ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಜೋಗಿಕೊಪ್ಪಲು ಗ್ರಾಮ
ಹಾಸನ

ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಜೋಗಿಕೊಪ್ಪಲು ಗ್ರಾಮ

November 5, 2018

ಬೇಲೂರು:ತಾಲೂಕಿನ ಬಿಕ್ಕೋಡು ಹೋಬಳಿಯ ಚೌಡನಹಳ್ಳಿ ದಾಖಲೆ ಗ್ರಾಮವಾದ ಜೋಗಿಕೊಪ್ಪಲು ಗ್ರಾಮವು ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು ಗ್ರಾಮದ ಅಭಿವೃದ್ಧಿಗೆ ಕುಶಾವರ ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಶಾಸಕ ಕೆ.ಎಸ್.ಲಿಂಗೇಶ್ ಗಮನ ಹರಿಸಬೇಕಿದೆ.

ಪರಿಶಿಷ್ಟಜಾತಿಯ 40 ಕುಟುಂಬಗಳಿದ್ದು ಎಲ್ಲರೂ ಕೂಲಿಕಾರ್ಮಿಕರೇ ಆಗಿದ್ದಾರೆ. ಗ್ರಾಮದಲ್ಲಿ ಉತ್ತಮ ವಾದ ರಸ್ತೆಯಿಲ್ಲ. ಗ್ರಾಮ ಉಗಮವಾದಾಗನಿಂದಲೂ ಇದುವರೆಗೂ ಒಂದು ರಸ್ತೆಯೂ ಜಲ್ಲಿ ಕಂಡಿಲ್ಲ. ರಸ್ತೆ ಪಕ್ಕದಲ್ಲಿ ಚರಂಡಿ ಕಂಡಿಲ್ಲ. ಮಳೆ ಬಂದಾಗ ರಸ್ತೆಯ ನೀರು ಎಲ್ಲೆಂದರಲ್ಲಿ ಹರಿಯತೊಡುಗುತ್ತದೆ. ಕೆಲವೊಮ್ಮೆ ಮಳೆ ಹೆಚ್ಚಾದ ಸಂದರ್ಭ ಮನೆ, ಗುಡಿಸಲುಗಳಿಗೂ ನೀರು ನುಗ್ಗಿ ರುವುದು ಉಂಟು.

ಗ್ರಾಮದಲ್ಲಿರುವ 8 ಕೂಲಿ ಕಾರ್ಮಿಕರ ಕುಟುಂಬಗಳು ಮನೆಯಿಲ್ಲದೆ ಗುಡಿ ಸಿಲಿನಲ್ಲೇ ವಾಸಿಸುತ್ತಿದ್ದಾರೆ. ಕೆಲವರು ಟಾರ್ಪಾಲ್ ಕಟ್ಟಿಕೊಂಡು ಬದುಕು ಸಾಗಿ ಸುತ್ತಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ ಇದ್ದರೂ ಇದು ಸಮರ್ಪಕವಾಗಿಲ್ಲ. ಮೂರು ದಿನಕ್ಕೆ ಒಮ್ಮೆ ನೀರು ಬಿಡಲಾಗುತ್ತಿದೆ. ಗ್ರಾಮ ದಲ್ಲಿರುವ ಬಸವೇಶ್ವರ ಹಾಗೂ ಮಾರಮ್ಮ ದೇಗುಲ ಶಿಥಿಲಗೊಂಡಿದ್ದು ಮೇಲ್ಛಾವ ಣಿಗೆ ಟಾರ್ಪಾಲ್ ಹೊದಿಸಿ ಕೊಂಡು ಮಳೆಯಿಂದ ರಕ್ಷಿಸಿಕೊಂಡಿರುವ ದೇವರು ಭಕ್ತರಿಂದ ಪೂಜಿಸಿಕೊಳ್ಳುತ್ತಿದ್ದಾರೆ.

ದೇವಸ್ಥಾನ ನಿರ್ಮಿಸಲು ಪ್ರಾರಂಭ ಮಾಡಿ 2 ವರ್ಷವಾದರೂ ಪೂರ್ಣಗೊಂಡಿಲ್ಲ. ಬಾಗಶಃ ಗೋಡೆ ಕಟ್ಟಿದ್ದು ಬಾಗಿಲುಗಳನ್ನು ಇಡಲಾಗಿದೆ. ಇದೀಗ ಪಾಳುಬಿದ್ದು ಗಿಡಗಂಟಿಗಳು ಬೆಳೆದಿದೆ. ಬೀದಿ ದೀಪದ ವ್ಯವಸ್ಥೆಯಿಲ್ಲ. ರಸ್ತೆ, ಚರಂಡಿ ನಿರ್ಮಾಣಕ್ಕೆ ಕುಶಾವರ ಗ್ರಾಮ ಪಂಚಾಯಿತಿಗೆ, ಶಾಸಕರಿಗೆ ಹಲ ವಾರು ಭಾರಿ ಮನವಿ ಪತ್ರ ನೀಡಿದರೂ ಪ್ರಯೋಜನವಾಗಿಲ್ಲ.

ಚೌಡನಹಳ್ಳಿಯಿಂದ ಜೋಗಿಕೊಪ್ಪಲಿಗೆ ಹೋಗುವ 1 ಕಿ.ಮೀ.ದೂರದ ರಸ್ತೆ ಕಿರಿದಾಗಿದ್ದು, ಈ ರಸ್ತೆಯ ಎರಡೂ ಬದಿ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ರಸ್ತೆಗೆ ಸ್ಥಳ ಬಿಟ್ಟುಕೊಡಲು ಮೀನಾಮೇಷ ಎಣಿಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ. ಗ್ರಾಮದಲ್ಲಿ ಅಂಗನವಾಡಿ ಕೇಂದ್ರವಿಲ್ಲ. ಪುಟ್ಟಮಕ್ಕಳು ಚೌಡನಹಳ್ಳಿಗೆ ಹೋಗಬೇಕಾದ ಅಗತ್ಯವಿರುವುದರಿಂದ 1 ಕಿ.ಮೀ.ದೂರ ಕಳುಹಿಸಿಕೊಡಲು ಸಾಧ್ಯ ವಾಗದ ಕಾರಣ ಮಕ್ಕಳು ಅಂಗನವಾಡಿ ಯಿಂದ ವಂಚಿತರಾಗಿದ್ದಾರೆ.

ಗ್ರಾಮದ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಂಡರೆ ಆ ಅನುದಾನವನ್ನು ಚೌಡನಹಳ್ಳಿ ಗ್ರಾಮಕ್ಕೆ ಬಳಸಿಕೊಳ್ಳುತ್ತಾರೆ. ಇದರಿಂದಾಗಿ ನಮ್ಮ ಗ್ರಾಮ ಅಭಿವೃದ್ಧಿ ಕಂಡಿಲ್ಲ ಎನ್ನುವುದು ಗ್ರಾಮಸ್ಥ ಸೋಮ ಶೇಖರ್ ದೂರು. ಈ ಭಾಗದ ತಾ.ಪಂ. ಸದಸ್ಯ ರವಿ ಅವರು ಈ ಗ್ರಾಮದತ್ತ ಏಕೆ ಗಮನ ಹರಿಸಿಲ್ಲ ಎಂಬುದಕ್ಕೆ ಅವರೆ ಉತ್ತರಿಸಬೇಕಿದೆ. ಜಿ.ಪಂ.ಸದಸ್ಯರು ಆಸಕ್ತಿ ತೋರಬೇಕಿದೆ.
ಹಿಂದಿನ ಶಾಸಕ ದಿವಂಗತ ವೈ.ಎನ್. ರುದ್ರೇಶಗೌಡರು ಹಾಗೂ ಇಂದಿನ ಶಾಸಕ ಕೆ.ಎಸ್.ಲಿಂಗೇಶ್ ಅವರಿಗೂ ಗ್ರಾಮದ ಅಭಿ ವೃದ್ಧಿ ಬಗ್ಗೆ ಮನವಿ ಮಾಡಿಕೊಂಡರೂ ಭರವಸೆ ಹೊರತುಪಡಿಸಿದರೆ ಮತ್ತೇನೂ ಆಗಿಲ್ಲ ಎಂಬ ಆರೋಪಗಳು ಕೇಳಿಬರು ತ್ತಿದ್ದು, ನಮ್ಮ ಗ್ರಾಮದ ಮೂಲಭೂತ ಸೌಲಭ್ಯಕ್ಕಾಗಿ ಪ್ರತಿಭಟನೆಯೊಂದೆ ಉಳಿದಿರುವ ಮಾರ್ಗ ಎಂದು ಗ್ರಾಮದ ಬಸವರಾಜು ಹೇಳಿದರು.

Translate »