ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ನೌಕರರಿಗೆ ತರಬೇತಿ
ಚಾಮರಾಜನಗರ

ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ನೌಕರರಿಗೆ ತರಬೇತಿ

September 7, 2018

ಹನೂರು: ಮಲೆಮಹ ದೇಶ್ವರಬೆಟ್ಟದಲ್ಲಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೌಕರರಿಗೆ ತರಬೇತಿ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮಲೆಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿ ಕಾರದ ವತಿಯಿಂದ ಪ್ರಾಧಿಕಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಕಛೇರಿಯ ಕಾರ್ಯ ವಿಧಾನ, ವಿಷಯ ನಿರ್ವಾಹಕರ ಜವಾಬ್ದಾರಿ, ಟಿಪ್ಪಣಿ ತಯಾರಿಕೆ, ಆಡಳಿತ ಭಾಷೆ ಕನ್ನಡ, ದಾಖಲೆಗಳ ನಿರ್ವಾಹಣೆ, ಕೆಸಿಎಸ್ 1966ರ ನಿಯಾಮಾವಳಿಗಳು, ಮಾಹಿತಿಹಕ್ಕು ಅಧಿನಿಯಮ, ಅರ್ಜಿಗ ಳನ್ನು ದಾಖಲಿಸುವ ವಿಧಾನ, ಟೆಂಡರ್, ಇ ಸೇವಾ ಪಕ್ಷಿನೋಟ ಮುಂತಾದ ವಿಷಯ ಗಳ ಕುರಿತು ತರಬೇತಿ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡಿದ ಮಲೆಮಹದೇಶ್ವರಸ್ವಾಮಿ ಅಭಿ ವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕೆ.ಎಂ. ಗಾಯತ್ರಿ ನಾನು ಪ್ರಾಧಿಕಾರದ ಅಧಿಕಾರ ವಹಿಸಿಕೊಂಡ ಮೇಲೆ ನೀಡುತ್ತಿರುವ ಎರ ಡನೇ ತರಬೇತಿ ಇದಾಗಿದೆ. ನಮ್ಮ ನೌಕ ರುಗಳಿಗೆ ತರಬೇತಿ ನೀಡಬೇಕಾದರೆ ಶ್ರಾವಣ ಮಾಸ ಮಾತ್ರ ಸೂಕ್ತ. ಏಕೆಂದರೆ ಶ್ರಾವಣ ಮಾಸದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇರುವುದರಿಂದ ಈ ಸಮಯವನ್ನು ಆರಿ ಸಿಕೊಳ್ಳಲಾಗಿದೆ ಎಂದರು.

ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಶಿಸ್ತುಬದ್ಧ ಆಡಳಿತ ವ್ಯವಸ್ಥೆಯನ್ನು ಅಳವಡಿಸಿ ಕೊಂಡರೆ ಉತ್ತಮ. ನೀವು ಮುಜರಾಯಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತಿದ್ದ ಪದ್ಧತಿಗಿಂತಲೂ ಪ್ರಾಧಿಕಾರದಲ್ಲಿ ವಿಭಿನ್ನ ವಾದ ಪದ್ಧತಿಗಳಿವೆ. ಆದುದರಿಂದ ತರ ಬೇತಿ ಕಾರ್ಯಕ್ರಮ ನಿಮಗೆ ಅತ್ಯವಶ್ಯಕ ವಾಗಿದೆ. ತರಬೇತಿಯನ್ನು ಪಡೆದರೆ ದೇವಾ ಲಯಕ್ಕೆ ಬರುವಂತಹ ಮಹಿಳಾ ಭಕ್ತರಲ್ಲಿ ನಡೆದುಕೊಳ್ಳುವ ನಡವಳಿಕೆ, ಭಕ್ತರ ಮೂಲ ಭೂತ ಸೌಲಭ್ಯಗಳ ಸೇವೆಗಳನ್ನು ತಿಳಿದು ಕೊಳ್ಳಬಹುದು ಎಂದು ತಿಳಿಸಿದರು.
ನಂತರ ಮಾತನಾಡಿದ ನಿವೃತ್ತ ಪ್ರಾಚಾರ್ಯ ಕೆ.ಎಲ್.ಪ್ರಕಾಶ್ ಸರ್ಕಾರಿ ಅಧಿಕಾರಿಗಳಿಗೆ ಬೇಕಾಗುವಂತಹ ತರಬೇತಿಯನ್ನು ನೀಡುವುದು ಸಂಸ್ಥೆಯ ನಿಯಮವಾಗಿರುತ್ತದೆ. ಅಧಿಕಾರಿಗಳು ಖುದ್ದು ಭೇಟಿಯಾಗಿ ತರಬೇತಿಯನ್ನು ನೀಡಿದರೆ ತಮ್ಮ ಕ್ಷೇತ್ರದ ಕುಂದು ಕೊರ ತೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ತಮ್ಮ ತಪ್ಪಿನ ಬಗ್ಗೆ ಅರಿವು ಮೂಡಿಸಲು ಸಹಾಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಗಳಾದ ನಿವೃತ್ತ ಸಹಾಯಕ ಖಜಾನಾ ಧಿಕಾರಿ ರವೀಂದ್ರನಾಥ್, ರಾಮನ್ ಏಟಿ ಸಲ್ಯೂಷನ್ಸ್ನ ಸೀನಿಯರ್ ಮ್ಯಾನೇಜರ್ ಜತೇಶ್ ಪವಾರ್, ನಿವೃತ್ತ ತಹಶೀಲ್ದಾರ್ ರವೀಂದ್ರ ನಾಥ್, ಕುಮಾರಸ್ವಾಮಿ, ಪ್ರಾಧಿ ಕಾರದ ಉಪ ಕಾರ್ಯದರ್ಶಿ ರಾಜ ಶೇಖರ್ ಮೂರ್ತಿ, ಅಧೀಕ್ಷಕ ಬಸವ ರಾಜು, ಮಹಾದೇವಸ್ವಾಮಿ, ದೇವಸ್ಥಾ ನದ ಸಿಬ್ಬಂದಿ ವರ್ಗ ಹಾಜರಿದ್ದರು.

Translate »