ವಾಲ್ಮೀಕಿ ಆದರ್ಶ ಪಾಲನೆ ಅಗತ್ಯ
ಚಾಮರಾಜನಗರ

ವಾಲ್ಮೀಕಿ ಆದರ್ಶ ಪಾಲನೆ ಅಗತ್ಯ

October 25, 2018

ಗುಂಡ್ಲುಪೇಟೆ:  ಮಹರ್ಷಿ ವಾಲ್ಮೀಕಿಯು ಜಗತ್ತಿನ ಮಹಾ ಪುರುಷರಲ್ಲಿ ಒಬ್ಬರಾಗಿದ್ದು, ಅವರ ಆದರ್ಶ ಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡು ವಂತಾಗಬೇಕು ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣ ದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ವಾಲ್ಮೀಕಿಯವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಮಹರ್ಷಿ ವಾಲ್ಮೀಕಿಯ ಜಗತ್ತಿನ ಮಹಾ ಪುರುಷರಲ್ಲಿ ಒಬ್ಬರು. ಅವರ ರಾಮಾ ಯಣ ಕೃತಿಯು ಜಗತ್ತಿಗೆ ಇಂದಿಗೂ ಪ್ರಸ್ತು ತವಾಗಿದೆ. ಅವರ ಆದರ್ಶಗಳನ್ನು ಪಾಲನೆ ಮಾಡುವುದರೊಂದಿಗೆ ರಾಮಾಯಣದ ಸ್ವಾಮಿ ನಿಷ್ಠೆ, ಪ್ರಾಮಾಣಿಕತೆಯನ್ನು ಪ್ರತಿ ಯೋರ್ವರೂ ಬೆಳೆಸಿಕೊಳ್ಳಬೇಕು. ಇಂತಹ ಮಹಾಪುರುಷನ ಜಯಂತಿಯನ್ನು ಆಚ ರಣೆ ಮಾಡುವುದು ನಮ್ಮೆಲ್ಲರಿಗೂ ದೊರೆ ತಿರುವ ಸೌಭಾಗ್ಯ ಎಂದರು. ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಬಿಜೆಪಿ ಮಂಡಲಾಧ್ಯಕ್ಷ ಎನ್.ಮಲ್ಲೇಶ್, ತಹಶೀಲ್ದಾರ್ ಭಾರತಿ ಸೇರಿದಂತೆ ಸಮುದಾಯದ ಮುಖಂ ಡರು ಮತ್ತು ಯುವಕರು ಭಾಗವಹಿಸಿದ್ದರು.

Translate »