ಸುಜಲ ಯೋಜನೆ ಸದ್ಬಳಕೆಗೆ ಸಚಿವ ಪುಟ್ಟರಂಗಶೆಟ್ಟಿ ಸಲಹೆ
ಚಾಮರಾಜನಗರ

ಸುಜಲ ಯೋಜನೆ ಸದ್ಬಳಕೆಗೆ ಸಚಿವ ಪುಟ್ಟರಂಗಶೆಟ್ಟಿ ಸಲಹೆ

November 18, 2018

ಚಾಮರಾಜನಗರ: ಒಣ ಭೂಮಿ ಪ್ರದೇಶ ಹಾಗೂ ಮಳೆಯಾಶ್ರಿತ ಕೃಷಿಗೆ ಸಂಬಂಧಿಸಿದಂತೆ ಆಧುನಿಕ ಮತ್ತು ವೈಜ್ಞಾನಿಕ ಮಾರ್ಗ ಅನುಸರಿಸುವ ಸುಜಲ ಯೋಜನೆಯ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಹಿಂದುಳಿದ ವರ್ಗ ಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.

ನಗರದ ಶಿವಕುಮಾರಸ್ವಾಮಿ ಭವನ ದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಕೆಡಬ್ಲ್ಯೂಡಿಡಿ (ಸುಜಲ) ಯೋಜನೆಯಡಿ ರೈತರಿಗೆ ಹಮ್ಮಿಕೊಳ್ಳಲಾ ಗಿದ್ದ ಭೂ ಸಂಪನ್ಮೂಲ ಮಾಹಿತಿ ಕಾರ್ಯಾ ಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವ ಬ್ಯಾಂಕಿನ ನೆರವಿನೊಂದಿಗೆ ಈ ಹಿಂದೆ ಕರ್ನಾಟಕ ಜಲಾನಯನ ಅಭಿ ವೃದ್ಧಿ ಯೋಜನೆ ಸುಜಲ-1 ಯೋಜನೆ ಯನ್ನು ರಾಜ್ಯದ 6 ಜಿಲ್ಲೆಗಳಲ್ಲಿ ಕೈಗೊಳ್ಳ ಲಾಗಿತ್ತು. ಸುಜಲ-3 ಯೋಜನೆಯಡಿ ಚಾಮ ರಾಜನಗರವೂ ಸೇರಿದಂತೆ ಒಟ್ಟು 11 ಜಿಲ್ಲೆ ಗಳಲ್ಲಿ 10 ಲಕ್ಷ ಹೆಕ್ಟೇರ್ ಭೂ ಪ್ರದೇಶದಲ್ಲಿ 1,931 ಕಿರು ಜಲಾನಯನ ಪ್ರದೇಶಗಳಲ್ಲಿ ವೈಜ್ಞಾನಿಕ ತಂತ್ರಜ್ಞಾನದ ಆಧಾರದ ಮೇಲೆ ಜಲಾನಯನ ಅಭಿವೃದ್ಧಿಗೊಳಿಸಲು ಕಾರ್ಯ ಕ್ರಮ ನಡೆಯುತ್ತಿದೆ ಎಂದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಸಹ ಗ್ರಾಮೀಣ ಭಾಗಗಳ ಚಟುವಟಿಕೆಗಳಿಗೆ ನೆರ ವಾಗಲಿದೆ. ಅಂತರ್ಜಲ ಅಭಿವೃದ್ಧಿಯಂತಹ ಕಾರ್ಯಕ್ರಮಗಳಿಗೆ ವಿಶೇಷ ಗಮನ ಕೊಡ ಲಾಗುತ್ತಿದೆ. ಕೃಷಿ ಹೊಂಡ, ಬದು ನಿರ್ಮಾಣ ಇತರೆ ಕೆಲಸ ನಿರ್ವಹಣೆ ಮಾಡಬಹು ದಾಗಿದೆ ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಜೆ.ಯೋಗೇಶ್ ಮಾತನಾಡಿ, ರೈತರು ಕೃಷಿ ಕಟುವಟಿಕೆಗಳ ಜತೆಯಲ್ಲಿಯೇ ಹೈನುಗಾ ರಿಕೆಯನ್ನು ಸಹ ಕೈಗೊಳ್ಳಬೇಕಿದೆ. ಇದ ರಿಂದ ಆದಾಯ ವೃದ್ಧಿಗೊಳ್ಳಲಿದೆ. ಜಿಲ್ಲೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯನ್ನು ಅನುಷ್ಠಾನ ಮಾಡಿದ ಫಲವಾಗಿ ಅಂತರ್ಜಲ ವೃದ್ಧಿಯಾಗಿದೆ. ರೈತಪರ ಕಾರ್ಯ ಕ್ರಮಗಳು ಮುಂದುವರೆದಿವೆ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಅವರು, ಯೋಜನೆ ಸಂಬಂಧ ಮಾಹಿತಿ ಕಾರ್ಡ್‍ಗಳನ್ನು ಬಿಡುಗಡೆ ಮಾಡಿದರು. ಜಂಟಿ ಕೃಷಿ ನಿರ್ದೇಶಕ ಎಂ.ತಿರುಮ ಲೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಚನ್ನಪ್ಪ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮರಗದಮಣಿ, ಸದಸ್ಯ ರಾದ ಬಿ.ಕೆ.ಬೊಮ್ಮಯ್ಯ, ಲೇಖಾ, ಕೆರೆಹಳ್ಳಿ ನವೀನ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ, ಸದಸ್ಯರಾದ ಕುಮಾರನಾಯ್ಕ, ಮಹದೇವಶೆಟ್ಟಿ, ರೇವಣ್ಣ, ಶೋಭ, ನಂದೀಶ್ ಇತರರು ಉಪಸ್ಥಿತರಿದ್ದರು.

ಒಣ ಭೂಮಿ ಪ್ರದೇಶಗಳಲ್ಲಿ ಯೋಜನೆ ಅನುಷ್ಠಾನವಾಗುತ್ತಿದೆ. ಹರವೆ ಭಾಗದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಹೆಚ್ಚು ಪರಿಣಾಮಕಾರಿಯಾಗಿ ಜಲಾನಯನ ನಿರ್ವಹಣೆ ಮಹತ್ವ ತೋರಿಸಲು ಹಾಗೂ ಮಳೆಯಾಶ್ರಿತ ಕೃಷಿ ಸಂಬಂಧಿತ ಕಾರ್ಯ ಕ್ರಮಗಳನ್ನು ಒಗ್ಗೂಡಿಸುವುದರ ಜತೆಗೆ ಆಧುನಿಕ ಮತ್ತು ವೈಜ್ಞಾನಿಕ ವಿಧಾ ನಗಳನ್ನು ಅನುಸರಿಸುವುದು ಯೋಜ ನೆಯ ಮುಖ್ಯ ಗುರಿಯಾಗಿದೆ. – ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವರು

Translate »