ಬೇಲೂರಿನಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ
ಹಾಸನ

ಬೇಲೂರಿನಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

November 18, 2018

ಬೇಲೂರು: ಪಟ್ಟಣದ ಪುರಸಭೆ ಕಟ್ಟಡ ನೂರು ವರ್ಷ ಪೂರೈಸಿದ ಹಿನ್ನೆಲೆ ಯಲ್ಲಿ ಶತಮಾನೋತ್ಸವ ಭವನ ನಿರ್ಮಿ ಸಲು ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತು ವಾರಿ ಸಚಿವರಿಗೆ ಮನವಿ ಮಾಡುವುದಾಗಿ ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದರು.
ಬೇಲೂರು ಪುರಸಭೆ ಆವರಣದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿ ಸಿದ ನಂತರ ಮಾತನಾಡಿದ ಅವರು, ಪಟ್ಟಣದ ಪುರಸಭೆಗೆ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶತಮಾನೋತ್ಸವ ಸಮಾರಂಭ ವನ್ನು ಅದ್ಧೂರಿಯಾಗಿ ನಡೆಸಲು ಮುಂದಾ ಗಿದ್ದು ಇದೇ ಸಂದರ್ಭದಲ್ಲಿ ಅಂದಾಜು 5 ಕೋಟಿ ವೆಚ್ಚದಲ್ಲಿ ಶತಮಾನೋತ್ಸವ ಭವನ ನಿರ್ಮಾಣ ಮಾಡಲು ಮುಖ್ಯಮಂತ್ರಿ ಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಿಗೆ ಮನವಿ ಮಾಡುವುದಾಗಿ ಹೇಳಿದರು.

ಮುಂದಿನ ವಾರದಿಂದ ಪಟ್ಟಣದ ಎಲ್ಲಾ ವಾರ್ಡುಗಳಿಗೆ ತಾವೇ ಖುದ್ದಾಗಿ ಭೇಟಿ ನೀಡಿ ಬಡಾವಣೆಗಳ ಸಮಸ್ಯೆಯನ್ನು ಸದಸ್ಯರ ಜೊತೆಗೂಡಿ ವೀಕ್ಷಿಸಿ ಅಗತ್ಯ ಕಾಮಗಾರಿ ಗಳ ಪಟ್ಟಿಯನ್ನು ಮಾಡಲಾಗುವುದು. ಎಲ್ಲೋ ಕುಳಿತು ವಾರ್ಡಿನ ಸಮಸ್ಯೆಗಳ ಪಟ್ಟಿ ಮಾಡುವುದಕ್ಕಿಂತ ಜನತೆಯ ಬಳಿಗೆ ತೆರಳಿ ಅವರ ಆಶಯದಂತೆ ಕಾಮಗಾರಿ ಗಳನ್ನು ನಡೆಸಲಾಗುವುದು. ಇತ್ತೀಚೆಗೆ ಅಪಘಾತಗಳು ಹೆಚ್ಚಾಗುತ್ತಿದ್ದು ಅಮಾಯ ಕರು ಬಲಿಯಾಗುತ್ತಿದ್ದಾರೆ. ಪಟ್ಟಣದ ಹೆದ್ದಾರಿ ರಸ್ತೆಯನ್ನು ವಿಸ್ತೀರ್ಣಗೊಳಿಸುವ ಬಗ್ಗೆ ಪಿಡಬ್ಲ್ಯೂಡಿ, ಹೆದ್ದಾರಿ ಪ್ರಾಧಿಕಾರ, ತಹಸೀ ಲ್ದಾರ್, ಪೆÇಲೀಸ್ ಇಲಾಖೆ ಸೇರಿದಂತೆ ಅಧಿಕಾರಿಗಳ ಸಭೆ ಕರೆಯಲಾಗುವುದು.

ಪುರಸಭೆ ಅಧ್ಯಕ್ಷೆ ಭಾರತಿ ಮಾತನಾಡಿ, ಪುರಸಭಾ ನಿಧಿ 14ನೇ ಹಣಕಾಸು ಸೇರಿ ದಂತೆ ವಿವಿಧ ಮೂಲಗಳನ್ನು ಕ್ರೋಡೀ ಕರಿಸಿ 1 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಪುರಸಭೆಗೆ ಶತಮಾನೋತ್ಸವ ತುಂಬಿದ ಸಂಭ್ರಮದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ ವನ್ನು 66.20 ಲಕ್ಷ ರೂ.ಗಳಲ್ಲಿ ನಿರ್ಮಾಣ ಮಾಡಲು ಮುಂದಾಗಿದೆ. ಪುರಸಭೆಗೆ ಖಾಯಂ ಎಂಜಿನಿಯರ್ ಇಲ್ಲದೆ ತೊಂದರೆಯಾಗು ತ್ತಿದ್ದು, ಕೂಡಲೇ ನಿಯೋಜನೆ ಮಾಡು ವಂತೆ ಮನವಿ ಮಾಡಿದರಲ್ಲದೆ, ಮುಖ್ಯ ಮಂತ್ರಿ ಅನುದಾನದ ನಗರೋತ್ಥಾನ ಕಾಮಗಾರಿ ಹನ್ನೊಂದು ತಿಂಗಳ ಹಿಂದೆ ಉದ್ಘಾಟನೆಗೊಂಡರೂ ಇದುವರೆಗೂ ಆರಂಭವಾಗಿಲ್ಲ. ಕೆಲವು ವಾರ್ಡುಗಳಲ್ಲಿ ರಸ್ತೆಯನ್ನು ಅಗೆದು ಡಾಂಬರು ಹಾಕದೇ ಹಾಗೇ ಬಿಟ್ಟಿದ್ದು ಇನ್ನು ಮೂರು ದಿನದಲ್ಲಿ ಡಾಂಬರು ಹಾಕುವ ವ್ಯವಸ್ಥೆ ಮಾಡಲು ಗುತ್ತಿಗೆದಾರ ಮುಂದಾಗದಿದ್ದರೆ ಕಪ್ಪು ಪಟ್ಟಿಗೆ ಸೇರಿಸುವುದಾಗಿ ಎಚ್ಚರಿಕೆ ನೀಡಿದರು.

ಪುರಸಭೆ ಸದಸ್ಯ ಶ್ರೀನಿಧಿ ಮಾತನಾಡಿ, ಪುರಸಭೆ ವ್ಯಾಪ್ತಿಯ ವಾರ್ಡ್ 18ರಲ್ಲಿ 22 ಲಕ್ಷ ರೂ.ಗಳಲ್ಲಿ ಉದ್ಯಾನವನ, ಜೂನಿ ಯರ್ ಕಾಲೇಜು ಆಟದ ಮೈದಾನದಲ್ಲಿ ರುವ ರಂಗಮಂದಿರದ ಪಕ್ಕ ಸಾರ್ವಜನಿಕ ಶೌಚಾಲಯ ನಿರ್ಮಾಣ ಕಾಮಗಾರಿ ಮತ್ತು ವಿದ್ಯುದ್ಧೀಕರಣ ಕಾಮಗಾರಿಯನ್ನು 8.20 ಲಕ್ಷ ರೂ ವೆಚ್ಚದಲ್ಲಿ ಸಾರ್ವಜನಿಕರಿಗೆ ಲೋಕಾರ್ಪಣೆಗೊಳ್ಳಲಿದೆ ಎಂದರು.
ಸದಸ್ಯ ಗಿರೀಶ್ ಮಾತನಾಡಿ, ನಗರೋ ತ್ಥಾನ ಕಾಮಗಾರಿ ನಡೆಸಲು 7.50 ಕೋಟಿ ಅನುದಾನ ಬಿಡುಗಡೆಯಾಗಿದ್ದರೂ ಸಮರ್ಪಕ ಕೆಲಸ ನಡೆಯುತ್ತಿಲ್ಲ. ಪುರಸಭೆ ಯಲ್ಲಿ ಎಂಜಿನಿಯರ್ ಇಲ್ಲದೆ ಕೆಲವು ಕೆಲಸ ಗಳು ಕಳಪೆಯಾಗಿ ನಡೆಯುತ್ತಿದೆ. ಪುರ ಸಭಾ ಸದಸ್ಯರ ಅವಧಿ ಇನ್ನು ಕೇವಲ ಮೂರು ತಿಂಗಳು ಮಾತ್ರ ಇದ್ದು ಅಷ್ಟರೊಳಗೆ ನಗರೋತ್ಥಾನ ಕಾಮಗಾರಿಗಳನ್ನು ನಡೆಸು ವಂತೆ ಶಾಸಕರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅರುಣ್ ಕುಮಾರ್, ಸದಸ್ಯರಾದ ಗಾಯತ್ರಿ ಯೋಗಾ ಚಾರ್, ರವಿ ಅಣ್ಣೇಗೌಡ, ಮಂಜುನಾಥ್, ಪೈಂಟರ್ ರವಿ, ಮುಖ್ಯಾಧಿಕಾರಿ ಮಂಜು ನಾಥ್, ಆರೋಗ್ಯಾಧಿಕಾರಿ ವೆಂಕಟೇಶ್ ಇತರರು ಇದ್ದರು.

Translate »