Tag: Male Mahadeshwara Hills

ಮಾದಪ್ಪನ ಯುಗಾದಿ ಜಾತ್ರೆಗೆ ಪ್ರವಾಸಿಗರ ನಿರ್ಬಂಧ
ಚಾಮರಾಜನಗರ

ಮಾದಪ್ಪನ ಯುಗಾದಿ ಜಾತ್ರೆಗೆ ಪ್ರವಾಸಿಗರ ನಿರ್ಬಂಧ

April 5, 2021

ಹನೂರು, ಏ.4(ಸೋಮು)-ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಸ್ವಾಮಿ ಬೆಟ್ಟದಲ್ಲಿ ಈ ಬಾರಿಯ ಯುಗಾದಿ ಜಾತ್ರೆಯನ್ನು ಅತ್ಯಂತ ಸಾಂಪ್ರದಾಯಿಕ ವಾಗಿ ಮತ್ತು ಸ್ಥಳೀಯವಾಗಿ ನಡೆಸಲು ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ. ರಾಜ್ಯದಲ್ಲಿ ಕೊರೊನಾ 2ನೇ ಅಲೆ ಭೀತಿ ಉಂಟಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಉಲ್ಬಣವಾಗುತ್ತಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಏ. 10ರಿಂದ 13ರವರೆಗೆ ನಡೆಯುವ ಯುಗಾದಿ ಜಾತ್ರಾ ಮಹೋತ್ಸವದ ವೇಳೆಯಲ್ಲಿ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸುವಂತೆ ಶ್ರೀಮಲೆ ಮಹದೇಶ್ವರ…

ಮಲೆಮಹದೇಶ್ವರಬೆಟ್ಟ ಇನ್ನು ಮುಂದೆ ಹುಲಿ ಸಂರಕ್ಷಣಾ ವಲಯ
ಚಾಮರಾಜನಗರ, ಮೈಸೂರು

ಮಲೆಮಹದೇಶ್ವರಬೆಟ್ಟ ಇನ್ನು ಮುಂದೆ ಹುಲಿ ಸಂರಕ್ಷಣಾ ವಲಯ

January 11, 2019

ಚಾಮರಾಜನಗರ: ಹುಲಿ ಸಂರಕ್ಷಿತ ಮೀಸಲು ಅರಣ್ಯವಾಗಿ ಜಿಲ್ಲೆಯ ಪ್ರಸಿದ್ಧ ವನ್ಯಧಾಮ ಮಹದೇಶ್ವರ ಬೆಟ್ಟವನ್ನು ಘೋಷಿಸಲಾಗಿದೆ. ಈ ಪ್ರಸ್ತಾಪಕ್ಕೆ ಕೇಂದ್ರ ಅನುಮೋದನೆ ನೀಡಿದರೆ ಜಿಲ್ಲೆಯು ಮೂರು ಹುಲಿ ರಕ್ಷಿತಾರಣ್ಯ ವನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದರೊಂದಿಗೆ ರಾಜ್ಯದಲ್ಲಿ 6 ಹುಲಿ ಸಂರಕ್ಷಿತ ಅಭಯಾರಣ್ಯಗಳಿವೆ. 960 ಚ.ಕಿ.ಮೀ. ವ್ಯಾಪ್ತಿಯ ಮಲೆಮಹದೇಶ್ವರ ವನ್ಯಧಾಮವನ್ನು ಹುಲಿ ಮೀಸಲು ಅರಣ್ಯ ಎಂದು ಘೋಷಿಸಬೇಕು ಎಂದು ಬೆಂಗಳೂರಿನಲ್ಲಿ ಇತ್ತೀಚೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಈ ನಿರ್ಣಯವನ್ನು ಕೇಂದ್ರ…

ಮಹದೇಶ್ವರ ಬೆಟ್ಟ ಸುತ್ತಮುತ್ತಲ ಕುಗ್ರಾಮಗಳಿಗೆ ವೈರ್‍ಲೆಸ್ ಭಾಗ್ಯ
ಮೈಸೂರು

ಮಹದೇಶ್ವರ ಬೆಟ್ಟ ಸುತ್ತಮುತ್ತಲ ಕುಗ್ರಾಮಗಳಿಗೆ ವೈರ್‍ಲೆಸ್ ಭಾಗ್ಯ

November 19, 2018

ಮೈಸೂರು: ವನ್ಯಜೀವಿ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಡಂಚಿನ ಗ್ರಾಮಗಳ ಜನರ ವಿಶ್ವಾಸ ಗಳಿಸುವುದರೊಂದಿಗೆ ಗ್ರಾಮಗಳಿಗೆ ಪ್ರಾಣಿಗಳು ನುಗ್ಗಿದ ಮಾಹಿತಿಯನ್ನು ತ್ವರಿತಗತಿಯಲ್ಲಿ ಪಡೆದು ಕೊಳ್ಳುವುದಕ್ಕಾಗಿ ವೈರ್‍ಲೆಸ್ ಅನ್ನು ನೀಡಲು ಮುಂದಾಗಿದೆ. ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ಕಳೆದ ವರ್ಷ ಸೂಕ್ಷ್ಮ ಪರಿಸರ ವಲಯ ಎಂದು ಘೋಷಣೆಯಾಗುತ್ತಿದ್ದಂತೆ ಮಲೆ ಮಹದೇಶ್ವರ ಬೆಟ್ಟದ ವನ್ಯಧಾಮದ ಸುತ್ತಲೂ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಸುಮಾರು 35 ಗ್ರಾಮಗಳು ಸಂಪರ್ಕದ ಕೊರತೆ ಎದುರಿಸುತ್ತಿವೆ. ಚಂಗಡಿ, ಪೊನ್ನಾಚಿ,…

ಮಲೈಮಹದೇಶ್ವರ ಬೆಟ್ಟದಲ್ಲಿ ವಿಜೃಂಭಣೆಯ ರಥೋತ್ಸವ
ಚಾಮರಾಜನಗರ

ಮಲೈಮಹದೇಶ್ವರ ಬೆಟ್ಟದಲ್ಲಿ ವಿಜೃಂಭಣೆಯ ರಥೋತ್ಸವ

November 9, 2018

ಹನೂರು: ತಾಲೂಕಿನ ಮಲೈ ಮಲೇಮಹದೇಶ್ವರ ಬೆಟ್ಟದಲ್ಲಿ ದೀಪಾ ವಳಿ ಹಬ್ಬದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಮಹಾರಥೋತ್ಸವ ವಿಧಿ ವಿದಾನಗಳ ಪೂಜಾ ಕಾರ್ಯಗಳು ಜರುಗಿದವು. ಲಕ್ಷಾಂತರ ಭಕ್ತರು ವಿಜೃಂಭಣೆಯಿಂಧ ನಡೆದ ಮಹಾರಥೋತ್ಸವಕ್ಕೆ ಸಾಕ್ಷಿಯಾದರು. ಬೆಳಿಗ್ಗೆ 4 ಗಂಟೆಯಿಂದ ಮಹದೇಶ್ವರ ಸ್ವಾಮಿಗೆ ಅಭಿಷೇಕ, ಬಿಲ್ವಾರ್ಚನೆ, ಪೂಜಾ ಕಾರ್ಯಗಳು ಜರುಗಿದವು. ಬೇಡಗಂಪಣ ಜನಾಂಗದ 101 ಹೆಣ್ಣು ಮಕ್ಕಳು ಕಳಸ ಹಿಡಿದು ಆರತಿ ಎತ್ತಿ ತೇರಿಗೆ ಸ್ವಾಗತಿಸಿ ದರು. ಬಳಿಕ ರಥೋತ್ಸವದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ…

ಮಾದಪ್ಪನ ಸನ್ನಿಧಿಯಲ್ಲಿ ಮಹಾಲಯ ಪರ್ವ
ಚಾಮರಾಜನಗರ

ಮಾದಪ್ಪನ ಸನ್ನಿಧಿಯಲ್ಲಿ ಮಹಾಲಯ ಪರ್ವ

October 9, 2018

ಹನೂರು:  ಸುಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಸೋಮವಾರ ವಿಜೃಂಭಣೆಯಿಂದ ಜರುಗಿತು. ಭಾನುವಾರ ರಾತ್ರಿ ಹಾಗೂ ಇಂದು ದೇವಸ್ಥಾನ ಮುಂಭಾಗ ಹಾಗೂ ರಂಗ ಮಂದಿರ ವಿವಿಧೆಡೆ ಬಿಡಾರ ಹೂಡಿದ್ದ ಭಕ್ತರು ಮಾದಪ್ಪನ ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದ ಭಕ್ತರನ್ನು ರಂಜಿಸಿದರು. ಬೆಳಿಗ್ಗೆಯಿಂದಲೇ ಲಕ್ಷ ಬಿಲ್ವಾರ್ಚನೆ ವಿಶೇಷ ಪೂಜೆ ಧಾರ್ಮಿಕ ವಿಧಿವಿಧಾನ ಗಳೊಂದಿಗೆ ಜರುಗಿದವು. ಹರಕೆ ಹೊತ್ತ ಭಕ್ತರು ಹುಲಿವಾಹನ, ಬಸವವಾಹನ, ರುದ್ರಾಕ್ಷಿ ಮಂಟಪ ಉತ್ಸವಗಳನ್ನು ನೆರ ವೇರಿಸಿ ಇಷ್ಟಾರ್ಥ ಸಿದ್ಧಿಗಾಗಿ…

ಮಹದೇಶ್ವರ ಬೆಟ್ಟದಲ್ಲಿ ಮಹಾಲಯ, ದಸರಾ, ದೀಪಾವಳಿ ಜಾತ್ರಾ ಮಹೋತ್ಸವ
ಚಾಮರಾಜನಗರ

ಮಹದೇಶ್ವರ ಬೆಟ್ಟದಲ್ಲಿ ಮಹಾಲಯ, ದಸರಾ, ದೀಪಾವಳಿ ಜಾತ್ರಾ ಮಹೋತ್ಸವ

October 6, 2018

ಚಾಮರಾಜನಗರ:  ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿ ಮಲೆಮಹದೇಶ್ವರ ಸ್ವಾಮಿಯ ಮಹಾಲಯ ಜಾತ್ರಾ ಮಹೋತ್ಸವವು ಅ.6 ರಿಂದ 9ರವರೆಗೆ, ದಸರಾ ಜಾತ್ರಾ ಮಹೋತ್ಸವವು ಅ.17 ರಿಂದ 19ರವರೆಗೆ ಹಾಗೂ ನವೆಂಬರ್ 5 ರಿಂದ 8ರವರೆಗೆ ದೀಪಾವಳಿ ಜಾತ್ರಾ ಮಹೋತ್ಸವವು ನಡೆಯಲಿದೆ. ಮೊದಲ ಕಾರ್ತೀಕ ಸೋಮವಾರ ಪೂಜೆಗಳು ನವೆಂಬರ್ 11, 12, ಎರಡನೇ ಕಾರ್ತೀಕ ಸೋಮವಾರ 18, 19, 3ನೇ ಕಾರ್ತೀಕ ಸೋಮವಾರ 25 ರಿಂದ 28, 4ನೇ ಕಾರ್ತೀಕ ಸೋಮವಾರವಾದ ಡಿಸೆಂಬರ್ 2 ಹಾಗೂ 3ರಂದು…

ಮಲೈಮಹದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ ವಿಶೇಷ ಪೂಜೆ
ಚಾಮರಾಜನಗರ

ಮಲೈಮಹದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ ವಿಶೇಷ ಪೂಜೆ

September 11, 2018

ಹನೂರು:  ಸಮೀಪದ ಮಲೈಮಹದೇಶ್ವರ ಬೆಟ್ಟದಲ್ಲಿ ಶ್ರಾವಣ ಮಾಸದ ಕುಂಭಾಷೇಕ ಹಾಗೂ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕೈಂಕಾರ್ಯಗಳು ಭಾನುವಾರ ವಿಜೃಂಭಣೆಯಿಂದ ಜರುಗಿತು. ಭಕ್ತರು ದೇವಸ್ಥಾನ ಮುಂಭಾಗ ಹಾಗೂ ರಂಗಮಂದಿರ ವಿವಿಧೆಡೆ ಬಿಡಾರ ಹೂಡಿದ್ದ ಭಕ್ತರು ಮಾದಪ್ಪನ ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದ ಭಕ್ತರನ್ನು ರಂಜಿಸಿದರು. ಬೆಳಿಗ್ಗೆಯಿಂದಲೇ ದೇವಸ್ಥಾನ ಪ್ರಧಾನ ಅರ್ಚಕರು ಸೇರಿದಂತೆ ಬೇಡಗಂಫಣ 108 ಮಕ್ಕಳು ಬಿಲ್ವಾರ್ಚನೆ ಅಭಿಷೇಕ ಮಹಾಮಂಗಳಾರತಿ ಪೂಜಾ ಕಾರ್ಯಗಳು ವಿಧಿವಿಧಾನಗಳೊಂದಿಗೆ ಜರುಗಿದವು. ಹರಕೆ ಹೊತ್ತ ಭಕ್ತರು ಹುಲಿವಾಹನ, ಬಸವವಾಹನ, ರುದ್ರಾಕ್ಷಿ ಮಂಟಪ ಉತ್ಸವಗಳಲ್ಲಿ…

ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ನೌಕರರಿಗೆ ತರಬೇತಿ
ಚಾಮರಾಜನಗರ

ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ನೌಕರರಿಗೆ ತರಬೇತಿ

September 7, 2018

ಹನೂರು: ಮಲೆಮಹ ದೇಶ್ವರಬೆಟ್ಟದಲ್ಲಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೌಕರರಿಗೆ ತರಬೇತಿ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಲೆಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿ ಕಾರದ ವತಿಯಿಂದ ಪ್ರಾಧಿಕಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಕಛೇರಿಯ ಕಾರ್ಯ ವಿಧಾನ, ವಿಷಯ ನಿರ್ವಾಹಕರ ಜವಾಬ್ದಾರಿ, ಟಿಪ್ಪಣಿ ತಯಾರಿಕೆ, ಆಡಳಿತ ಭಾಷೆ ಕನ್ನಡ, ದಾಖಲೆಗಳ ನಿರ್ವಾಹಣೆ, ಕೆಸಿಎಸ್ 1966ರ ನಿಯಾಮಾವಳಿಗಳು, ಮಾಹಿತಿಹಕ್ಕು ಅಧಿನಿಯಮ, ಅರ್ಜಿಗ ಳನ್ನು ದಾಖಲಿಸುವ ವಿಧಾನ, ಟೆಂಡರ್, ಇ ಸೇವಾ ಪಕ್ಷಿನೋಟ ಮುಂತಾದ ವಿಷಯ ಗಳ ಕುರಿತು ತರಬೇತಿ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ…

ಮಲೆಮಹದೇಶ್ವರ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ ದಾಂಪತ್ಯಕ್ಕೆ ಕಾಲಿಟ್ಟ 60 ನವ ಜೋಡಿಗಳು
ಚಾಮರಾಜನಗರ

ಮಲೆಮಹದೇಶ್ವರ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ ದಾಂಪತ್ಯಕ್ಕೆ ಕಾಲಿಟ್ಟ 60 ನವ ಜೋಡಿಗಳು

July 2, 2018

ಹನೂರು:  ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಸಲಾಗುವ ಉಚಿತ ಸಾಮೂಹಿಕ ವಿವಾಹ ಕಾರ್ಯ ಗಳನ್ನು ಮೂರು ತಿಂಗಳಿಗೆ ಒಮ್ಮೆ ನಡೆಸಿದರೆ ಇನ್ನೂ ಅನೇಕ ಜನರಿಗೆ ಅನುಕೂಲ ವಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅಭಿಪ್ರಾಯಪಟ್ಟರು. ಮಲೆಮಹದೇಶ್ವರ ಬೆಟ್ಟದಲ್ಲಿ ಮಹ ದೇಶ್ವರ ಬೆಟ್ಟ ಪ್ರಾಧಿಕಾರದ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಅವರು ಮಾತನಾಡಿದರು. ವಿವಾಹ ಮಾಡಲು ಬಡವರು ಕಲ್ಯಾಣ ಮಂಟಪಗಳಿಗೆ ಹಾಗೂ ಊಟೋಪಚಾ ರಕ್ಕೆ ಸಾಕಷ್ಟು ಹಣ ವ್ಯಯಿಸಬೇಕಾಗುತ್ತದೆ. ಈ ರೀತಿಯ ದುಂದು ವೆಚ್ಚದಿಂದ…

ನಾಳೆ ಮಲೆಮಹದೇಶ್ವರ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ
ಚಾಮರಾಜನಗರ

ನಾಳೆ ಮಲೆಮಹದೇಶ್ವರ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ

June 30, 2018

ಚಾಮರಾಜನಗರ: ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಉಚಿತ ಸಾಮೂಹಿಕ ವಿವಾಹ ಮಹೋತ್ಸವವು ಜುಲೈ 1ರಂದು ಬೆಳಿಗ್ಗೆ 10 ರಿಂದ 10.45 ಗಂಟೆಯವರೆಗೆ ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರಸ್ವಾಮಿ ದೇವಸ್ಥಾನದ ರಂಗಮಂದಿರ ಆವರಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

1 2
Translate »