ಚಾಮರಾಜನಗರ

ಯಳಂದೂರಿನಲ್ಲಿ ವಾಲ್ಮೀಕಿ ಭಾವಚಿತ್ರ ಆದ್ದೂರಿ ಮೆರವಣಿಗೆ

October 25, 2018

ಯಳಂದೂರು: ರಾಮಾಯಣ ಕಾವ್ಯ ಪುರುಷ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಜಿಪಂ ಉಪಾಧ್ಯಕ್ಷ ಜೆ.ಯೋಗೇಶ್ ಚಾಲನೆ ನೀಡಿದರು.

ತಾಲೂಕು ಆಡಳಿತ ಮತ್ತು ತಾಲೂಕು ನಾಯಕ ಸಂಘದ ವತಿಯಿಂದ ಹಮ್ಮಿ ಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ತಾಲೂಕು ಕಚೇರಿ ಅವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಯೋಗೇಶ್, ಮಹರ್ಷಿ ವಾಲ್ಮೀಕಿ ಒಬ್ಬ ಆದರ್ಶ ಪುರುಷರಾಗಿದ್ದರು. ಅವರ ತತ್ವ ಸಿದ್ಧಾಂತಗಳನ್ನು ಎಲ್ಲಾ ಜನಾಂಗವು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಮೆರವಣಿಗೆ ಉದ್ದಕ್ಕೂ ಹುಲಿ ವೇಷಾಧಾರಿಗಳು, ಗಾಡಿಗೊಂಬೆಗಳ ನೃತ್ಯ, ನಗಾರಿ ಏಟಿಗೆ ಯುವಕರು ಹೆಜ್ಜೆ ಹಾಕಿದರು. ಮದಕರಿ ವೇಷಧಾರಿ ಎಲ್ಲರ ಗಮನ ಸೆಳೆದರು. ದಾರಿ ಉದ್ದಕ್ಕೂ ವಾಲ್ಮೀಕಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ, ನೀರು ಮಜ್ಜಿಗೆ, ಪಾನಕ ವಿತರಣೆ ಮಾಡಿದರು.

Translate »