ಕೊಳ್ಳೇಗಾಲ: ನನ್ನ ಹಾಗೂ ನನ್ನ ಪತ್ನಿ ಮೇಲೆ ಮಾರ ಣಾಂತಿಕ ಹಲ್ಲೆ ನಡೆಸಿ, ನನ್ನ ತಂದೆ ಕೊಲೆ ಗೈದ 7 ಮಂದಿ ಆರೋಪಿಗಳನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪಳನಿ ಮೇಡು ಗ್ರಾಮದ ಆರ್ಮುಗಂ ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಈ ಸಂಬಂಧ ವೀರಶೈವ ಮುಖಂಡರೂ, ಮಾಜಿ ಅಧ್ಯಕ್ಷರೂ ಆದ ಬಸವರಾಜು ಸಮ್ಮುಖದಲ್ಲಿ ಡಿವೈಎಸ್ಪಿ ಅವರಿಗೆ ದೂರು ನೀಡಲಾಗಿದೆ. ಸೆಪ್ಟೆಂಬರ್ 6ರಲ್ಲಿ ಏಕಾಏಕಿ ನಮ್ಮ ತೋಟದ ಮನೆಗೆ ನುಗ್ಗಿದ 9 ಮಂದಿಯ ಗುಂಪು ನನ್ನ ಹಾಗೂ ನನ್ನ ತಂದೆ ಮೇಲೆ ಕಬ್ಬಿಣದ ಸಲಾಕೆ ಹಾಗೂ ಮಚ್ಚಿನಿಂದ ಹಲ್ಲೆ ನಡೆಸಿತ್ತು.
ಹಲ್ಲೆಯಾದ ಬಳಿಕ ನನ್ನ ತಂದೆ ಇರಸೆ ಗೌಂಡರ್ ಚಿಕಿತ್ಸೆ ಫಲಕಾರಿಯಾಗದೆ ತೀರಿಕೊಂಡರು ಎಂದು ದೂರಿದ್ದಾರೆ. ಚೆಲುವ, ಇರಸತಾಯಮ್ಮ, ಅಮಾಸಿ, ಮಾರಿಯಮ್ಮ, ಸುಶೀಲ, ಅರ್ಕಾನಿ, ರಂಗ, ರಾಮಸ್ವಾಮಿ ಆರೋಪಿಗಳಾಗಿದ್ದು, ಈಗಾಗಲೇ ಪೆÇಲೀಸರು ಇಬ್ಬರನ್ನು ಮಾತ್ರ ಬಂಧಿಸಿದ್ದಾರೆ. ಉಳಿದ ಆರೋಪಿಗಳನ್ನು ಕೂಡಲೇ ಬಂಧಿಸ ಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರಕರಣದಲ್ಲಿ ರಾಜಕೀಯ ಕೈವಾಡವಿದ್ದು, ಪೆÇಲೀಸರು ಯಾವುದೇ ಮರ್ಜಿಗೂ ಒಳಗಾಗದೆ ನಮಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದಲ್ಲಿ ಡಿವೈಎಸ್ಪಿ ಕಚೇರಿ ಮುಂದೆ ಧರಣಿ ನಡೆಸುವುದಾಗಿ ಆರ್ಮುಗಂ ಎಚ್ಚರಿಸಿದ್ದಾರೆ.