ಮೈಸೂರು: ಮೈಸೂರಿನ ಚಾಮುಂಡಿಪುರಂನ ಬಾಲಬೋಧಿನಿ ಶಾಲೆ ಆವರಣದಲ್ಲಿ ವೈದ್ಯರ ದಿನಾಚರಣೆಯ ಅಂಗವಾಗಿ ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆಗಾಗಿ ಆರು ಮಂದಿ ವೈದ್ಯರಿಗೆ ಶನಿವಾರ `ವೈದ್ಯೋ ನಾರಾಯಣ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಜೊತೆಗೆ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ, ವೈದ್ಯಕೀಯ ಸೇವೆ ನೀಡಲಾಯಿತು. ಅಪೂರ್ವ ಸ್ನೇಹ ಬಳಗ, ಅರಿವು ಸಂಸ್ಥೆ, ಕೆಎಂಪಿಕೆ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ಹೃದಯ ತಜ್ಞ ಡಾ.ಎಂ.ಎನ್.ರವಿ, ಪಶುವೈದ್ಯ ಡಾ.ನಾಗರಾಜ್, ದಂತ ವೈದ್ಯ ಡಾ.ಅನಿಲ್ ಥಾಮಸ್, ಮಕ್ಕಳ…