ಬಂಡಿಗೆರೆಯಲ್ಲಿ 15ಕ್ಕೂ ಹೆಚ್ಚು ಮೇಕೆಗಳ ಸಾವು
ಚಾಮರಾಜನಗರ

ಬಂಡಿಗೆರೆಯಲ್ಲಿ 15ಕ್ಕೂ ಹೆಚ್ಚು ಮೇಕೆಗಳ ಸಾವು

July 2, 2018

ಚಾಮರಾಜನಗರ: ತಾಲೂಕಿನ ಬಂಡಿಗೆರೆ ಗ್ರಾಮದಲ್ಲಿ ಕರುಳು ಬೇನೆಯಿಂದ 15ಕ್ಕೂ ಹೆಚ್ಚು ಮೇಕೆಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.

ಗ್ರಾಮದ ಬ್ಯಾಡಮೂಡ್ಲು ರಸ್ತೆಯಲ್ಲಿರುವ ದುಂಡಶೆಟ್ಟಿ ಎಂಬುವರಿಗೆ ಸೇರಿದ ಸುಮಾರು 15 ಮೇಕೆಗಳು ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಆತಂಕವುಂಟಾಗಿದೆ. ದುಂಡಶೆಟ್ಟಿ ಎಂಬುವರು ಹಲವಾರು ವರ್ಷಗಳಿಂದಲೂ ಕುರಿ, ದನ, ಮೇಕೆ ಹಾಗೂ ಎಮ್ಮೆಗಳನ್ನು ಸಾಕುತ್ತಿದ್ದು, ಇದ್ದ 70 ಮೇಕೆಗಳಲ್ಲಿ ಶನಿವಾರ 10 ಹಾಗೂ ಇಂದು 5ಕ್ಕೂ ಹೆಚ್ಚು ಮೇಕೆಗಳು ಸತ್ತಿರುವುದರಿಂದ ತೀವ್ರ ಆತಂಕಕ್ಕೊಳಗಾಗಿದ್ದಾರೆ. ಭಾನುವಾರ ಸುದ್ದಿ ತಿಳಿದ ಪಶು ವೈದ್ಯಾಧಿಕಾರಿ ನಾಗೇಂದ್ರ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮಳೆಗಾಲದಲ್ಲೇ ಈ ರೋಗ ಹೆಚ್ಚಾಗಿ ಬರುವುದರಿಂದ ನಾಳೆ ಸರ್ಕಾರದಿಂದಲೂ ಸಹಾ ತಾಲೂಕಿನಾದ್ಯಂತ ವ್ಯಾಕ್ಸಿನ್ ಚಿಕಿತ್ಸೆ ನೀಡಲಾಗುತ್ತಿದೆ. ಇಂದೇ ದುಂಡಶೆಟ್ಟಿ ಅವರ ಉಳಿದ ಮೇಕೆಗಳಿಗೆ ಚಿಕಿತ್ಸೆ ನೀಡಲಾಗುವುದೆಂದು ಪಶು ವೈದ್ಯಾಧಿಕಾರಿ ತಿಳಿಸಿದ್ದಾರೆ.

Translate »