ವಾಲ್ಮೀಕಿ ಸಮಾಜ ಇನ್ನು ಅಭಿವೃದ್ಧಿಯಾಗಿಲ್ಲ
ಚಾಮರಾಜನಗರ

ವಾಲ್ಮೀಕಿ ಸಮಾಜ ಇನ್ನು ಅಭಿವೃದ್ಧಿಯಾಗಿಲ್ಲ

October 25, 2018

ಕೊಳ್ಳೇಗಾಲ: ಮಹಾ ಪುರುಷರ ಜಯಂತಿಗಳನ್ನು ಕೇವಲ ಆಯಾ ಸಮುದಾಯಕ್ಕೆ ಸೀಮಿತಗೊಳಿಸ ಲಾಗುತ್ತಿರುವುದು ದೊಡ್ಡ ದುರಂತ ಎಂದು ಮಾಜಿ ಸಚಿವರೂ, ಕ್ಷೇತ್ರದ ಶಾಸಕರೂ ಆದ ಎನ್.ಮಹೇಶ್‍ಹೇಳಿದರು.

ಅವರು ಪಟ್ಟಣದ ವಸಂತಕುಮಾರಿ ಸರ್ಕಾರಿ ಬಾಲಿಕಾ ಕಾಲೇಜಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಅಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀವಾಲ್ಮೀಕಿ ಮಹರ್ಷಿ ಭಾರತದ ಸಂಸ್ಕೃತಿ, ಧರ್ಮ, ಮನಃಶಾಸ್ತ್ರ ವನ್ನೆಲ್ಲಾ ಬೋಧಿಸಿದವರು.

ಇವರು ವಾಲ್ಮೀಕಿ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಆ ಸಮು ದಾಯದವರು ಮಾತ್ರ ಜಯಂತಿ ಆಚ ರಣೆ ಮಾಡುವಂತಹ ದುರಂತವು, ನಮ್ಮ ದೇಶದ ಜಾತಿ ವ್ಯವಸ್ಥೆ ಕೊಟ್ಟಿರುವಂತಹ ದೊಡ್ಡ ಕೊಡುಗೆ ಎಂದು ಬೇಸರ ವ್ಯಕ್ತ ಪಡಿಸಿದರು. ವಾಲ್ಮೀಕಿ ಮಹರ್ಷಿ ಹುಟ್ಟಿದ ನಾಡಿನಲ್ಲಿ ಅವರ ಹೆಸರಿನಲ್ಲೇ ಹುಟ್ಟಿದ ಶ್ರೇಷ್ಟ ಸಮಾಜ ಇನ್ನು ಯಾವ ಸ್ಥಿತಿ ಯಲ್ಲಿದೆ ಎಂಬುದನ್ನು ನಾವೆಲ್ಲರೂ ನೋಡ ಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿ ಸಿದ ಮಹೇಶ್, ಕೊಳ್ಳೇಗಾಲದಲ್ಲಿ ದೊಡ್ಡ ನಾಯಕರ ಹಾಗೂ ಚಿಕ್ಕನಾಯಕರ ಬೀದಿಯ ಚಿತ್ರಣ ಬದಲಿಸಬೇಕಿದೆ. ಆಗಾಗಿ ತಹಸಿಲ್ದಾರ್. ನಗರಸಭೆ ಆಯುಕ್ತರು ಜಂಟಿ ಭೇಟಿ ನೀಡಿ ಅಲ್ಲಿನ ಜನರ ಉತ್ತಮ ಬದುಕು ನಡೆಸುವ ನಿಟ್ಟಿನಲ್ಲಿ ಅಭಿವೃದ್ಧಿ ಗಾಗಿ ವರದಿ ನೀಡಿ ಎಂದು ಹೇಳಿದರು.

ಸಮಾರಂಭವನ್ನು ಹನೂರು ಶಾಸಕ ಆರ್.ನರೇಂದ್ರ ಉದ್ಘಾಟಿಸಿ ಮಾತನಾಡಿ ದರು. ಜಿಪಂ ಅಧ್ಯಕ್ಷೆ ಶಿವಮ್ಮ, ಕೃಷ್ಣ, ತಾಪಂ ಅಧ್ಯಕ್ಷ ರಾಜು, ಉಪಾಧ್ಯಕ್ಷ ಲತಾ ರಾಜಣ್ಣ, ಮ.ಬೆಟ್ಟ ಪ್ರಾಧಿಕಾರದ ಸದಸ್ಯ ಕೊಪ್ಪಾಳಿನಾಯಕ, ಜಿಪಂ ಸದಸ್ಯ ಮುಳ್ಳೂರು ನಾಗರಾಜು. ತಾಪಂ ಸದಸ್ಯ ಹರಳೆ ಕೃಷ್ಣ, ದೊರೆಸ್ವಾಮಿ. ನಾಯಕ ಸಮು ದಾಯದ ಕಬಿನಿ ಪ್ರಕಾಶ್, ಜಿ.ಎಂ. ಸುರೇಶ್, ಪರಮೇಶ್ವರಯ್ಯ ಇನ್ನಿತರರು ಇದ್ದರು.

Translate »