ಭಾರತೀಯ ಸೇನಾ ನೇಮಕಾತಿ ರ್ಯಾಲಿಗೆ ಹೆಸರು ನೋಂದಣಿ
ಚಾಮರಾಜನಗರ

ಭಾರತೀಯ ಸೇನಾ ನೇಮಕಾತಿ ರ್ಯಾಲಿಗೆ ಹೆಸರು ನೋಂದಣಿ

October 6, 2018

ಚಾಮರಾಜನಗರ:  ಭಾರತೀಯ ಸೇನೆಗೆ ಸೋಲ್ಜರ್ ಜಿಡಿ, ಸೋಲ್ಜರ್ ಟೆಕ್, ಸೋಲ್ಜರ್ ನರ್ಸಿಂಗ್, ಸೋಲ್ಜರ್ ಅಸಿಸ್ಟೆಂಟ್, ಸೋಲ್ಜರ್ ಟ್ರೇಡ್ಸ್‍ಮ್ಯಾನ್ ಮತ್ತು ಸೋಲ್ಜರ್ ಕ್ಲರ್ಕ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅ.13 ರಿಂದ 19ರವರೆಗೆ ಮಂಡ್ಯದ ಸರ್.ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನೇಮಕಾತಿ ರ್ಯಾಲಿ ನಡೆಯಲಿದೆ.

ಅಭ್ಯರ್ಥಿಗಳು 17 1/2 ರಿಂದ 23 ವರ್ಷ ವಯೋಮಿತಿಯ ಒಳಗಿರಬೇಕು. ಎಸ್‍ಎಸ್ ಎಲ್‍ಸಿ, ಪಿಯುಸಿ (ಪಿಸಿಎಂ, ಪಿಸಿಬಿ ಮತ್ತು ಇಎನ್‍ಜಿ), ಡಿಪ್ಲೊಮಾ ಇನ್ ಎಂಜಿನಿ ಯರಿಂಗ್ (ಎಂಇ, ಇಎಲ್‍ಇ, ಎಯು, ಸಿಎಸ್, ಇ ಅಂಡ್ ಸಿ) ಅಥವಾ ಬಿಎಸ್ಸಿ ಪದವಿಯನ್ನು ಬಾಟನಿ, ಜೂಯಾಲಜಿ, ಬಯೋಸೈನ್ಸ್ ಮತ್ತು ಇಂಗ್ಲೀಷ್ ವಿಷಯಗಳಲ್ಲಿ ಉತ್ತೀರ್ಣ ರಾಗಿರಬೇಕು. ನೋಂದಣಿಗೆ ಮೂಲ ಅಂಕಪಟ್ಟಿ, ಆಧಾರ್, ಮೊಬೈಲ್ ಸಂಖ್ಯೆ, ಇತ್ತೀಚಿನ ಭಾವಚಿತ್ರ, ಇ ಮೇಲ್ ಐಡಿ, ಎನ್‍ಸಿಸಿ ಪ್ರಮಾಣ ಪತ್ರ, ಸ್ಪೋಟ್ರ್ಸ್ ಪ್ರಮಾಣ ಪತ್ರ (ಐಚ್ಚಿಕ) ಇದ್ದಲ್ಲಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಥವಾ ದೂರವಾಣಿ ಸಂಖ್ಯೆ 08226-224420 ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಎಂ.ಉಮಾ ತಿಳಿಸಿದ್ದಾರೆ.

Translate »