ಬೇಗೂರು ಸುತ್ತಮುತ್ತ ಗಾಳಿಮಳೆಗೆ ಬಾಳೆ ಬೆಳೆ ನಾಶ
ಚಾಮರಾಜನಗರ

ಬೇಗೂರು ಸುತ್ತಮುತ್ತ ಗಾಳಿಮಳೆಗೆ ಬಾಳೆ ಬೆಳೆ ನಾಶ

October 6, 2018

ಬೇಗೂರು:  ಬೇಗೂರು ಹೋಬಳಿಯ ಸುತ್ತ-ಮುತ್ತಲ ಗ್ರಾಮಗಳಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಗಾಳಿಮಳೆಗೆ ಬೇಗೂರು ಸಮೀಪದ ತಗ್ಗಲೂರು ಮತ್ತು ಕಮರಹಳ್ಳಿ ಗ್ರಾಮದ ರೈತರು ಬೆಳೆದಿದ್ದ ಬಾಳೆ ಗಿಡಗಳು ನೆಲ ಸಮವಾಗಿದ್ದು, ರೈತರು ನಷ್ಟಕ್ಕೆ ಸಿಲುಕಿದ್ದಾರೆ.

ಬೇಗೂರು ಹೋಬಳಿಯ ತಗ್ಗಲೂರು ಗ್ರಾಮದ ಸುಬ್ಬಣ್ಣ ಎಂಬುವರ ಮಗ ವೀರ ಭದ್ರಪ್ಪ ಅವರಿಗೆ ಸೇರಿದ 3 ಎಕರೆ ನೇಂದ್ರ ಬಾಳೆ ಬೆಳೆ ನಾಶವಾಗಿದೆ. ಅದೇ ಗ್ರಾಮದ ಪುಟ್ಟಮ್ಮ ಎಂಬುವರ ಮನೆ ಗೋಡೆ ಕುಸಿ ದಿದ್ದು, ಬಡ ಮಹಿಳೆ ಸಂಕಷ್ಟಕ್ಕೆ ಸಿಲುಕಿ ದ್ದಾರೆ, ಕಮರಹಳ್ಳಿ ಗ್ರಾಮದ ಸಂಗಪ್ಪ ಎಂಬು ವರು ಬೆಳೆದಿದ್ದ ಬಾಳೆ ಗಿಡ ಸಂಪೂರ್ಣ ನಾಶವಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇಗೂರು ಹೋಬಳಿಯ ಸುತ್ತ-ಮುತ್ತ ಉತ್ತಮ ಮಳೆÀಯಾ ಗುತ್ತಿದ್ದು. ಹೆಚ್ಚಿನ ಪ್ರಮಾ ಣದ ಗಾಳಿಯೂ ಬೀಸುತ್ತಿರುವುದರಿಂದ ಬಾಳೆ ಬೆಳೆಗಳು ನಾಶವಾಗುತ್ತಿದೆ. ಪ್ರಕೃತಿಯ ವರ್ತನೆಯಿಂದ ರೈತರು ನಷ್ಟಕ್ಕೆ ಸಿಲುಕಿದಂತಾಗಿದೆ.

Translate »