ಯುವಕನಿಂದ ಪ್ರೀತಿಸುವಂತೆ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು
ಚಾಮರಾಜನಗರ

ಯುವಕನಿಂದ ಪ್ರೀತಿಸುವಂತೆ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು

July 2, 2018

ಚಾಮರಾಜನಗರ: ತನ್ನನ್ನು ಪ್ರೀತಿಸು ವಂತೆ ಯುವಕನೊಬ್ಬ ನೀಡುತ್ತಿದ್ದ ಕಿರುಕುಳ ತಾಳಲಾರದೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಒಂದು ವಾರದ ಬಳಿಕ ಮೃತಪಟ್ಟಿದ್ದಾಳೆ.

ಚಾಮರಾಜನಗರ ತಾಲೂಕಿನ ಅಮ್ಮನಪುರ ಗ್ರಾಮದ ನಿವಾಸಿ ಕಾಗಲವಾಡಿ ಗ್ರಾಮದ ಟಿ.ಎಸ್.ಸುಬ್ಬಣ್ಣ ಪ್ರೌಢಶಾಲೆ ಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರೀತಿ (16) ಮೃತಪಟ್ಟವಳು. ಅಮ್ಮನಪುರ ಗ್ರಾಮದ ದೊರೆಸ್ವಾಮಿ ಎಂಬು ವರ ಮಗಳು ಪ್ರೀತಿ ಶಾಲೆಗೆ ಬರುವಾಗ ರೇಚಂಬಳ್ಳಿ ಗ್ರಾಮದ ಮನು ಉ. ಗುಂಡಾಪುರಿ ಎಂಬಾತನ ಪರಿಚಯವಾಗಿತ್ತು ಎನ್ನ ಲಾಗಿದೆ. ಮನು ತನ್ನನ್ನು ಪ್ರೀತಿಸುವಂತೆ ಪ್ರೀತಿಗೆ ಒತ್ತಾಯ ಮಾಡು ತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಪ್ರೀತಿ ಜೂ.23ರಂದು ಮನೆ ಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು.

ತೀವ್ರ ಸುಟ್ಟಗಾಯಗಳಿಂದ ನರಳುತ್ತಿದ್ದ ಪ್ರೀತಿಗೆ ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸ ಲಾಗಿತ್ತು. ಕಳೆದ ಒಂದು ವಾರದಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಪ್ರೀತಿ ಶನಿವಾರ ಮಧ್ಯರಾತ್ರಿ ಮೃತ ಪಟ್ಟಳು ಎಂದು ರಾಮಸಮುದ್ರ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಆನಂದೇಗೌಡ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಕೆ.ಆರ್.ಆಸ್ಪತ್ರೆ ಯಲ್ಲಿ ಶವ ಪರೀಕ್ಷೆ ನಡೆಸಿದ ನಂತರ ಶವವನ್ನು ಪೋಷಕರಿಗೆ ಒಪ್ಪಿಸ ಲಾಯಿತು. ಸಂಜೆ ಅಮ್ಮನಪುರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.

ಹುಡುಕಾಟ: ಪ್ರೀತಿಯ ಸಾವಿಗೆ ಕಾರಣನಾದ ಎನ್ನಲಾದ ರೇಚಂಬಳ್ಳಿ ಗ್ರಾಮದ ಮನು ವಿರುದ್ಧ ಪ್ರೀತಿ ತಂದೆ ದೊರೆ ಸ್ವಾಮಿ ದೂರು ದಾಖಲಿಸಿದ್ದಾರೆ. ಪೊಲೀಸರು ಫೋಸ್ಕೊ ಕಾಯ್ದೆ (ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ) ಹಾಗೂ ಕೊಲೆ ಬೆದರಿಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನು ನಾಪತ್ತೆಯಾಗಿದ್ದು, ಶೀಘ್ರದಲ್ಲಿಯೇ ಬಂಧಿಸುವುದಾಗಿ ಆನಂದೇಗೌಡ ತಿಳಿಸಿದರು.

Translate »