ದಸರಾ ಬೊಂಬೆ ಜೋಡಣೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಮೈಸೂರು

ದಸರಾ ಬೊಂಬೆ ಜೋಡಣೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

October 25, 2018

ಮೈಸೂರು: ಮೈಸೂರಿನ ನಜರ್‍ಬಾದ್ ನಲ್ಲಿರುವ ಬೊಂಬೆಮನೆ, ಪ್ರತಿಮಾ ಗ್ಯಾಲರಿಯಲ್ಲಿ ಭಾರತ ವಿಕಾಸ ಪರಿಷದ್ ಹಾಗೂ ರಾಮಸನ್ಸ್ ಕಲಾ ಪ್ರತಿಷ್ಠಾನ ವತಿಯಿಂದ ದಸರಾ ಬೊಂಬೆ ಜೋಡಣೆ ಸ್ಪರ್ಧೆ-2018ರ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ಡಾ.ಎಂ. ಜಗನ್ನಾಥ ಶೆಣೈ ಮಾತನಾಡಿ, ನಮ್ಮ ನೆಲದ ಸಂಸ್ಕಾರ, ಸಂಸ್ಕøತಿಯನ್ನು ಬೆಳೆಸುವ ಬೊಂಬೆ ಜೋಡಣೆ ಕಾರ್ಯ ಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು. ವಿವಿಧ ಸ್ಥಳಗಳಿಂದ ಬೊಂಬೆಗಳನ್ನು ತಂದು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಹಾಗೆಯೇ ನವರಾತ್ರಿಯ ಅಂಗವಾಗಿ ಮೈಸೂ ರಿನ ಚಿಕ್ಕಚಿಕ್ಕ ಮನೆಗಳಲ್ಲಿಯೂ ಬೊಂಬೆಗಳನ್ನು ಅಲಂ ಕರಿಸುವುದು ವಿಶೇಷವಾಗಿದೆ ಎಂದರು.

ಪರೋಕ್ಷವಾಗಿ ನಾವು ನಮ್ಮ ಸಂಸ್ಕøತಿಯನ್ನು ಈ ರೀತಿಯ ಕಾರ್ಯಕ್ರಮಗಳಿಂದ ಉಳಿಸಿ ಬೆಳೆಸುತ್ತಿದ್ದೇವೆ. ಈ ಬಾರಿ ದಸರಾ ಮಹೋತ್ಸವದಲ್ಲಿ ದೀಪಾಲಂಕಾರ ಅದ್ಬುತವಾಗಿತ್ತು. ಮೈಸೂರು ರಾಜ ಮನೆತನದವರು ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ಆದ್ದರಿಂದ ಅವರನ್ನು ಮರೆಯುವಂತಿಲ್ಲ ಎಂದು ಹೇಳಿದರು.

ಬಹುಮಾನ ವಿತರಣೆ: ಬೊಂಬೆಮನೆ, ವಿಕಾಸ ಪರಿಷದ್ ವತಿಯಿಂದ ನಡೆದ ದಸರಾ ಬೊಂಬೆ ಪ್ರದರ್ಶನ ಸ್ಫರ್ಧೆ ಯನ್ನು ಸಂಘ ಸಂಸ್ಥೆಗಳು, ಎ ಪ್ಲಸ್ ಗುಂಪು, ಎ ಗುಂಪು, ಬಿ ಗುಂಪು, ಹಾಗೂ ಸಿ ಗುಂಪು ಎಂದು ಐದು ವಿಭಾಗ ಗಳಲ್ಲಿ ನಡೆಸಲಾಗಿದ್ದು, ಸಂಘ ಸಂಸ್ಥೆಗಳ ವಿಭಾಗದಲ್ಲಿ ಡಿಎವಿ ಪಬ್ಲಿಕ್ ಶಾಲೆ ಪ್ರಥಮ ಬಹುಮಾನ ಪಡೆದುಕೊಂಡಿತು. ಹ್ಯಾಪಿ ಕಿಡ್ಸ್ ಹೋಂ ದ್ವಿತೀಯ ಬಹುಮಾನ ಗಳಿಸಿದರೆ, ಮಾನಸರೋವರ್ ಪುಷ್ಕರಣಿ ಸಂಸ್ಥೆ ತೃತೀಯ ಬಹು ಮಾನ ಪಡೆಯಿತು. ‘ಎ ಪ್ಲಸ್’ ಗುಂಪು ವಿಭಾಗದಲ್ಲಿ ಗಿರಿದರ್ಶಿನಿ ಬಡಾವಣೆಯ ಗೀತಾ ಶ್ರೀಹರಿ ಪ್ರಥಮ ಬಹುಮಾನ, ಜೆ.ಪಿ.ನಗರದ ವಿಜಯ ರಾಧಾಕಾಂತ ದ್ವಿತೀಯ ಬಹುಮಾನ ಹಾಗೂ ಟಿ.ಕೆ.ಬಡಾವಣೆಯ ರಾಮ್ ತೃತೀಯ ಬಹುಮಾನ ಪಡೆದುಕೊಂಡರು.

‘ಎ’ ಗುಂಪಿನಲ್ಲಿ ಸರಸ್ವತಿಪುರಂನ ನಾಗಪ್ರಸಾದ್ ಪ್ರಥಮ ಬಹುಮಾನ, ರಾಮಕೃಷ್ಣ ನಗರದ ಹೆಚ್ ಬ್ಲಾಕ್‍ನ ರಮಾ ಮಣಿ ಗುರುದತ್, ಅರವಿಂದನಗರದ ಜಿ.ರಾಜೇಶ್ವರಿ ತೃತೀಯ ಬಹುಮಾನ, ಪ್ರೋತ್ಸಾಹಕ ಬಹುಮಾನವನ್ನು ರಾಮಾ ನುಜ ರಸ್ತೆಯಲ್ಲಿರುವ ಪದ್ಮಪ್ರಿಯ ಪಡೆದುಕೊಂಡರು. ‘ಬಿ’ ಗುಂಪಿನಲ್ಲಿ ಇಟ್ಟಿಗೆಗೂಡಿನ ಅನಿತ ಅಚ್ಯುತ್ ಮೊದಲ ಬಹುಮಾನ, ಶ್ರೀರಾಂಪು 2ನೇ ಹಂತದ ರಜನಿ ಕೃಷ್ಣ ದ್ವಿತೀಯ ಬಹುಮಾನ, ಗೋಕುಲಂನ ವಿ.ಎಸ್.ಪ್ರಿಯಾಂಕ ತೃತೀಯ ಬಹುಮಾನ, ಪ್ರೋತ್ಸಾಹಕ ಬಹುಮಾನವನ್ನು ಟಿ.ಕೆ.ಬಡಾವಣೆಯ ಸುಮ ಶಿವಪ್ರಕಾಶ್ ಪಡೆದರು.

‘ಸಿ’ ಗುಂಪಿನಲ್ಲಿ ರಾಮಕೃಷ್ಣನಗರ ಐ ಬ್ಲಾಕ್‍ನ ಸ್ವರೂಪಿಣಿ ಪ್ರಥಮ ಬಹುಮಾನ, ಜಯಲಕ್ಷ್ಮಿಪುರಂನ ಸ್ವರೂಪ ನಂದಕುಮಾರ್ ದ್ವಿತೀಯ ಬಹುಮಾನ, ನಜರ್‍ಬಾದ್‍ನ ನಿಶ್ಚಿತ ತೃತೀಯ ಬಹುಮಾನ, ಪ್ರೋತ್ಸಾಹಕ ಬಹು ಮಾನವನ್ನು ದಟ್ಟಗಳ್ಳಿಯ ಮಂಜುಳಾಸ್ವಾಮಿ ಪಡೆದರೆ, ವಿಶೇಷ ಬಹುಮಾನವನ್ನು ಅಶೋಕ ರಸ್ತೆಯಲ್ಲಿರುವ ರೇಣುಕ ಶ್ರೀನಿವಾಸ್ ಪಡೆದುಕೊಂಡರು.
ಪ್ರಾಧ್ಯಾಪಕಿ ಡಾ.ಜ್ಯೋತಿಶಂಕರ್, ರಾಮಸನ್ಸ್ ಕಲಾ ಪ್ರತಿಷ್ಠಾನದ ಅಧ್ಯಕ್ಷ ಡಿ.ರಾಮಸಿಂಗ್, ಭಾರತ್ ವಿಕಾಶ ಪರಿಷದ್ ಭಾರದ್ವಾಜ ಶಾಖೆ ಅಧ್ಯಕ್ಷ ಡಾ.ಬಿ.ಎನ್. ರಂಗನಾಥ್, ಕಾರ್ಯದರ್ಶಿ ಡಾ.ಬಿ.ಎಸ್.ನರಕೇಸರಿ, ಕೌಶಲ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »