ಜೆಡಿಎಸ್ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ
ಮೈಸೂರು

ಜೆಡಿಎಸ್ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

October 25, 2018

ಮೈಸೂರು:  ಮೈಸೂರಿನ ಜಾತ್ಯತೀತ ಜನತಾ ದಳ ಕಚೇರಿಯಲ್ಲಿ ಬುಧವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚ ರಿಸಲಾಯಿತು. ಜೆಡಿಎಸ್ ಮೈಸೂರು ನಗರಾಧ್ಯಕ್ಷ ಚೆಲುವ ರಾಜ್, ಪಾಲಿಕೆ ಸದಸ್ಯ ಎಸ್‍ಬಿಎಂ ಮಂಜು ಮತ್ತು ಪಕ್ಷದ ಇತರೆ ಪದಾ ಧಿಕಾರಿಗಳು, ಮುಖಂಡರು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಬಳಿಕ ಸಿಹಿ ವಿತರಿಸಲಾಯಿತು. ಈ ವೇಳೆ ಪಾಲಿಕೆ ಸದಸ್ಯರಾದ ರಮೇಶ್ ರಮಣಿ, ಅಶ್ವಿನಿ ಅನಂತು, ಶಾಂತಾ, ಕ್ಷೇತ್ರ ಅಧ್ಯಕ್ಷರಾದ ಎಂ.ಎನ್. ರಾಮು, ಮಂಜುನಾಥ್, ಪಕ್ಷದ ನಗರ ಪ್ರಧಾನ ಕಾರ್ಯದರ್ಶಿ ಆರ್.ಮುದ್ದುರಾಜ್, ಮುಖಂಡರಾದ ಫಾಲ್ಕನ್ ಬೋರೇಗೌಡ, ಪ್ರಕಾಶ್, ರವಿಚಂದ್ರೇಗೌಡ, ರಾಜು, ಸಾವಿತ್ರಿ ಇನ್ನಿತರರು ಭಾಗವಹಿಸಿದ್ದರು.

Translate »