ಸಾರ್ವಜನಿಕರ ಹಿತಾಸಕ್ತಿಗೆ ಪತ್ರಿಕಾ ರಂಗ ಅಗತ್ಯ
ಹಾಸನ

ಸಾರ್ವಜನಿಕರ ಹಿತಾಸಕ್ತಿಗೆ ಪತ್ರಿಕಾ ರಂಗ ಅಗತ್ಯ

October 6, 2018

ಹಾಸನ: ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ಪತ್ರಿಕಾ ರಂಗ ಅಗತ್ಯ ಎಂದು ನಗರಸಭೆ ಸದಸ್ಯ ವಾಸುದೇವ್ ತಿಳಿಸಿದರು.
ನಗರದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತ ನಾಡಿದ ಅವರು, ಸಮಾಜದಲ್ಲಿ ಪತ್ರಿಕಾ ರಂಗ ಬಹುಮಖ್ಯವಾದ ಕ್ಷೇತ್ರವಾಗಿದೆ. ತಪ್ಪನ್ನು ಪ್ರದರ್ಶಿಸಿ ಎಚ್ಚರಿಸುವ ಸಮಾಜಮುಖಿ ಕೆಲಸ ಮಾಡುತ್ತಿದೆ. ಪತ್ರಿಕೆ ಮತ್ತು ದೃಶ್ಯ ಮಾಧ್ಯಮ ಎರಡು ವಿಭಿನ್ನ ವಾಗಿದೆ. ಟಿಆರ್‍ಪಿಗಾಗಿ ದೃಶ್ಯ ಮಾಧ್ಯಮಗಳು ಜೀವನದ ಮೇಲೆ ದುಷ್ಪರಿಣಾಮ ಬೀರುವ ಸುದ್ದಿ ಗಳನ್ನು ಬಿತ್ತರಿಸುತ್ತಿವೆ ಎಂದು ವಿಷಾದಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೋದ್ಯಮವನ್ನು 4ನೇ ಅಂಗ ಎನ್ನಲಾಗಿದೆ. ಜಾಗತಿಕ ಮಟ್ಟದಲ್ಲಿ ಪ್ರತಿಯೊಂದು ರಂಗದಲ್ಲೂ ಸ್ಪರ್ಧೆ ಎಂಬುದನ್ನು ಕಾಣುತ್ತಿದ್ದೇವೆ. ಮುದ್ರಣ ಮಾಧ್ಯಮಕ್ಕಿಂತ ದಿಢೀರನೆ ರಾಜ್ಯಾದ್ಯಂತ ಪರಿಚಯವಾಗಲು ದೃಶ್ಯ ಮಾಧ್ಯಮಕ್ಕೆ ಪ್ರವೇಶ ಮಾಡಲು ಯುವ ಜನಾಂಗ ಹತೋರೆಯುತ್ತಿದೆÉ. ಮಾಧ್ಯಮ ಕ್ಷೇತ್ರದಲ್ಲಿರುವವರು ರಾಜಕೀಯ, ಕ್ರೀಡೆ, ಸಂಗೀತ, ಸಾಹಿತ್ಯ, ಸಾಂಸ್ಕøತಿಕ, ವಾಣಿಜ್ಯ, ವೈದ್ಯಕೀಯ ಹೀಗೆ ಎಲ್ಲಾ ಕ್ಷೇತ್ರಗಳನ್ನೂ ಅರಿತಿರಬೇಕಾಗುತ್ತದೆ. ದೇಶದ ಕಾನೂನು ಮತ್ತು ಸಂವಿಧಾನವನ್ನು ಹೆಚ್ಚಿನ ಜ್ಞಾನಕ್ಕಾಗಿ ಅರಿಯಬೇಕು ಎಂದ ಅವರು, ಎಲ್ಲರೂ ನಮ್ಮನ್ನು ಗೌರವಿಸಬೇಕು ಎಂಬ ಆಶಾಭಾವದಲ್ಲಿ ನವ ಪತ್ರಕರ್ತರಿದ್ದಾರೆ. ಆದರೆ ನಿಜವಾದ, ಸತ್ಯತೆ ಬರೆಯುವ ಪತ್ರಕರ್ತನ ಲಕ್ಷಣ ಇದಾಗಬಾರದು ಎಂದು ಸಲಹೆ ನೀಡಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್ ಮಾತನಾಡಿ, ಸಮಾಜದಲ್ಲಿ ನಡೆಯುವ ಸರಿ ಹಾಗೂ ತಪ್ಪುಗಳನ್ನು ನಿರ್ಧಾಕ್ಷಿಣ್ಯವಾಗಿ ಹೇಳುವ ಮಹತ್ತರ ಜವಾಬ್ದಾರಿಯನ್ನು ಮಾಧ್ಯಮ ಹೊಂದಿದೆ. ಪ್ರಜಾಪ್ರಭುತ್ವದ ಉಳಿವಿಗೆ ಪತ್ರಿಕಾ ರಂಗ ಅವಶ್ಯವಾಗಿ ಬೇಕು. ಸಮಾಜಕ್ಕೆ ಏನಾದರೊಂದು ಕೊಡುಗೆ ಸಲ್ಲಿಸಬೇಕೆಂಬ ಉತ್ಸಾಹದಿಂದ ಈ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳು ಆ ನಿಟ್ಟಿನಲ್ಲಿ ಸಾಗಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ವಾಂಟಾ ಜಿಲ್ಲಾ ಮಾಜಿ ಅಧ್ಯಕ್ಷ ಈ.ಮಂಜುನಾಥ್, ಸರ್ಕಾರಿ ಗೃಹ ವಿಜ್ಞಾನ ಕಾಲೇಜು ಪ್ರಾಂಶುಪಾಲ ಕೆ.ಟಿ.ಕೃಷ್ಣೇಗೌಡ, ಎವಿಕೆ ಕಾಲೇಜು ಕನ್ನಡ ವಿಭಾಗದ ಸಹಪ್ರಾಧ್ಯಾಪಕ ಡಾ.ಹೆಚ್.ಎಲ್.ಮಲ್ಲೇಶ್‍ಗೌಡ, ಪತ್ರಿಕೋದ್ಯಮ ವಿಭಾಗ ಉಪನ್ಯಾಸಕರಾದ ಪಿ.ರವಿಕುಮಾರ್, ಹೆಚ್.ಕೆ.ದಿಲೀಪ್‍ಕುಮಾರ್ ಇತರರಿದ್ದರು.

Translate »