ಇತರೆ ಕಾವ್ಯ, ಸಾಹಿತ್ಯ, ನಾಟಕಗಳಿಗೆ ಪ್ರೇರಣೆಯಾದ ವಾಲ್ಮೀಕಿ ರಾಮಾಯಣ
ಮೈಸೂರು

ಇತರೆ ಕಾವ್ಯ, ಸಾಹಿತ್ಯ, ನಾಟಕಗಳಿಗೆ ಪ್ರೇರಣೆಯಾದ ವಾಲ್ಮೀಕಿ ರಾಮಾಯಣ

October 25, 2018

ಮೈಸೂರು: ಕಾವ್ಯ, ಸಾಹಿತ್ಯ, ನಾಟಕಗಳಿಗೆ ವಾಲ್ಮೀಕಿ ರಾಮಾ ಯಣ ಪ್ರೇರಣೆಯಾಗಿದೆ ಎಂದು ಮೈಸೂ ರಿನ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ ಇಂದಿಲ್ಲಿ ಅಭಿಪ್ರಾಯಪಟ್ಟರು.

ಮೈಸೂರಿನ ಮಹಾರಾಜ ಸಂಜೆ ಕಾಲೇ ಜಿನಲ್ಲಿ ವಿಶ್ವ ಮಾನವ ಮೈಸೂರು ವಿವಿ ನೌಕರರ ವೇದಿಕೆ ಬುಧವಾರ ಏರ್ಪಡಿ ಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಾಲ್ಮೀಕಿಯವರು 24,000 ಶ್ಲೋಕಗಳಿಂದ ಕೂಡಿರುವ ರಾಮಾಯಣವನ್ನು ರಚಿಸಿದರು. ತದನಂತರ ಬಂದ ಕಾವ್ಯ, ಸಾಹಿತ್ಯ, ನಾಟಕಾ ದಿಗಳಿಗೆ ಅವು ಪ್ರೇರಣೆಯಾಯಿತು ಎಂಬುದ ರಲ್ಲಿ ಸಂಶಯವೇ ಇಲ್ಲ ಎಂದರು.

ಆ ಕಾಲದಲ್ಲೇ ಹಿಂದುಳಿದ ಮಹರ್ಷಿ ವಾಲ್ಮೀಕಿ ರಾಮಾಯಣದಂತಹ ಶ್ರೇಷ್ಟ ಆದಿ ಕಾವ್ಯ ರಚಿಸಿದರು. ಅವರು ರಚಿಸಿದ ಸಾಹಿತ್ಯ ಎಂದೆಂದಿಗೂ ವಿಜೃಂಬಿಸು ವಂಥದ್ದು. ಮಹರ್ಷಿ ವಾಲ್ಮೀಕಿ ವಿಶ್ವಕಂಡ ಅಪರೂಪದ ದಿಗ್ಗಜ ಎಂದು ತಿಳಿಸಿದರು.
ಮಹಾರಾಜ ಸಂಜೆ ಕಾಲೇಜಿನ ಪ್ರಾಂಶು ಪಾಲ ಡಾ.ಎಸ್.ಆಂಜನೇಯ, ಕಾಲೇಜು ಆಢಳಿತಾಧಿಕಾರಿ ಡಾ.ಅನಿತಾವಿಮಲ, ಪಾಲಿಕೆ ಸದಸ್ಯರಾದ ಡಾ.ಅಶ್ವಿನಿ ಭರತ್, ವೇದಾವತಿ, ವಕೀಲ ಉಮೇಶ್, ವಿಶ್ವ ಮಾನವ ನೌಕರರ ವೇದಿಕೆ ಅಧ್ಯಕ್ಷ ಆರ್. ವಾಸುದೇವ, ಉಪಾ ಧ್ಯಕ್ಷ ಭಾಸ್ಕರ್, ಕಾರ್ಯದರ್ಶಿ ವಿನೋದ್, ಸಂಚಾ ಲಕರಾದ ವಿವೇಕ್, ಭರತ್ ರಾಜ್, ಮಧುಸೂದನ್, ಇತರರಿದ್ದರು.

Translate »