ಸ್ವಾತಂತ್ರ್ಯ ಚಳುವಳಿಗೆ ಪ್ರೇರಣೆ ನೀಡಿದ ವಂದೇ ಮಾತರಂ: ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಮತ
ಚಾಮರಾಜನಗರ

ಸ್ವಾತಂತ್ರ್ಯ ಚಳುವಳಿಗೆ ಪ್ರೇರಣೆ ನೀಡಿದ ವಂದೇ ಮಾತರಂ: ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಮತ

July 2, 2018

ಚಾಮರಾಜನಗರ: ಬಂಕಿಮ ಚಂದ್ರ ಚಟರ್ಜಿಯವರು ರಚಿಸಿದ ವಂದೇ ಮಾತರಂ ಗೀತೆಯು ಅನೇಕ ಸಾಹಸ ಗಳಿಗೆ ಹಾಗೂ ಸ್ವಾತಂತ್ರ್ಯ ಚಳುವಳಿಯ ಬಲಿದಾನಗಳಿಗೆ ಪ್ರೇರಣೆ ನೀಡಿದೆ ಎಂದು ಕನಕಗಿರಿ ಶ್ರೀಕ್ಷೇತ್ರದ ಭುವನಕೀರ್ತಿ ಭಟ್ಟಾ ರಕ ಸ್ವಾಮೀಜಿಯವರು ತಿಳಿಸಿದರು.

ಅವರು ಕನಕಗಿರಿಯಲ್ಲಿ ತಾಲೂಕು ಭಾರತ ಸೇವಾದಳ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿ ಕೊಂಡಿದ್ದ ಶಿಕ್ಷಕರ ಪುನಶ್ಚೇತನ ಶಿಬಿರ ಹಾಗೂ ಬಂಕಿಮಚಂದ್ರ ಚಟರ್ಜಿಯವರ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ವಂದೇ ಮಾತರಂ ರಚಿಸಿದ ಬಂಕಿಮ ಚಂದ್ರ ಚಟರ್ಜಿಯವರು ವಂದೇ ಮಾತರಂ ಗೀತೆಯ ಮೂಲಕ ಭಾರತೀಯರಿಗೆ ಹೊಸ ಸಂದೇಶವನ್ನು ನೀಡಿದರು. ಈ ಗೀತೆ ಯಲ್ಲಿ ಭಾರತಮಾತೆಯನ್ನು ಪ್ರಕೃತಿಮಾತೆಗೆ ಹೋಲಿಸಲಾಗಿದೆ ಎಂದು ಹೇಳಿದರು.
ಬಂಕಿಮಚಂದ್ರ ಚಟರ್ಜಿಯವರ ಜನ್ಮ ದಿನ ಮತ್ತು ಶಿಕ್ಷಕರ ಪುನಶ್ಚೇತನ ಶಿಬಿರ ವನ್ನು ಕನಕಗಿರಿಯಲ್ಲಿ ಹಮ್ಮಿಕೊಂಡಿರು ವುದು ಶ್ಲಾಘನೀಯ ಕಾರ್ಯ. ಕನಕ ಗಿರಿಯು ತಪೋಭೂಮಿಯಾಗಿದೆ. ನೂರಾರು ಗ್ರಂಥಗಳು, ವ್ಯಾಕರಣ, ಶಾಸ್ತ್ರೀಯ ಕೃತಿ ಗಳು ಇಲ್ಲಿ ತಯಾರಾಗಿದ್ದು, ಅವುಗಳ ಮಹತ್ವವನ್ನು ತಿಳಿಸಿಕೊಡಲು ಇಂತಹ ಶಿಬಿರ ಗಳು ಅತ್ಯವಶ್ಯಕ ಎಂದು ತಿಳಿಸಿದರು.

ಕನಕಗಿರಿಗೆ ಸಾವಿರಾರು ಭಕ್ತರು ನಿರಂ ತರವಾಗಿ ಆಗಮಿಸುವುದರಿಂದ ಕ್ಷೇತ್ರದ ಮಹತ್ವವನ್ನು ತಿಳಿಸಿಕೊಡಲು ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಶಿಕ್ಷಕರು ನಿರಂತರ ಅಧ್ಯಯನಶೀಲ ರಾಗಿ, ಸೇವಾ ಮನೋಭಾವನೆಯನ್ನು ರೂಢಿಸಿಕೊಳ್ಳುವ ಮೂಲಕ ಅಂತಹ ಗುಣಾ ತ್ಮಕ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಲು ಶ್ರಮಿಸಬೇಕು ಎಂದು ಕರೆ ನೀಡಿ ದರು. ಜೈಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ಮಾತನಾಡಿ, ವಂದೇ ಮಾತರಂ ನಮ್ಮ ರಾಷ್ಟ್ರೀಯ ಜೀವನದ ವಿವಿಧ ಮುಖಗಳ ಪ್ರತೀಕ. ಸಾಧನೆಗೆ ದೇಶಭಕ್ತಿಗೆ ಚಿರಂತನ ಸ್ಫೂರ್ತಿ ದಾಯಕ ಎಂದು ಬಣ್ಣಿಸಿದರು.

ಬಂಕಿಮಚಂದ್ರ ಚಟರ್ಜಿಯವರು ಶ್ರೇಷ್ಠ ಕಾದಂಬರಿಗಳನ್ನು ರಚಿಸಿದರು. ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಚಳು ವಳಿಯಲ್ಲಿ ಲಕ್ಷಾಂತರ ಭಾರತೀಯರಿಗೆ ಶಕ್ತಿ ತುಂಬಿದರು. ಭಗತ್‍ಸಿಂಗ್, ರಾಜ ಗುರು, ಸುಖದೇವ್, ಚಂದ್ರಶೇಖರ್ ಆಜಾದ್‍ರಂತಹ ತ್ಯಾಗಿಗಳಿಗೆ ಸ್ಫೂರ್ತಿ ಸೆಲೆಯಾಗಿದ್ದರು. ಇಂದೂ ಕೂಡ ವಂದೇ ಮಾತರಂ ಗೀತೆ ವಿಶ್ವದ ಅನೇಕ ಕಡೆ ಪ್ರಶಂಸೆಗೊಳಗಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ತಾಲೂಕು ಸೇವಾ ದಳದ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ವಹಿಸಿದ್ದರು. ಹಿರಿಯ ಸಂಪನ್ಮೂಲ ಶಿಕ್ಷಕರಾದ ಶೇಷಾಚಲ, ಜಿಲ್ಲಾ ಸಂಘಟಕ ಈರಯ್ಯ, ತಾಲೂಕು ಸೇವಾದಳದ ಕಾರ್ಯದರ್ಶಿ ನಾಗರಾಜು, ಚಿಕ್ಕಬಸ ವಯ್ಯ, ಉಪಾಧ್ಯಕ್ಷ ಬಂಗಾರ ಗಿರಿನಾಯಕ, ಕರ್ನಾಟಕ ಸುಗಮ ಸಂಗೀತ ಪರಿಷತ್‍ನ ಜಿಲ್ಲಾ ಅಧ್ಯಕ್ಷ ಅರುಣ್‍ಕುಮಾರ್ ಮುಂತಾ ದವರು ಉಪಸ್ಥಿತರಿದ್ದರು.

Translate »