ಮಹಾನ್ ಪುರುಷರ ಜಯಂತಿ ಆಚರಣೆ ಒಂದೇ ವೇದಿಕೆಯಲ್ಲಿ ಆಗಲಿ
ಮೈಸೂರು

ಮಹಾನ್ ಪುರುಷರ ಜಯಂತಿ ಆಚರಣೆ ಒಂದೇ ವೇದಿಕೆಯಲ್ಲಿ ಆಗಲಿ

October 23, 2018

ಚಾಮರಾಜನಗರ:  ಮಹಾನ್ ಪುರುಷರ ಜಯಂತಿಯನ್ನು ಒಂದೇ ವೇದಿಕೆಯಲ್ಲಿ ಆಚರಿಸುವಂತಾಗಬೇಕು ಎಂದು ಮಾಜಿ ಸಚಿವ, ಶಾಸಕ ಎನ್. ಮಹೇಶ್ ಆಶಯ ವ್ಯಕ್ತಪಡಿಸಿದರು. ಇಂದಿಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಈ ಒಂದೇ ವೇದಿಕೆಯಲ್ಲಿ ನಾಲ್ಕು ದಿನಗಳು ಒಂದೊಂದು ದಿನ ಅಂಬೇಡ್ಕರ್, ಬಸವ, ಭಾಗೀರಥ, ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತಿದ್ದೇವೆ. ಇಂತಹ ವಿಚಿತ್ರ ಸನ್ನಿವೇಶ ದಲ್ಲಿ ನಾವಿದ್ದೇವೆ. ಬಸವ ಅಭಿಮಾನಿಯಾಗಿ, ಅನುಯಾಯಿ ಯಾಗಿರುವ ನನಗೆ ಇದು ನೋವು ತರಿಸಿದೆ ಎಂದರು.

ನಾಲ್ಕೈದು ಮಹಾನ್ ಪುರುಷರ ಜಯಂತಿಯನ್ನು ಒಂದೇ ಕಡೆ, ಒಂದೇ ವೇದಿಕೆಯಲ್ಲಿ ಆಚರಿಸುವಂತಾಗಬೇಕು. ಎಲ್ಲಾ ಜನಾಂಗದವರು ಒಟ್ಟಿಗೆ ಸೇರಿದರೆ ಅಪಾಯ ಎನ್ನುವ ಕಾರಣಕ್ಕೆ ಎಲ್ಲರನ್ನು ಒಟ್ಟಿಗೆ ಸೇರಿಸುವ ಸಾಹಸಕ್ಕೆ ನಾವು ಕೈ ಹಾಕುವುದಿಲ್ಲ. ಇದು ಮಹಾನ್ ಪುರುಷರುಗಳಿಗೆ ನಾವು ಮಾಡಿದ ಅವಮಾನ, ದ್ರೋಹ ಎಂದರು. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದೆ. ನೀತಿ ಸಂಹಿತೆ ಜಾರಿಗೆ ಬರುವುದರಿಂದ ಮಹಾನ್ ಪುರುಷರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗು ವುದಿಲ್ಲ. ತಮ್ಮಲ್ಲಿ ಕೈ ಮುಗಿದು ನಾನು ಪ್ರಾರ್ಥಿಸಿಕೊಳ್ಳುತ್ತೇನೆ ಮುಂದಿನ ವರ್ಷವಾದರೂ ಎಲ್ಲಾ ಮಹಾನ್‍ಪುರುಷರ ಜಯಂತಿಯನ್ನು ಒಂದೇ ದಿನ ಒಂದೇ ವೇದಿಕೆಯಲ್ಲಿ ಆಚರಿಸೋಣ. ಈ ಮೂಲಕ ಬಸವಣ್ಣನವರ ಚಳವಳಿಗೆ ಒಂದು ವೇದಿಕೆ ಸಿದ್ಧಗೊಳಿಸೋಣ ಎಂದು ಎನ್. ಮಹೇಶ್ ಮನವಿ ಮಾಡಿದರು.

ಅದ್ಧೂರಿ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಪ್ರವಾಸಿಮಂದಿರದಿಂದ ಪೇಟೆ ಪ್ರೈಮರಿ ಶಾಲೆ ಆವರಣದ ವರೆಗೆ ಶ್ರೀ ಬಸವೇಶ್ವರ ಭಾವಚಿತ್ರದ ಮೆರವಣಿಗೆ ಅದ್ಧೂರಿ ಯಾಗಿ ನೆರವೇರಿತು. ವೀರಗಾಸೆ, ಮಂಗಳವಾದ್ಯ, ನಂದಿಕಂಬ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದವು.

Translate »