ಕೋಗಿಲೆಮನೆ ಅಭಿವೃದ್ಧಿಗೆ 7 ಕೋಟಿ ರೂ.;ಶಾಸಕ ಲಿಂಗೇಶ್
ಹಾಸನ

ಕೋಗಿಲೆಮನೆ ಅಭಿವೃದ್ಧಿಗೆ 7 ಕೋಟಿ ರೂ.;ಶಾಸಕ ಲಿಂಗೇಶ್

October 6, 2018

ಬೇಲೂರು:  ಕೋಗಿಲೆಮನೆ ಜಿಪಂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮೊದಲ ಹಂತವಾಗಿ 7 ಕೋಟಿ ರೂ. ಅನುದಾನ ನೀಡಿದ್ದು, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.ತಾಲೂಕಿನ ಬಿಟ್ರುವಳ್ಳಿ ಗ್ರಾಮದಲ್ಲಿ ಕಾವೇರಿ ನಿಗಮದಿಂದ 70 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ವೇದಿಕೆ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕಿನ 5 ಜಿಪಂ ಕ್ಷೇತ್ರದ ಪೈಕಿ ಕೋಗಿಲೆಮನೆ ಕ್ಷೇತ್ರವು ಅರೆಮಲೆನಾಡು ಹಾಗೂ ಬಯಲು ಪ್ರದೇಶ ಗಳನ್ನು ಒಳಗೊಂಡಿದ್ದು, ಇಲ್ಲಿಯ ತನಕ ಅಭಿವೃದ್ಧಿ ಕಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಎತ್ತಿಹೊಳೆ, ಕಾವೇರಿ ನಿಗಮ, ಲೋಕೋಪಯೋಗಿ ಇಲಾಖೆ, ಎಸ್‍ಟಿಪಿ ಸೇರಿದಂತೆ ಇನ್ನಿತರೆ ಅನುದಾನಗಳಿಂದ ಮೊದಲ ಹಂತ ದಲ್ಲಿ 7 ಕೋಟಿ ರೂ. ನೀಡಿದ್ದು, ಹಂತ-ಹಂತವಾಗಿ ಅಭಿವೃದ್ಧಿ ಪಡಿಸಲು ನಾವು ಬದ್ಧ ಎಂದು ತಿಳಿಸಿದರು.

ಕಾವೇರಿ ನಿಗಮದಿಂದ ಕೆರಲೂರು ಗ್ರಾಮದ ವರೆಗಿನ ರಸ್ತೆ ಅಭಿವೃದ್ಧಿಗೆ 20 ಲಕ್ಷ ರೂ. ಹಿರಿಕೋಲೆ-10 ಲಕ್ಷ, ನಿಟ್ಟೂರು ಬಾರೆಮನೆ-10 ಲಕ್ಷ, ಮಾವಿನಕೆರೆ-10 ಲಕ್ಷ, ಮಲ್ಲಾಪುರ-10 ಲಕ್ಷ, ಬಿಟ್ರುವಳ್ಳಿ-10 ಲಕ್ಷ, ಕೋಗಿಲೆಮನೆ ಗಡಿಯಿಂದ ತಾರಿಮರ ರಸ್ತೆ ಅಭಿವೃದ್ಧಿಗೆ 1.60 ಲಕ್ಷ, ಪ್ರಸಾದಿಹಳ್ಳಿ ಗಡಿಯಿಂದ ಮಾಳೇಗೆರೆ ರಸ್ತೆ ಕಾಮಗಾರಿಗೆ 1.70 ಲಕ್ಷ ರೂ. ನೀಡಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.

ಮಾಜಿ ಜಿಪಂ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ ಮಾತನಾಡಿ, 10 ವರ್ಷದಿಂದ ಕೋಗಿಲೆಮನೆ ಜಿಪಂ ಕ್ಷೇತ್ರ ಅಭಿವೃದ್ಧಿ ಆಗದೇ ಹಿಂದುಳಿದ ಕ್ಷೇತ್ರವಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಲೋಕೋಪ ಯೋಗಿ ಸಚಿವ ಹೆಚ್.ಡಿ.ರೇವಣ್ಣನವರು ಮುಖ್ಯರಸ್ತೆಗೆ ಹೊಂದಿಕೊಳ್ಳುವ ಬಿಟ್ಟುವಳ್ಳಿ, ಮಾಲ್ಲಾಪುರ, ಹೊಸ ಉತ್ಪಾತನಹಳ್ಳಿ ರಸ್ತೆಗೆ 1.10 ಕೋಟಿ ರೂ. ನೀಡಿದ್ದಾರೆ. ಇದಕ್ಕೆ ಶಾಸಕರೂ ಸಹಕಾರ ನೀಡಿದ್ದಾರೆ ಎಂದರು.

ಜಿಪಂ ಸದಸ್ಯೆ ಲತಾ ಮಂಜೇಶ್ವರಿ ಮಾತನಾಡಿ, ಕೋಗಿಲೆಮನೆ ಜಿಪಂ ಕ್ಷೇತ್ರದ ತಾರಿಮರ, ದೊಡ್ಡಹಳ್ಳಿ, ಎಡೇಹಳ್ಳಿ ರಸ್ತೆ ತೀವ್ರ ಹದಗೆಟ್ಟು ಮಳೆಗಾಲದಲ್ಲಿ ಸಂಚಾರಕ್ಕೆ ಅಡ್ಡಿಯಾದ ಹಿನೆÀ್ನಲೆಯಲ್ಲಿ ನಮ್ಮದೇ ಪಕ್ಷದ ಶಾಸಕರು ರಸ್ತೆ ಕಾಮಗಾರಿಗೆ ಹಣ ನೀಡಿದ್ದಾರೆ. ನಮ್ಮ ಕ್ಷೇತ್ರವು ಯಗಚಿ, ಎತ್ತಿನಹೊಳೆ ನೀರಾವರಿ ಮಾರ್ಗವಾದ ಹಿನ್ನೆಲೆಯಲ್ಲಿ ಶಾಸಕರು ಕ್ಷೇತ್ರಕ್ಕೆ ಕಾವೇರಿ ನಿಗಮ ಹಾಗೂ ಎತ್ತಿನಹೋಳೆ ನಿಗಮದಿಂದ ಹೆಚ್ಚಿನ ಅನುದಾನ ನೀಡುವ ಮೂಲಕ ಸಮಗ್ರ ಅಭಿವೃದ್ಧಿ ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸನ್ಯಾಸಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪಿ.ಎಂ.ದೇವರಾಜ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ಬಿ.ಸಿ.ಉಮೇಶ್, ಸನ್ಯಾಸಿಹಳ್ಳಿ ಗ್ರಾಪಂ ಅಧ್ಯಕ್ಷ ಶಿವೇಗೌಡ, ಜೆಡಿಎಸ್ ಹೋಬಳಿ ಅಧ್ಯಕ್ಷ ಕುಮಾರ್, ಜೆಡಿಎಸ್ ಮುಖಂಡ ಬಸವರಾಜು, ಗ್ರಾಪಂ ಸದಸ್ಯ ಚಂದನ್ ಇನ್ನು ಮುಂತಾದವರಿದ್ದರು.

Translate »