ಕಾಂಗ್ರೆಸ್ ಸದಸ್ಯರಿಗೆ ಶಾಸಕರ ಸನ್ಮಾನ
ಚಾಮರಾಜನಗರ

ಕಾಂಗ್ರೆಸ್ ಸದಸ್ಯರಿಗೆ ಶಾಸಕರ ಸನ್ಮಾನ

September 7, 2018

ಚಾಮರಾಜನಗರ:  ನಗರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ವಿಜೇತರಾದ ನೂತನ ಸದಸ್ಯರನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟೆ ನಗರದ ಕಾಂಗ್ರೆಸ್ ಕಛೇರಿಯಲ್ಲಿ ಅಭಿನಂದಿಸಿದರು.

ನಂತರ ಮಾತನಾಡಿದ ಅವರು, ನಗರಸಭೆಯ 8 ವಾರ್ಡ್‍ಗಳಲ್ಲಿ ಕಾಂಗ್ರೆಸ್ ಪಕ್ದದ ಅಭ್ಯರ್ಥಿ ಗಳು ಗೆಲುವು ಸಾಧಿಸಿರುವುದು ಸಂತಸ ತಂದಿದೆ. ಚುನಾಯಿತರಾದ ಸದಸ್ಯರೆಲ್ಲರೂ ತಾವು ಆಯ್ಕೆಗೊಂಡ ವಾರ್ಡ್‍ಗಳ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ಮತದಾರ ಪ್ರಭುಗಳು ನೀಡಿರುವ ತೀರ್ಪನ್ನು ಪ್ರತಿಯೊಬ್ಬರು ಗೌರವಿಸಿ ನಾಗರಿಕರ ಕಷ್ಟ-ಕರ್ಪಣ್ಯಗಳಿಗೆ ಸ್ಪಂದಿಸಿ ಸರ್ಕಾರದಿಂದ ದೂರೆಯುವ ಸವಲತ್ತುಗಳನ್ನು ತಲುಪಿಸುವುದೇ ಜನಪ್ರತಿನಿಧಿಯ ಆದ್ಯ ಕರ್ತವ್ಯವಾಗಬೇಕು. ಈ ಮೂಲಕ ಪಟ್ಟಣವನ್ನು ಮತ್ತಷ್ಟು ಅಭಿ ವೃದ್ಧಿಗೊಳಿಸಲು ಎಲ್ಲರ ಸಹಕಾರ ಪಡೆದು ಮುಂದುವರಿಯಬೇಕೆಂದು ತಿಳಿಸಿದರು. ನೂತನ ನಗರಸಭೆ ಸದಸ್ಯರಾದ ಚಿನ್ನಮ್ಮ, ಕಲಾವತಿ, ಚಂದ್ರಕಲಾ, ನೀಲಮ್ಮ, ಭಾಗ್ಯ ಶಾಂತಿ, ಕೆಟಿಆರ್ ಹಾಗೂ ಆರ್.ಪಿ.ನಂಜುಂಡಸ್ವಾಮಿ ಇವರನ್ನು ಸಚಿವರು ಅಭಿನಂಧಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಜ್ಗರ್ ಮುನ್ನ ಕೆಪಿಸಿಸಿ ಸದಸ್ಯ ಸೈಯದ್ ರಫಿ, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ತಾಲೂಕು ಪಂಚಾಯಿತಿ ಸದಸ್ಯ ಮಹದೇವಶೆಟ್ಟೆ, ನಾಗರಾಜು, ನಸ್ರುಲ್ಲಾಖಾನ್, ಮಹದೇವಯ್ಯ, ನಯಾಜ್, ಕೆ.ಟೆ.ನಾಗಶೆಟ್ಟೆ, ಶ್ರೀಕಾಂತ್, ಪಕ್ಷದ ಕಾರ್ಯಕರ್ತರು ಇದ್ದರು.

Translate »