ಮಡಿಕೇರಿಯಲ್ಲಿ ಮುಂದುವರೆದ ಎಸಿಬಿ ಬೇಟೆ: ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸಿಬಿ ಬಲೆಗೆ
ಕೊಡಗು

ಮಡಿಕೇರಿಯಲ್ಲಿ ಮುಂದುವರೆದ ಎಸಿಬಿ ಬೇಟೆ: ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸಿಬಿ ಬಲೆಗೆ

November 21, 2018

ಮಡಿಕೇರಿ:  ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಭ್ರಷ್ಟಾಚಾರ ವಿಗ್ರಹ ದಳ ಬೇಟೆ ಮುಂದುವರಿಸಿದ್ದು, ಚೆಸ್ಕಾಂ ಇಲಾಖೆಯ ಮಡಿಕೇರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಬಂಧಿಸಿದೆ. ಆ ಮೂಲಕ ಚೆಸ್ಕಾಂ ಇಲಾಖೆಗೂ ಎಸಿಬಿ ಅಧಿಕಾರಿ ಗಳು ಶಾಕ್ ನೀಡಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳದ ಉಪ ಅಧೀಕ್ಷಕ ಪೂರ್ಣ ಚಂದ್ರ ತೇಜಸ್ವಿ, ವೃತ್ತ ನಿರೀಕ್ಷಕ ಶೇಖರ್ ನೇತೃತ್ವದಲ್ಲಿ ದಾಳಿ ಸಂಘಟಿಸಿದ ಎಸಿಬಿ ಅಧಿಕಾರಿಗಳು ಚೆಸ್ಕಾಂ ಅಭಿಯಂತರ ಆಜಾದ್ ಅಲಿ ಶೌಕತ್ ಅಲಿ ದೊಡ್ಡಮನಿ ಯನ್ನು 7500 ರೂ. ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ: ಮೂಲತಃ ಚೇರಂ ಬಾಣೆಯ ಬಾಡಗ ರಸ್ತೆಯ ನಿವಾಸಿ ಮಂದಪಂಡ ಕಾವೇರಪ್ಪ ಎಂಬುವರು ತಮ್ಮ ಜಮೀನಿನಲ್ಲಿ ಕೃಷಿ ಪಂಪ್ ಸೆಟ್ ಅಳವಡಿಸಿದ್ದರು. 5 ಹೆಚ್‍ಪಿಯ ಕೃಷಿ ಪಂಪ್ ಸೆಟ್‍ಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮಡಿಕೇರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿಗೆ ಹಿಂದೆ ಅರ್ಜಿ ಸಲ್ಲಿಸಿದ್ದರು. ಆದರೆ ಇಂದಿನವರೆಗೂ ವಿದ್ಯುತ್ ಸಂಪರ್ಕ ಕಲ್ಪಿ ಸದೇ ಕಾವೇರಪ್ಪ ಅವರನ್ನು ಕಚೇರಿಗೆ ಅಲೆದಾಡಿಸಲಾಗಿತ್ತು. ಮಾತ್ರವಲ್ಲದೆ ವಿದ್ಯುತ್ ಸಂಪರ್ಕ ನೀಡಲು 7,500 ರೂ. ಹಣ ನೀಡುವಂತೆ ಚೆಸ್ಕಾಂ ಮಡಿಕೇರಿ ಉಪ ವಿಭಾಗದ ಅಭಿಯಂತರ ಆಜಾದ್ ಅಲಿ ಶೌಕತ್ ಅಲಿ ದೊಡ್ಡಮನಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮನನೊಂದ ಮಂದಪಂಡ ಕಾವೇರಪ್ಪ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಎಸಿಬಿ ಅಧಿಕಾರಿಗಳು ಚೆಸ್ಕಾಂ ಅಧಿಕಾರಿಯನ್ನು ಬಲೆಗೆ ಕೆಡ ವಲು ಮುಹೂರ್ತ ನಿಗದಿಗೊಳಿಸಿದ್ದರು. ಅದರಂತೆ ನ.20ರ ಮಧ್ಯಾಹ್ನ ಚೆಸ್ಕಾಂ ಅಧಿ ಕಾರಿ ಆಜಾದ ಅಲಿ ಶೌಕತ್ ಅಲಿ ದೊಡ್ಡ ಮನಿ ತಮ್ಮ ಕಚೇರಿಯಲ್ಲಿ ಕಾವೇರಪ್ಪ ಅವರಿಂದ 7,500 ರೂ. ಲಂಚ ಪಡೆದು ಕಚೇರಿಯಿಂದ ಹೊರ ಬರುತ್ತಿದ್ದಂತೆ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು.

ಸಂಜೆವರೆಗೂ ತನಿಖೆ ಮುಂದುವರಿಸಿದ ಎಸಿಬಿ ಅಧಿಕಾರಿಗಳು ನಂತರ ಅಭಿಯಂತರ ಆಜಾದ್ ಅಲಿ ಶೌಕತ್ ಅಲಿ ದೊಡ್ಡಮನಿ ಅವರನ್ನು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

2ನೇ ದಾಳಿ: ನ.15ರ ನಂತರ ಮಡಿಕೇರಿಯಲ್ಲಿ ನಡೆದ 2ನೇ ದಾಳಿ ಇದಾ ಗಿದ್ದು, ಮತ್ತಷ್ಟು ದಾಳಿ ನಡೆಸಲಾಗುತ್ತದೆ ಎಂದು ಎಸಿಬಿ ಉನ್ನತ ಮೂಲಗಳು ತಿಳಿಸಿವೆ. ಜಿಲ್ಲೆಯ ವಿವಿಧ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಈಗಾಗಲೇ ಸಾರ್ವಜನಿಕರಿಂದ ಹಲವು ದೂರುಗಳು ಬಂದಿದ್ದು, ಪರಿಶೀಲನೆ ನಡೆಸಿ ಮತ್ತಷ್ಟು ಕಾರ್ಯಾಚರಣೆ ನಡೆ ಸುವುದಾಗಿ ತಿಳಿಸಿದ್ದಾರೆ. ನ.15ರಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಾಯಾದೇವಿ ಗಲ ಗಲಿಯನ್ನು ಕೂಡ ಎಸಿಬಿ ಅಧಿಕಾರಿಗಳು ಬಂಧಿಸಿದ ಪ್ರಕರಣವನ್ನು ಇಲ್ಲಿ ಸ್ಮರಿಸಬಹುದು.

Translate »