ಸಮ್ಮಿಶ್ರ ಸರ್ಕಾರದಿಂದ 5 ವರ್ಷ ಪೂರೈಕೆ: ಸತೀಶ್ ಜಾರಕಿಹೊಳಿ
ಚಾಮರಾಜನಗರ

ಸಮ್ಮಿಶ್ರ ಸರ್ಕಾರದಿಂದ 5 ವರ್ಷ ಪೂರೈಕೆ: ಸತೀಶ್ ಜಾರಕಿಹೊಳಿ

July 2, 2018

ಕೊಳ್ಳೇಗಾಲ: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣ ನಡೆಸು ತ್ತಿರುವ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸುವುದರಲ್ಲಿ ಯಾವುದೇ ಸಂಶಯ ವಿಲ್ಲ. ಈ ಕುರಿತು ಯಾವುದೇ ಡೌಟೇ ಬೇಡ. ಖಂಡಿತವಾಗಿ ಅವಧಿ ಪೂರೈಸ ಲಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಅವರು ಪಟ್ಟಣದ ಪ್ರವಾಸಿ ಮಂದಿರ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಆಕಾಂಕ್ಷಿ ನಾನಲ್ಲ. ನಾನು ಆಕಾಂಕ್ಷಿ ಅಲ್ಲದಿದ್ದರೂ ನನಗೆ ಸ್ಥಾನ ಒದಗಿ ಬಂದಿತ್ತು. ಆದರೆ ನನಗಿಂತ ಅಧ್ಯಕ್ಷ ಸ್ಥಾನಕ್ಕೆ ಹಿರಿಯರಿದ್ದಾರೆ. ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ ನಾನು ಶಾಸಕ ನಾಷ್ಟೇ ಕೆಲಸ ಮಾಡಬೇಕೆಂಬುದು ನನ್ನ ಹಂಬಲ ಎಂದ ಅವರು, 2 ವರ್ಷದ ಬಳಿಕ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಸಿಗುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸಾಲಮನ್ನಾದ ಬೇಡಿಕೆ ಇರುವ ಕಾರಣ ಬಜೆಟ್ ಅವಶ್ಯಕತೆ ಇದೆ. ಈ ಹಿನ್ನೆಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಉತ್ತಮ ಬಜೆಟ್ ಮಂಡಿಸಲಿ ದ್ದಾರೆ. ಕಾಂಗ್ರೆಸ್ ಪಕ್ಷ ಸಾಮಾಜಿಕ ಸಿದ್ಧಾಂತದ ಪಕ್ಷವಾಗಿದೆ. ಹಾಗಾಗಿ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಜಯಣ್ಣ, ನಗರಸಭಾ ಅಧ್ಯಕ್ಷ ರಮೇಶ್, ಜಿಲ್ಲಾ ಪಂಚಾಯತ್ ಉಪಾ ಧ್ಯಕ್ಷ ಯೋಗೇಶ್, ಮಾಜಿ ಸದಸ್ಯ ಕೊಪ್ಪಾಳಿ ಮಹಾದೇವನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಮುಖಂಡ ರಾದ ಡಿ.ಎನ್.ನಟರಾಜು, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚೇತನ್ ದೊರೆ ರಾಜ್ ಇನ್ನಿತರರು ಇದ್ದರು

Translate »