ಚಾಮರಾಜನಗರ: 12ನೇ ಶತಮಾನದ ಶ್ರೀ ಬಸವಣ್ಣ ಅವರ ಅನುಭವ ಮಂಟಪದ ಆಡಳಿತ ದೇಶಕ್ಕೆ ಮಾದರಿ ಆಗಿದೆ ಎಂದು ಸಂಸದ ಆರ್. ಧ್ರುವನಾರಾಯಣ್ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಶ್ರಯದಲ್ಲಿ ನಗರದ ಸರ್ಕಾರಿ ಪೇಟೆ ಶಾಲೆ ಆವರಣದಲ್ಲಿ ಸೋಮವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಬಸವಣ್ಣರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಬಸವಣ್ಣನವರು 12ನೇ ಶತಮಾನ ದಲ್ಲಿಯೇ ಮೌಢ್ಯತೆ, ಅಸಮಾನತೆ, ಕಂದಾ ಚಾರದ ವಿರುದ್ಧ ಹೋರಾಟ ನಡೆಸಿದ್ದರು. ಸಮಾನತೆಗಾಗಿ ಹೋರಾಟ ನಡೆಸಿದ ಮಹಾನ್ ವ್ಯಕ್ತಿ. ಅವರ ತತ್ವ, ಆದರ್ಶಗಳನ್ನು ಪಾಲಿಸುವುದು ಪ್ರತಿಯೊ ಬ್ಬರ ಆದ್ಯ ಕರ್ತವ್ಯ ಎಂದು ಹೇಳಿದ ಅವರು, ಸಮಾಜದಲ್ಲಿ ಇರುವ ಪಿಡುಗು ಗಳನ್ನು ಹೋಗಲಾಡಿಸಲು ಬಸವಣ್ಣ ನವರ ಅನುಭವ ಮಂಟಪದ ಆಡಳಿತ ಮಾದರಿಯಾಗಿದೆ ಎಂದರು.
ಬಸವಣ್ಣ, ಅಂಬೇಡ್ಕರ್, ಗೌತಮ ಬುದ್ಧ ಸಮಾಜ ಸುಧಾರಕರು. ಈ ಮಹಾನ್ ನಾಯಕರ ತತ್ವ, ಆದರ್ಶಗಳನ್ನು ಪಾಲಿಸು ವುದು ನಮ್ಮೆಲ್ಲರ ಕರ್ತವ್ಯವಾಗಿದೆ. 12ನೇ ಶತಮಾನದಲ್ಲಿ ಇದ್ದ ಮೌಢ್ಯತೆ, ಕಂದಾ ಚಾರ ಈಗಲೂ ಜಿಲ್ಲೆಯಲ್ಲಿ ಇರುವುದು ಬೇಸರ ತರಿಸುವಂತಹದ್ದು. ಇವೆಲ್ಲಾ ಹೋಗಿ ಸುಧಾರಣೆ ಆಗಬೇಕಾಗಿದೆ ಎಂದರು.
ಪ್ರತಿಯೊಬ್ಬರೂ ದುಡಿಯಬೇಕು, ಸಮಾ ನತೆ ಬರಬೇಕು, ಕಂದಾಚಾರ, ಮೌಢ್ಯತೆ, ಅಸಮಾನತೆ ತೊಲಗಬೇಕು ಎಂಬುದು ಬಸವಣ್ಣ ಅವರ ಆಶಯವಾಗಿತ್ತು. ಅದಕ್ಕಾಗಿ ಅವರು ತಮ್ಮ ವಚನಗಳ ಮೂಲಕ ಸಮಾಜ ದಲ್ಲಿ ಇದ್ದ ಅಂಕು-ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದರು ಎಂದು ಧ್ರುವನಾರಾಯಣ್ ಹೇಳಿದರು.
ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕಿನ 380 ಹಳ್ಳಿಗಳಿಗೆ ಶಾಶ್ವತ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಜಿಲ್ಲೆಯ ಮೂಲಕ ಹಾದುಹೋಗಿರುವ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕಾರ್ಯ ಗತಗೊಳಿಸಲಾಗಿದ್ದು, ಜಿಲ್ಲೆಯ ಜನತೆಯ ಆಶೋತ್ತರಗಳಿಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟ ರಂಗಶೆಟ್ಟಿ ಮಾತನಾಡಿ, ಬಸವಣ್ಣನವರು ಲಿಂಗಾಯಿತ ಧರ್ಮದ ಸಂಸ್ಥಾಪಕರು, ಅವರು ಮಹಾನ್ ಮಾನವತಾವಾದಿ ಸಮಾಜ ದಲ್ಲಿ ಇದ್ದ ಜಾತೀಯತೆ, ಅಸ್ಪøಶ್ಯತೆಯನ್ನು ಹೋಗಲಾಡಿಸಲು ಬಸವಣ್ಣನವರು ಅಪಾರವಾಗಿ ಶ್ರಮಿಸಿದ್ದರು. ಬಸವಣ್ಣನವರ ಆದರ್ಶಗಳನ್ನು ಅಂಬೇಡ್ಕರ್‍ರವರು ಪಾಲಿಸಿದ್ದರು ಎಂದರು. ಮಾಜಿ ಸಚಿವ, ಹಾಲಿ ಶಾಸಕ ಎನ್. ಮಹೇಶ್ ಮಾತ ನಾಡಿ, ಜಾತಿ ವ್ಯವಸ್ಥೆ, ಮಹಿಳೆಯರಿಗೆ ಆಗುತ್ತಿದ್ದ ಶೋಷಣೆ, ಅಸಮಾನತೆ, ಆಸ್ತಿಯ ಅಸಮಾನತೆ ವಿರುದ್ಧ ಮೊದಲು ಮಾತನಾಡಿದ್ದು, ಬಸವಣ್ಣನವರು. ಬಸವಣ್ಣ ಪ್ರತಿಪಾದಿಸಿದ ಧರ್ಮ ಒಂದು ಜಾತಿಯಾಗಿ ಉಳಿದಿರುವುದು ಬೇಸರ ತರಿಸಿದೆ ಎಂದರು.
ಬಸವಣ್ಣನವರ ವಿಚಾರಗಳನ್ನು ಆಚರಣೆ ಮಾಡದಿದ್ದರೆ, ಆ ವಿಚಾರಗಳು ಸತ್ತು ಹೋಗುತ್ತವೆ. ಹೀಗಾಗಿ ಬಸವಣ್ಣ ಅವರ ವಿಚಾರಗಳನ್ನು ಆಚರಿಸಬೇಕು ಎಂದು ಕರೆ ನೀಡಿದ ಎನ್. ಮಹೇಶ್, ವಿಚಾರ, ಆಚಾರ, ಪ್ರಚಾರ ಆದರೆ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಮುಡುಕನಪುರ ಹಲವಾರ ಮಠದ ಶ್ರೀ ಷಡಕ್ಷರ ದೇಶೀಕೇಂದ್ರ ಸ್ವಾಮೀಜಿ ಪ್ರಧಾನ ಭಾಷಣ ಮಾಡಿ, ಸಮಾಜದಲ್ಲಿ ಬದಲಾವಣೆ ಬಯಸುವ ಮನುಷ್ಯರಿಗೆ, ಮನಸ್ಸುಗಳಿಗೆ ದಾರ್ಶನಿಕರ ತತ್ವ, ಆದರ್ಶ ಗಳು ಅಗತ್ಯ ಇಲ್ಲ. ದಾರ್ಶನಿಕರ ತತ್ವ, ಆದರ್ಶಗಳು ಹೇಳಲಿಕ್ಕೆ, ಕೇಳಲಿಕ್ಕೆ ಸರಿ. ಅದನ್ನು ಪಾಲಿಸುವುದು, ಆಚರಣೆ ಮಾಡುವುದು ಕಷ್ಟ ಎಂದರು.
ಚಾಮರಾಜನಗರ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀ ಚನ್ನಬಸವಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಯೋಗೇಶ್, ಸದಸ್ಯ ರಾದ ಕೆ.ಪಿ. ಸದಾಶಿವಮೂರ್ತಿ, ಕಮಲ್, ಲೇಖಾ, ಶಶಿಕಲಾ, ಸೋಮಲಿಂಗಪ್ಪ, ಕೆರಹಳ್ಳಿ ನವೀನ್, ಆರ್. ಬಾಲರಾಜು, ತಾಪಂ ಅಧ್ಯಕ್ಷೆ ದೊಡ್ಡಮ್ಮ, ಸದಸ್ಯರಾದ ಸುಧಾಮಲ್ಲಣ್ಣ, ಹೆಚ್.ವಿ. ಚಂದ್ರು, ನಗರಸಭಾ ಸದಸ್ಯರಾದ ಮನೋಜ್ ಪಟೇಲ್, ಭಾಗ್ಯಮ್ಮ, ಪ್ರಕಾಶ್, ಚಿನ್ನಮ್ಮ, ಮಹದೇವಯ್ಯ, ನೀಲಮ್ಮ, ಎಪಿಎಂಸಿ ಅಧ್ಯಕ್ಷ ಶಂಕರಮೂರ್ತಿ, ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್, ವೀರಶೈವ ಮಹಾ ಸಭಾ ಜಿಲ್ಲಾ ಅಧ್ಯಕ್ಷ ಶಿವಬಸಪ್ಪ, ತಾಲೂಕು ಅಧ್ಯಕ್ಷ ಕಾವುಡವಾಡಿ ಗುರು, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಪಂ ಸಿಇಓ ಡಾ. ಕೆ. ಹರೀಶ್‍ಕುಮಾರ್, ಎಸ್ಪಿ ಧರ್ಮೇಂದ್ರಕುಮಾರ್‍ಮೀನಾ, ಮುಖಂಡ ರಾದ ಕೆ.ಎಸ್. ನಾಗರಾಜಪ್ಪ, ಪಿ. ಮರಿಸ್ವಾಮಿ, ತೋಟೇಶ್, ಹೆಚ್.ಎಸ್. ನಂಜಪ್ಪ, ಕಾಳನಹುಂಡಿ ಗುರುಸ್ವಾಮಿ, ಗುರುಪ್ರಸಾದ್, ಜಿ. ನಾಗಶ್ರೀಪ್ರತಾಪ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾ ಯಕ ನಿರ್ದೇಶಕ ಹೆಚ್. ಚೆನ್ನಪ್ಪ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.