ಮಲೆಮಹದೇಶ್ವರ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ ದಾಂಪತ್ಯಕ್ಕೆ ಕಾಲಿಟ್ಟ 60 ನವ ಜೋಡಿಗಳು
ಚಾಮರಾಜನಗರ

ಮಲೆಮಹದೇಶ್ವರ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ ದಾಂಪತ್ಯಕ್ಕೆ ಕಾಲಿಟ್ಟ 60 ನವ ಜೋಡಿಗಳು

July 2, 2018

ಹನೂರು:  ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಸಲಾಗುವ ಉಚಿತ ಸಾಮೂಹಿಕ ವಿವಾಹ ಕಾರ್ಯ ಗಳನ್ನು ಮೂರು ತಿಂಗಳಿಗೆ ಒಮ್ಮೆ ನಡೆಸಿದರೆ ಇನ್ನೂ ಅನೇಕ ಜನರಿಗೆ ಅನುಕೂಲ ವಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅಭಿಪ್ರಾಯಪಟ್ಟರು.

ಮಲೆಮಹದೇಶ್ವರ ಬೆಟ್ಟದಲ್ಲಿ ಮಹ ದೇಶ್ವರ ಬೆಟ್ಟ ಪ್ರಾಧಿಕಾರದ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಅವರು ಮಾತನಾಡಿದರು.

ವಿವಾಹ ಮಾಡಲು ಬಡವರು ಕಲ್ಯಾಣ ಮಂಟಪಗಳಿಗೆ ಹಾಗೂ ಊಟೋಪಚಾ ರಕ್ಕೆ ಸಾಕಷ್ಟು ಹಣ ವ್ಯಯಿಸಬೇಕಾಗುತ್ತದೆ. ಈ ರೀತಿಯ ದುಂದು ವೆಚ್ಚದಿಂದ ಸಾಲದ ಸುಳಿಗೆ ಸಿಲುಕಬೇಕಾತ್ತದೆ. ಪುಣ್ಯ ಕ್ಷೇತ್ರಗ ಳಲ್ಲಿ ವಿವಾಹವಾಗುವುದು ಪುಣ್ಯ ಲಭಿಸು ತ್ತದೆ ಎಂಬ ಪ್ರತೀತಿ ಇದೆ ಎಂದ ಅವರು, ನೂತನ ದಂಪತಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣ ವನ್ನು ಮಾಡಿದ ಶಾಸಕ ಆರ್.ನರೇಂದ್ರ ನೂತನ ವಧು-ವರರಿಗೆ ಶುಭಾಶಯ ಗಳನ್ನು ಕೋರಿ, ನೂತನ ನವ ದಂಪತಿ ಗಳು ಅನ್ಯೂನ್ಯವಾಗಿ ಬಾಳ್ವೆ ಮಾಡುವ ಮೂಲಕ ಆದರ್ಶ ದಂಪತಿಗಳಾಗಿ. ಮಲೆ ಮಹದೇಶ್ವರ ಬೆಟ್ಟದಲ್ಲಿ ವಿವಾಹವಾದ ವಧು-ವರರು ಬದುಕಿನಲ್ಲಿ ಚೆನ್ನಾಗಿ ಬಾಳುತ್ತಿರುವ ಪ್ರತೀತಿ ಇದೆ. ಇದನ್ನು ಕಾಪಾ ಡಿಕೊಂಡು ಹೋಗಬೇಕು. ಗಂಡು ಮಕ್ಕ ಳಿಗೆ ಇಲ್ಲಿಯವರೆಗೆ ದುಶ್ಚಟ ಹಾಗೂ ದುರ್ಬುದ್ಧಿ ಗುಣಗಳಿದ್ದರೆ ಅವುಗಳನ್ನು ಮಾದಪ್ಪನ ಸನ್ನಿಧಿಯಲ್ಲಿ ಬಿಟ್ಟು ಹೊಸ ಮನುಷ್ಯರಾಗಿ. ಹೆಣ್ಣು ಮಕ್ಕಳು ಗಂಡನ ಜೊತೆ ಪ್ರೀತಿ ವಿಶ್ವಾಸದ ಜೊತೆಗೆ ಅತ್ತೆ ಮಾವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಸಾಮರಸ್ಯದಿಂದ ಮಾತ್ರ ಬಾಳು ಹಸ ನಾಗುತ್ತದೆ ಎಂದು ಹೇಳಿದರು.

ಪ್ರಾಧಿಕಾರ ರಚನೆ ಆದ ನಂತರ ಮಲೆ ಮಹದೇಶ್ವರ ಬೆಟ್ಟದಲ್ಲಿ ಒಳ್ಳೆಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಾ ಬಂದಿವೆ. 90 ವಸತಿ ಗೃಹ ನಿರ್ಮಾಣ, ಕಾಲ್ನಡಿಗೆಯಲ್ಲಿ ಬರುವ ಪಾದಯಾತ್ರಿಗಳಿಗೆ ಡಾರ್ಮೆಂ ಟರಿ ನಿರ್ಮಾಣ ಸೇರಿದಂತೆ ಇನ್ನು ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳ ಲಾಗಿದೆ. ಮಹದೇಶ್ವರ ಬೆಟ್ಟ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನಂತರ ಸಾಲೂರು ಮಠದ ಗುರು ಸ್ವಾಮಿಗಳು ಮಾತನಾಡಿ, ಮಲೆಮಹದೇ ಶ್ವರ ಬೆಟ್ಟದಲ್ಲಿ ಸುಮಾರು ಮೂರು ದಶಕ ಗಳಿಂದ ಮಾದಪ್ಪನ ಸನ್ನಿಧಿಯಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದು, ಈ ಬಾರಿಯ ನೂತನ ಪ್ರಾಧಿಕಾರದ ಕಾರ್ಯದರ್ಶಿಗಳಾದ ರೂಪರವರು ತಾವೇ ಖುದ್ದು ನವ ವಧು ಗಳಿಗೆ ಉತ್ತಮ ಗುಣಮಟ್ಟದ ಸೀರೆಯನ್ನು ಖರೀದಿಸಿ ತಂದಿದ್ದಾರೆ. ನೂತನ ದಂಪತಿ ಗಳು ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ತಂದೆಯೇ ಈಶ್ವರ ತಾಯಿಯೇ ಪಾರ್ವತಿ ಎಂದ ಅವರು, ನವ ವಧುವರರಿಗೆ ಶುಭವಾಗಲಿ ಎಂದು ಆಶೀರ್ವಚನ ನೀಡಿದರು. ಮಲೆ ಮಹ ದೇಶ್ವರ ಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ಜೆ.ರೂಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತುಬಾರದ (ವಿಕಲಚೇತನ) ಒಂದು ಜೋಡಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದ ಸತ್ಯರಾಜು ಹಾಗೂ ಸುನಿತ ಮಾತು ಬಾರದ ನವ ದಂಪಂತಿಗಳಿಗೆ ಗಣ್ಯರು ಆಶೀರ್ವದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ನೂತನ ವಧು ವರರಿಗೆ ಮಲೆ ಮಹ ದೇಶ್ವರ ಭಾವ ಚಿತ್ರವಿರುವ ನೆನಪಿನ ಕಾಣ ಕೆಯನ್ನು ಗಣ್ಯರು ವಿತರಿಸಿದರು.
ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಶಿವಮ್ಮಕೃಷ್ಣ, ತಾಪಂ ಅಧ್ಯಕ್ಷ ರಾಜು, ಸದಸ್ಯ ಹಲಗತಂಬಡಿ, ಗ್ರಾಪಂ ಅಧ್ಯಕ್ಷೆ ರುಕ್ಮಿಣ , ಮಲೆಮಹದೇಶ್ವರ ಬೆಟ್ಟ ಪ್ರಾಧಿ ಕಾರದ ಸದಸ್ಯರಾದ ಡಿ.ದೇವರಾಜು, ಕಾವೇರಿ, ಜವರೇಗೌಡ, ಮಹದೇವಪ್ಪ, ಹನೂರು ವಿಶೇಷ ತಹಶೀಲ್ದಾರ್ ಮಹ ದೇವಸ್ವಾಮಿ, ಮ.ಮ.ಬೆಟ್ಟ ಪ್ರಾಧಿಕಾರದ ಉಪ ಕಾರ್ಯದರ್ಶಿ ರಾಜಶೇಖರಮೂರ್ತಿ, ಪ್ರಾಧಿಕಾರದ ಇನ್ನಿತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ನೂತನ ವಧು- ವರರು, ಸಾರ್ವಜನಿಕರು ಇದ್ದರು.

Translate »