ಬೈಕ್‍ಗೆ ಸರಕು ವಾಹನ ಡಿಕ್ಕಿ; ಓರ್ವನಿಗೆ ಗಾಯ
ಚಾಮರಾಜನಗರ

ಬೈಕ್‍ಗೆ ಸರಕು ವಾಹನ ಡಿಕ್ಕಿ; ಓರ್ವನಿಗೆ ಗಾಯ

November 8, 2018

ಬೇಗೂರು: ಸರಕು ಸಾಗಾಣೆ ವಾಹನವೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿ ಣಾಮ ಬೈಕ್ ಸವಾರನ ಕೈಮೂಳೆ ಮುರಿದು, ತಲೆಗೆ ಪೆಟ್ಟಾಗಿರುವ ಘಟನೆ ಬೇಗೂರಿ ನಲ್ಲಿ ನಡೆದಿದೆ. ರಂಗೂಪುರ ಗ್ರಾಮದ ಆರ್.ಎಂ.ನಟರಾಜು ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯಲಾಗಿದೆ.

ನಟರಾಜು ತಮ್ಮ ಪತ್ನಿಯೊಂದಿಗೆ ಬೈಕ್‍ನಲ್ಲಿ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ನಂಜನಗೂಡಿನಿಂದ ಬರುತ್ತಿದ್ದ ಸರಕು ಸಾಗಾಣೆ ವಾಹನ ಡಿಕ್ಕಿ ಹೊಡೆಯಿತೆನ್ನ ಲಾಗಿದೆ. ಇದರಿಂದ ನಟರಾಜು ಅವರ ತಲೆಗೆ ಪೆಟ್ಟಾಗಿದ್ದು, ಸ್ಥಳಕ್ಕೆ ಬೇಗೂರು ಠಾಣೆ ಪೊಲೀಸರು ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Translate »