ಗುಂಡ್ಲುಪೇಟೆ ಸಮಗ್ರ ಅಭಿವೃದ್ಧಿಗೆ ಯೋಜನೆ
ಚಾಮರಾಜನಗರ

ಗುಂಡ್ಲುಪೇಟೆ ಸಮಗ್ರ ಅಭಿವೃದ್ಧಿಗೆ ಯೋಜನೆ

July 2, 2018

ಗುಂಡ್ಲುಪೇಟೆ:  ಪಟ್ಟಣದ ಸಮಗ್ರ ಅಭಿವೃದ್ಧಿಗೆ ಯೋಜ ನೆಗಳನ್ನು ರೂಪಿಸಲಾಗುತ್ತಿದ್ದು, ಸ್ಪಲ್ಪ ಸಮಯ ಕೊಟ್ಟು ನೋಡಿ ಪಟ್ಟಣವನ್ನು ಮಾದರಿ ಯನ್ನಾಗಿಸುತ್ತೇನೆ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು.

ಪಟ್ಟಣದ ದ.ರಾ.ಬೇಂದ್ರೆ ನಗರದಲ್ಲಿ ನಿವಾಸಿಗಳಿಂದ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತ ನಾಡಿ, ನಾನು ಸಹ ದ.ರಾ.ಬೇಂದ್ರೆ ಬಡಾ ವಣೆಯ ನಿವಾಸಿಯಾಗಿ ಬಡಾವಣೆಯ ಮೂಲ ಸೌಕರ್ಯದ ಕೊರತೆಯನ್ನು ಅರಿತಿದ್ದೇನೆ. ಆದ್ದರಿಂದ ಮೊದಲ ಹಂತವಾಗಿ ಬಡಾವಣೆಯ ಪ್ರಮುಖ ಎರಡು ರಸ್ತೆ ಗಳನ್ನು ಸುಮಾರು 40 ಲಕ್ಷ ರೂಪಾಯಿ ಗಳ ಅಂದಾಜು ವೆಚ್ಚದಲ್ಲಿ ಡಾಂಬರು ಮಾಡಲು ಮತ್ತು ಕುಡಿಯುವ ನೀರಿಗಾಗಿ ಕೊಳವೆ ಬಾವಿಯಿಂದ ಪೈಪ್‍ಲೈನ್ ಅಳ ವಡಿಸಲು ಉದ್ದೇಶಿಸಲಾಗಿದೆ ಎಂದರು.

ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ನೂತನವಾಗಿ ಬೋರ್ ವೆಲ್ ಕೊರೆಯಿಸಿ ಮತ್ತು ಪೈಪ್‍ಲೈನ್ ಮಾಡಿಸಿ ನೀರಿನ ಸಮಸ್ಯೆ ಬಗೆಹರಿ ಸುತ್ತೇನೆ. ಪಟ್ಟಣದಲ್ಲಿಯೇ ಪ್ರತಿಷ್ಠಿತ ಬಡಾವಣೆಯಾದ ದ.ರಾ.ಬೇಂದ್ರೆ ನಗರ ಬೆಂಗಳೂರಿನ ಡಾಲರ್ಸ್ ಕಾಲೋನಿ ಇದ್ದಂತೆ. ಆದರೆ ಕಳೆದ ಇಪ್ಪತ್ತು ವರ್ಷಗಳಿಂದ ಇಲ್ಲಿ ಉತ್ತಮವಾದ ರಸ್ತೆ, ಕುಡಿಯುವ ನೀರಿನ ಸೌಕರ್ಯ, ಬೀದಿ ದೀಪ, ಸಮರ್ಪಕ ಕಸ ವಿಲೇವಾರಿ ಮತ್ತಿತರೆ ಸೌಲಭ್ಯಗಳಿಂದ ವಂಚಿತವಾಗಿದೆ. ನನಗೆ ಸ್ಪಲ್ಪ ಕಾಲಾವಕಾಶ ವನ್ನು ಕೊಡಿ. ಈ ಬಡಾವಣೆಯನ್ನು ಮಾದರಿ ಬಡಾವಣೆಯನ್ನಾಗಿಸುವುದು ನನ್ನ ಗುರಿ. ಇದಕ್ಕೆ ನಿಮ್ಮ ಸಹಕಾರ ನಿರಂ ತರವಾಗಿರಲಿ ಎಂದರು.

ಮನೆ ಹಂಚಿಕೆಗೆ ಕ್ರಮ: ಪಟ್ಟಣದ ಹೊರ ವಲಯದಲ್ಲಿ ಈಗಾಗಲೇ 18.50 ಎಕರೆ ಪ್ರದೇಶದಲ್ಲಿ ವಸತಿ ಇಲ್ಲದವರನ್ನು ಗುರು ತಿಸಿ ಮನೆ ಹಂಚಿಕೆ ಕಾರ್ಯವನ್ನು ಸದ್ಯದಲ್ಲೇ ಮಾಡಲಾಗುವುದು. ಪಟ್ಟಣಕ್ಕೆ ಸರಬ ರಾಜಾಗುವ ಕಬಿನಿ ಮುಖ್ಯ ಪೈಪ್‍ಲೈನ್ ಪದೇ ಪದೇ ದುರಸ್ತಿಗೆ ಬರುತ್ತಿರುವುದ ರಿಂದ ನೂತನ ಪೈಪ್‍ಲೈನ್ ಮೂಲಕ ಕಬಿನಿ ನೀರನ್ನು ಪಟ್ಟಣಕ್ಕೆ ಸರಬರಾಜು ಮಾಡಿಸಲು ಯೋಜನೆ ರೂಪಿಸ ಲಾಗುತ್ತಿದೆ. ಇದಲ್ಲದೇ ಪಟ್ಟಣದ ಬಡಾ ವಣೆಯ ರಸ್ತೆಗಳು, ಚರಂಡಿ ಮತ್ತು ಬೀದಿ ದೀಪಗಳು ಸೇರಿದಂತೆ ಅಗತ್ಯ ಮೂಲಸೌಕ ರ್ಯವನ್ನು ಒದಗಿಸಲು ಯೋಜನೆಗ ಳನ್ನು ಸಿದ್ಧಗೊಳಿಸಲಾಗಿದೆ. ಮುಂದಿನ ದಿನ ಗಳಲ್ಲಿ ಹಂತ ಹಂತವಾಗಿ ಇವುಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಸನ್ಮಾನ: ನೂತನ ಶಾಸಕ ಹಾಗೂ ದ.ರಾ.ಬೇಂದ್ರೆ ನಗರದ ವಾಸಿಯೂ ಆದ ಸಿ.ಎಸ್.ನಿರಂಜನಕುಮಾರ್ ಅವರನ್ನು ಇಲ್ಲಿನ ನಿವಾಸಿಗಳು ಮೈಸೂರು ಪೇಟಾ ತೊಡಿಸಿ ಶಾಲು ಹೊದಿಸಿ ಶ್ರೀಗಣೇಶನ ಮೂರ್ತಿಯ ನೆನಪಿನ ಕಾಣಿಕೆಯನ್ನು ಕೊಟ್ಟು ಬೃಹತ್ ಹಾರವನ್ನು ಹಾಕುವುದ ರೊಂದಿಗೆ ಆತ್ಮೀಯವಾಗಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಬಿಜೆಪಿ ಹಿರಿಯ ಮುಖಂಡ ಸಿ.ಎಂ.ಶಿವಮಲ್ಲಪ್ಪ, ಎಸ್.ಸಿ.ಘಟಕದ ಅಧ್ಯಕ್ಷ ಬಸವರಾಜು ಸೇರಿದಂತೆ ನಿವಾಸಿ ಗಳು ಭಾಗವಹಿಸಿದ್ದರು.

Translate »