ಮಹದೇಶ್ವರ ಬೆಟ್ಟದಲ್ಲಿ ಮಹಾಲಯ, ದಸರಾ, ದೀಪಾವಳಿ ಜಾತ್ರಾ ಮಹೋತ್ಸವ
ಚಾಮರಾಜನಗರ

ಮಹದೇಶ್ವರ ಬೆಟ್ಟದಲ್ಲಿ ಮಹಾಲಯ, ದಸರಾ, ದೀಪಾವಳಿ ಜಾತ್ರಾ ಮಹೋತ್ಸವ

October 6, 2018

ಚಾಮರಾಜನಗರ:  ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟದಲ್ಲಿ ಮಲೆಮಹದೇಶ್ವರ ಸ್ವಾಮಿಯ ಮಹಾಲಯ ಜಾತ್ರಾ ಮಹೋತ್ಸವವು ಅ.6 ರಿಂದ 9ರವರೆಗೆ, ದಸರಾ ಜಾತ್ರಾ ಮಹೋತ್ಸವವು ಅ.17 ರಿಂದ 19ರವರೆಗೆ ಹಾಗೂ ನವೆಂಬರ್ 5 ರಿಂದ 8ರವರೆಗೆ ದೀಪಾವಳಿ ಜಾತ್ರಾ ಮಹೋತ್ಸವವು ನಡೆಯಲಿದೆ.

ಮೊದಲ ಕಾರ್ತೀಕ ಸೋಮವಾರ ಪೂಜೆಗಳು ನವೆಂಬರ್ 11, 12, ಎರಡನೇ ಕಾರ್ತೀಕ ಸೋಮವಾರ 18, 19, 3ನೇ ಕಾರ್ತೀಕ ಸೋಮವಾರ 25 ರಿಂದ 28, 4ನೇ ಕಾರ್ತೀಕ ಸೋಮವಾರವಾದ ಡಿಸೆಂಬರ್ 2 ಹಾಗೂ 3ರಂದು ನಡೆಯಲಿವೆ.
ಎಣ್ಣೆಮಜ್ಜನ ಮತ್ತು ಅಮಾವಾಸ್ಯೆ ಕಾರ್ಯಕ್ರಮಗಳು ಡಿಸೆಂಬರ್ 5 ರಿಂದ 7 ರವರೆಗೆ ನಡೆಯಲಿದೆ ಎಂದು ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿದ್ದಾರÉ.

Translate »