ಮುನಿಶ್ರೀ ಪ್ರಜ್ಞಾ ಸಾಗರ ಮಹಾರಾಜರಿಗೆ ‘ವ್ಯಾಖ್ಯಾನ ವಾಚಸ್ಪತಿ’ ಬಿರುದು
ಹಾಸನ

ಮುನಿಶ್ರೀ ಪ್ರಜ್ಞಾ ಸಾಗರ ಮಹಾರಾಜರಿಗೆ ‘ವ್ಯಾಖ್ಯಾನ ವಾಚಸ್ಪತಿ’ ಬಿರುದು

November 18, 2018

ಶ್ರವಣಬೆಳಗೊಳ: ಮುನಿ ಶ್ರೀ ಪ್ರಜ್ಞಾಸಾಗರ ಮಹಾರಾಜರು ಜೈನ ಧರ್ಮದ ಬಗ್ಗೆ ಅಪಾರ ವಿಚಾರಗಳನ್ನು ತಿಳಿದುಕೊಂಡಿದ್ದು, ಸದಾ ಹಸನ್ಮುಖಿಯಾಗಿ ಅತ್ಯಂತ ಸರಳವಾಗಿ ಎಲ್ಲರಿಗೂ ತಿಳಿಯು ವಂತೆ ಪ್ರವಚನ ನೀಡುವುದರಲ್ಲಿ ಸಿದ್ಧಹಸ್ತ ರಾಗಿದ್ದಾರೆ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಹೇಳಿದರು.

ಜೈನಕಾಶಿ ಶ್ರವಣಬೆಳಗೊಳದ ಚಾವುಂಡ ರಾಯ ಸಭಾಮಂಟಪದಲ್ಲಿ ನಡೆದ ಶ್ರೀ ತೀರ್ಥಂಕರ ಮಹಾವೀರ ತಪೋಭೂಮಿ ಮಂದಿರದ 13ನೇ ಪ್ರತಿಷ್ಠಾಪನಾ ಮಹೋ ತ್ಸವದ ಹಿನ್ನೆಲೆಯಲ್ಲಿ ಮುನಿಶ್ರೀ ಪ್ರಜ್ಞಾ ಸಾಗರ ಮಹಾರಾಜರಿಗೆ ನಡೆದ ಅಭಿನಂ ದನಾ ಸಮಾರಂಭದಲ್ಲಿ ಮಾತನಾಡಿ, 17ನೇ ವಯಸ್ಸಿಗೆ ಮುನಿದೀಕ್ಷೆ ಪಡೆದು ಅಪಾರ ಸಾಧನೆಯನ್ನು ಮಾಡಿ ಮಧ್ಯ ಪ್ರದೇಶದ ಉಜ್ಜಯನಿಯಲ್ಲಿ ಮಂದಿರ ವನ್ನು ನಿರ್ಮಾಣ ಮಾಡಿ ತಪೋಭೂಮಿ ಪ್ರಣೀತ ಎಂಬ ಗೌರವಕ್ಕೂ ಪಾತ್ರ ರಾಗಿದ್ದಾರೆ ಎಂದರು.
ನಂತರ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು “ವ್ಯಾಖ್ಯಾನ ವಾಚ ಸ್ಪತಿ” ಬಿರುದು ನೀಡಿ ಗೌರವಿಸಿದರು. ಮುನಿ ಶ್ರೀ ಪ್ರಜ್ಞಾಸಾಗರ ಮಹಾರಾಜರು ಗೌರವ ಸ್ವೀಕರಿಸಿ ಮಾತನಾಡಿ, ಮಧ್ಯಪ್ರದೇಶದ ಉಜ್ಜಯನಿಯಲ್ಲಿ ನಿರ್ಮಾಣಗೊಂಡಿದ್ದು ಕ್ಷೇತ್ರಕ್ಕೆ ಆಗಮಿಸುವ ಸಹಸ್ರಾರು ಭಕ್ತರಿಗೆ ಮುಕ್ತಿ ಮಾರ್ಗವನ್ನು ತೋರಿಸುವಂತಹ ಕಾರ್ಯಗಳನ್ನು ನಡೆಸಿಕೊಂಡು ಬರು ತ್ತಿದ್ದು ಇದರ ಶ್ರೇಯ ನನ್ನ ಗುರುಗಳಾದ ಆಚಾರ್ಯ ಶ್ರೀ ಪುಷ್ಪದಂತ ಸಾಗರ ವiಹಾ ರಜರಿಗೆ ಸಲ್ಲಬೇಕು. ಇಂದಿನ ಸಮಾರಂಭ ದಲ್ಲಿ ಶ್ರೀಗಳು ಪ್ರಶಸ್ತಿ ಪತ್ರದೊಂದಿಗೆ ಭಗವಾನ್ ಮಹಾವೀರರ ಪ್ರತಿಮೆ ಮತ್ತು ಶಾಸ್ತ್ರಗಳನ್ನು ನೀಡಿರುವುದು ಸಂತೋಷದ ವಿಷಯ ಎಂದರು.

ಈ ಸಂದರ್ಭದಲ್ಲಿ ಆಚಾರ್ಯ ಶ್ರೀ ವರ್ಧಮಾನ ಸಾಗರ ಮಹಾರಾಜರು ಪ್ರವಚನ ನೀಡಿದರು. ಆಚಾರ್ಯ ಶ್ರೀ ಸುವಿಧಿ ಸಾಗರ ಮಹಾರಾಜರು, ಆಚಾರ್ಯ ಶ್ರೀ ಅಮರಕೀರ್ತಿ ಸಾಗರ ಮಹಾರಾಜರು, ಮುನಿವೃಂದ ಮಾತಾಜಿಯವರು ಹಾಗೂ ಇತರರು ಭಾಗವಹಿಸಿದ್ದರು.

Translate »