ಒಂದೇ ಸೂರಿನಡಿ ಸರ್ಕಾರದ ಸೇವೆಗಳ ಮಾಹಿತಿ ಕಣಜ
ಮೈಸೂರು

ಒಂದೇ ಸೂರಿನಡಿ ಸರ್ಕಾರದ ಸೇವೆಗಳ ಮಾಹಿತಿ ಕಣಜ

October 22, 2018

ಮೈಸೂರು: ರಾಜ್ಯ ಸರ್ಕಾರದ ಸೌಲಭ್ಯಗಳ ಸಮಗ್ರ ಮಾಹಿತಿ ಒಂದೇ ಸೂರಿನಡಿ ಅನಾವರಣಗೊಂಡಿದೆ. ರಾಜ್ಯದ ಮೈತ್ರಿ ಸರ್ಕಾರದ ಹತ್ತು ಹಲವು ಯೋಜನೆಗಳು ಹಾಗೂ ಸವ ಲತ್ತುಗಳ ಮಾಹಿತಿ ಒದಗಿಸುವ ಸಲು ವಾಗಿ ವಸ್ತುಪ್ರದರ್ಶನ ಪ್ರಾಧಿಕಾರದ ಆವ ರಣದಲ್ಲಿ ನಿರ್ಮಿಸಿರುವ ಮಳಿಗೆ ತನ್ನ ವಿಶೇಷ ವಿನ್ಯಾಸದಿಂದಲೇ ಜನರ ಗಮನ ಸೆಳೆಯುತ್ತಿದೆ. ದಸರಾ ಮಹೋತ್ಸವದ ಅಂಗವಾಗಿ ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆ ವತಿಯಿಂದ ಈ ಮಳಿಗೆಯನ್ನು ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಜನತೆಗೆ ಮೈತ್ರಿ ಸರ್ಕಾರದ ಕಾರ್ಯ ಕ್ರಮಗಳು, ಯೋಜನೆಗಳ ಪರಿಚಯ ಮಾಡಿಕೊಡಲು ಯತ್ನಿಸಲಾಗಿದೆ.

ಸರ್ಕಾರದ 100 ದಿನಗಳ ಆಡಳಿತದ ಅಭಿವೃದ್ಧಿ ಕಾರ್ಯಕ್ರಮಗಳ ಚಿತ್ತಾರ ಇಲ್ಲಿದೆ. ಹಲವು ಬಣ್ಣಗಳಿಂದ ಕಂಗೊ ಳಿಸುತ್ತಿರುವ ಈ ಮಳಿಗೆಯ ಎರಡು ದ್ವಾರಗಳನ್ನು ಸ್ತಂಭಗಳನ್ನು ಹೊಂದಿ ರುವಂತೆ ವಿನ್ಯಾಸಗೊಳಿಸಲಾಗಿದೆ. ದ್ವಾರದ ಪಕ್ಕದಲ್ಲೇ ರೈತ ಸ್ನೇಹಿ ಶೀರ್ಷಿಕೆಯಡಿ ಹೊಲ ಉತ್ತು-ಬಿತ್ತುವ ರೈತನ ಪ್ರತಿ ಕೃತಿಗಳು ಕಣ್ಮನ ಸೆಳೆಯುತ್ತಿವೆ. 40*60 ಅಡಿ ವಿಸ್ತೀರ್ಣದ ಮಳಿಗೆಯಲ್ಲಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನಿಂತ ಭಂಗಿಯ ಕಟೌಟ್ ಗಮನ ಸೆಳೆ ಯುತ್ತದೆ. ಮುಂದೆ ಅರಳೀಕಟ್ಟೆಯ ಕೆಳಗೆ ಹಳ್ಳಿಗರು ಪಂಚಾಯಿತಿ ನಡೆಸುತ್ತಿರುವ ದೃಶ್ಯಾವಳಿ ನಿರ್ಮಿಸಲಾಗಿದೆ. ಆ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂಬ ಸಂದೇಶ ರವಾನಿಸಲಾಗಿದೆ. ಎಡಭಾಗದ ದ್ವಾರದ ಮೂಲಕ ಪ್ರವೇಶ ಪಡೆಯುತ್ತಿದ್ದಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ನಮಸ್ಕರಿಸುತ್ತಿರುವ ಛಾಯಾಚಿತ್ರದ ಫಲಕ ಕಾಣಸಿಗಲಿದೆ. ಈ ಫಲಕದಲ್ಲಿನ `ಜನಪರ, ಸಮಾಜ ಮುಖಿ, ಜನಸ್ನೇಹಿ ಹಾಗೂ ಮಾನ ವೀಯ ನೆಲೆಗಟ್ಟಿನಲ್ಲಿ ಮೈತ್ರಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ’ ಎಂಬ ಸಾಲುಗಳು ಗಮನ ಸೆಳೆಯುತ್ತವೆ.

ಜನತಾ ದರ್ಶನ, ನಿರುದ್ಯೋಗ ನಿವಾ ರಣೆ ನಿಶ್ಚಯ ನಡೆ, ಕಾಯಕ ಬಡ್ಡಿರಹಿತ ಸಾಲ, ಸಣ್ಣ ವ್ಯಾಪಾರಿಗಳಿಗೆ ಕಿರು ಬಂಡವಾಳ ನೆರವು, ಉದ್ದಿಮೆದಾರರಿಗೆ ತರಬೇತಿ, ಅವಕಾಶ ವಂಚಿತರ ಅಭ್ಯು ದಯಕ್ಕೆ ಮಹಾಹೆಜ್ಜೆ ಯೋಜನೆಗಳ ಬಗೆಗೆ ಸುಲಭ ಹಾಗೂ ಸರಳವಾಗಿ ಇಲ್ಲಿ ತಿಳಿದುಕೊಳ್ಳಬಹುದಾಗಿದೆ.

ತಾಯಿ-ಮಗುವಿನ ಲಾಲನೆ ಪಾಲ ನೆಯ `ಮಾತೃಶ್ರೀ’ ಯೋಜನೆ, ಹಿರಿಯ ನಾಗರಿಕರ ಸಹಾಯಧನದ `ಸಂಧ್ಯಾ ಸುರಕ್ಷಾ’ ಯೋಜನೆ, ಶಿಕ್ಷಣ ಸುಧಾರಣೆ ಸಂಕಲ್ಪ, ಹಸಿರು ಕರ್ನಾಟಕ, ನಿವೇಶನ ಹಂಚಿಕೆ, ಬೆಂಗಳೂರಿನಲ್ಲಿ ಮೂರನೇ ಹಂತದಲ್ಲಿ ಹೊಸದಾಗಿ 95 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಚಾಲನೆಯ ಸಂಕ್ಷಿಪ್ತ ನೋಟ ಗಮನ ಸೆಳೆಯಲಿವೆ.

Translate »