ಪ್ರತಿಭೆ ಅನಾವರಣಕ್ಕೆ ಯುವಜನೋತ್ಸವ ಸೂಕ್ತ ವೇದಿಕೆ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯ
ಚಾಮರಾಜನಗರ

ಪ್ರತಿಭೆ ಅನಾವರಣಕ್ಕೆ ಯುವಜನೋತ್ಸವ ಸೂಕ್ತ ವೇದಿಕೆ: ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯ

November 21, 2018

ಚಾಮರಾಜನಗರ: ಯುವಜನರಲ್ಲಿನ ಕಲಾ ಪ್ರತಿಭೆಯನ್ನು ಪ್ರದರ್ಶಿಸಲು ಯುವ ಜನೋತ್ಸವ ಸೂಕ್ತ ವೇದಿಕೆಯಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವ ಜೊತೆಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಹಿಂದು ಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಂಯುಕ್ತ ಯುವಜನ ಸಂಘದ ಆಶ್ರ ಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚಾಮರಾಜನಗರ ಜಿಲ್ಲೆ ಕಲೆಗಳ ತವರೂರು. ಮಹದೇಶ್ವರರು, ಮಂಟೇಸ್ವಾಮಿ ಅಂತಹ ಪವಾಡ ಪುರುಷರು ನಡೆದಾಡಿದ ಪೂಣ್ಯಭೂಮಿ ಇದು. ಯುವ ಕಲಾಪ್ರತಿಭೆಗಳು ಇಲ್ಲಿನ ಜಾನಪದ ಸೊಗ ಡನ್ನು ದೇಶದ ಉದ್ದಗಲಕ್ಕೂ ಹರಡಲು ಯುವ ಜನೋತ್ಸವ ಉತ್ತಮ ವೇದಿಕೆ ಒದಗಿಸಲಿದೆ ಎಂದರು.

ಪ್ರತಿ ವರ್ಷದಂತೆ ಈ ಬಾರಿಯೂ ಯುವಜ ನೋತ್ಸವ ಆಯೋಜಿಸಲು ಸರ್ಕಾರ ಅಗತ್ಯ ಅನು ದಾನ ನೀಡಿದೆ. ಯುವಜನತೆ ತಮ್ಮ ಕಲೆಯನ್ನು ಪ್ರತಿಬಿಂಬಿಸಲು ಪ್ರೇರೇಪಿಸುವುದೇ ಯುವಜನೋ ತ್ಸವ ಕಾರ್ಯಕ್ರಮದ ಉದ್ದೇಶ. ಇಲ್ಲಿ ಆಯ್ಕೆಯಾ ದವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಹೊರಸೂಸಿ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಪುಸ್ತಕಗಳನ್ನು ಓದುವುದು ಮಾತ್ರವಲ್ಲದೆ ವಿವಿಧ ಕಲಾ ಪ್ರಕಾರಗಳಿಗೆ ಆಸಕ್ತಿ ತೋರಬೇಕು. ಪೋಷಕರು ಸಹ ಈ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಎಂತಹ ಸಂದರ್ಭದಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಸಕಾರಾತ್ಮಕ ಮನೋಭಾವನೆಯಿಂದ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಯೋಗೇಶ್ ಮಾತನಾಡಿ, ಜಿಲ್ಲೆಯಲ್ಲಿ ಯುವ ಕಲಾ ಪ್ರತಿ ಭೆಗಳಿಗೆ ಬರವಿಲ್ಲ. ಸಿದ್ದಪ್ಪಾಜಿ, ಮಹದೇಶ್ವರರ ಕಾವ್ಯಗಳ ಪ್ರಭಾವ ಇಲ್ಲಿ ಅಧಿಕವಾಗಿದೆ. ಸರ್ಕಾ ರವು ಸಹ ಕಲಾಪ್ರತಿಭೆಗಳಿಗೆ ಪ್ರೋತ್ಸಾಹ ನೀಡು ತ್ತಿದೆ. ಇಂದಿನ ವಿದ್ಯಾರ್ಥಿಗಳು, ಯುವ ಪ್ರತಿಭೆ ಗಳು ಭವ್ಯ ಭಾರತದ ಉನ್ನತಿಗೆ ಶ್ರಮಿಸಬೇಕು ಎಂದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ 2017ನೇ ಸಾಲಿ ನಲ್ಲಿ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯ ಕ್ರಮದಲ್ಲಿ ಪ್ರಶಸ್ತಿ ಪಡೆದಿದ್ದ ಕೊಳ್ಳೇಗಾಲ ತಾಲೂ ಕಿನ ಸಿದ್ದಯ್ಯನಪುರ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ಕೈಲಾಸಮೂರ್ತಿ ಮತ್ತು ತಂಡದವರು ಪ್ರಸ್ತುತಪಡಿಸಿದ ಮಲೆ ಮಹ ದೇಶ್ವರರ ಗಾಯನ ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಧರ್ಮೆಂದÀರ್ ಕುಮಾರ್‍ಮೀನಾ, ಜಿಪಂ ಸಿಇಓ ಡಾ.ಕೆ.ಹರೀಶ್‍ಕುಮಾರ್, ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಚಲುವಯ್ಯ ಉಪಸ್ಥಿತರಿದ್ದರು.

Translate »