ಇಂದು ರಥ ನಿರ್ಮಾಣಕ್ಕೆ ಆಗ್ರಹಿಸಿ ಧರಣಿ
ಚಾಮರಾಜನಗರ

ಇಂದು ರಥ ನಿರ್ಮಾಣಕ್ಕೆ ಆಗ್ರಹಿಸಿ ಧರಣಿ

October 6, 2018

ಚಾಮರಾಜನಗರ: ನಗರದ ಶ್ರೀ ಚಾಮ ರಾಜೇಶ್ವರಸ್ವಾಮಿ ಸೇವಾ ಸಮಿತಿಯ ಶ್ರೀ ಚಾಮ ರಾಜೇಶ್ವರಸ್ವಾಮಿ ಬ್ರಹ್ಮ ರಥೋತ್ಸವದ ಕಾಮಗಾರಿ ಯನ್ನು ತಕ್ಷಣ ಪ್ರಾರಂಭಿಸುವಂತೆ ಒತ್ತಾಯಿಸಿ ನಾಳೆ (ಅ.6) ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ. ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1ರವರೆಗೂ ಜಿಲ್ಲಾಡಳಿತ ಮತ್ತು ಮುಜಾರಾಯಿ ಇಲಾಖೆಯ ವಿರುದ್ಧ ಸಾಂಕೇತಿಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಭಕ್ತರು ಆಗಮಿಸುವಂತೆ ಸಮಿತಿ ಕೋರಿದೆ.

Translate »