ಬೇಗೂರು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ
ಚಾಮರಾಜನಗರ

ಬೇಗೂರು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

October 23, 2018

ಬೇಗೂರು: ಬೇಗೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಗ್ರಾ.ಪಂ ಕಚೇರಿ ಆವರಣದಲ್ಲಿ ನಡೆಯಿತು.
ಹಿಂದಿನ ಅಧ್ಯಕ್ಷ ಬಿ.ಎಸ್.ಚೇತನ್ ಹಾಗೂ ಉಪಾಧ್ಯಕ್ಷೆ ಚೈತ್ರಾ ಅವರ ವಿರುದ್ದ 12 ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿ ದ್ದರಿಂದ ಅ.22ರಂದು ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ವಿಶೇಷ ಸಭೆ ಕರೆಯ ಲಾಗಿತ್ತು. ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಮಹ ದೇವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಬೆಳಚಲ ವಾಡಿಯ ಸತೀಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪ್ರೇಮಾ ನಾಮಪತ್ರ ಸಲ್ಲಿಸಿದ್ದರು. ಉಳಿದ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಿಸಲಾಯಿತು.

ಶಾಸಕರ ಭೇಟಿ: ಬೇಗೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಸತೀಶ್ ಮತ್ತು ಪ್ರೇಮಾ ಅವಿರೋಧವಾಗಿ ಆಯ್ಕೆಯಾಗಿದ್ದು, ಶಾಸಕ ನಿರಂಜನ್‍ಕುಮಾರ್ ಭೇಟಿ ನೀಡಿ ಅಭಿ ನಂದನೆ ಸಲ್ಲಿಸಿ ಮಾತನಾಡಿದ ಅವರು, ಬೇಗೂರು ಗ್ರಾಮದ ಹೊಸ ಬಡಾವಣೆಯ ರಸ್ತೆ ಮತ್ತು ಚರಂಡಿಯನ್ನು ಕೂಡಲೇ ನಿರ್ಮಿಸುವುದಾಗಿ ತಿಳಿಸಿದರು. ಅಲ್ಲದೆ, ಸಮುದಾಯ ಆರೋಗ್ಯ ಕೇಂದ್ರದ ರಸ್ತೆಯ ನಿರ್ಮಾಣ, ಉಪ್ಪಾರ ಸಮುದಾಯ ಭವನದ ಬಳಿ ಭಗೀರಥ ಪುತ್ಥಳಿ ನಿರ್ಮಾಣಕ್ಕೆ ಜನಾಂಗದ ಮುಖಂಡರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ರಾದ ರಾಜಶೆಟ್ಟಿ, ದೇವಮ್ಮ, ತಿಮ್ಮಮ್ಮ, ಪುಟ್ಟಸ್ವಾಮಿಶೆಟ್ಟಿ, ಸುಶೀಲ, ದೇವಮ್ಮಣಿ, ಮಹದೇವಯ್ಯ, ಮಂಜುನಾಥ, ಬಿ.ಆರ್.ಸತೀಶ್, ಸಿದ್ದಮ್ಮ, ಪಿಡಿಓ ಶಿವ ಸ್ವಾಮಿ, ಗೋವಿಂದಸ್ವಾಮಿ ಹಾಗೂ ಪಿಎಸಿಸಿ ಬ್ಯಾಂಕ್‍ನ ನಿರ್ದೇಶಕ ಎಂ.ಪಿ. ಸುನೀಲ್, ಪ್ರಣಯ್, ಕಮರಹಳ್ಳಿನಂಜುಂಡ ಸ್ವಾಮಿ, ಹೊರೆಯಾಲಮಹೇಶ್, ದೇವಯ್ಯ, ಬೆಳಚಲವಾಡಿಶಿವಣ್ಣ, ನಿಟ್ರೆನಾಗರಾಜು, ತಾಪಂ ಮಾಜಿ ಸದಸ್ಯ ಮಲ್ಲಿದಾಸ್, ರಿಯಾಜ್ ಪಾಷಾ, ನಾರಾಯಣಸ್ವಾಮಿ, ವಿಶು ಸೇರಿ ದಂತೆ ಮತ್ತಿತರರು ಹಾಜರಿದ್ದರು, ಚುನಾವಣಾ ಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಮಹದೇವಯ್ಯ ಹಾಜರಿದ್ದರು.

Translate »