ಶಿಕ್ಷಕರು, ಉಪನ್ಯಾಸಕರಿಗೆ ಮೂಲ ವೇತನದಲ್ಲಿ ಹೆಚ್ಚುವರಿ ಬಡ್ತಿ ವೇತನ ವಿಲೀನ
ಮೈಸೂರು

ಶಿಕ್ಷಕರು, ಉಪನ್ಯಾಸಕರಿಗೆ ಮೂಲ ವೇತನದಲ್ಲಿ ಹೆಚ್ಚುವರಿ ಬಡ್ತಿ ವೇತನ ವಿಲೀನ

October 22, 2018

ಬೆಂಗಳೂರು:  ಶಿಕ್ಷಕರು ಹಾಗೂ ಉಪನ್ಯಾಸಕರ ಬೇಡಿಕೆಗೆ ರಾಜ್ಯ ಸರಕಾರ ಕೊನೆಗೂ ಮಣಿದಿದ್ದು, ಸರಕಾರಿ, ಅನುದಾನಿತ ಪ್ರೌಢಶಾಲಾ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ 2016ರ ಜೂ.1ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಿದ್ದ ಒಂದು ಹೆಚ್ಚುವರಿ ವಿಶೇಷ ಬಡ್ತಿ ವೇತನವನ್ನು ಅವರ ಮೂಲ ವೇತನದೊಂದಿಗೆ ವಿಲೀನಗೊಳಿಸಿ ನ.1ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ರಾಜ್ಯ ಸರಕಾರಿ, ಅನು ದಾನಿತ ಪ್ರೌಢಶಾಲಾ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ 2016ರ ಜೂ.1ರಿಂದ ಜಾರಿಗೆ ಬರುವಂತೆ ಹೆಚ್ಚುವರಿ ಬಡ್ತಿ ವೇತನವನ್ನು ಸರ್ಕಾರ ಮಂಜೂರು ಮಾಡಿತ್ತು.

ಆದರೆ 6ನೇ ವೇತನ ಆಯೋಗದ ಶಿಫಾರಸು ಜಾರಿ ವೇಳೆ ಈ ಹೆಚ್ಚುವರಿ ಬಡ್ತಿ ವೇತನವನ್ನು ‘ಪರ್ಸನಲ್ ಪೇ’ ಎಂದು ಪ್ರತ್ಯೇಕವಾಗಿಸಿ, ಇದರಿಂದ ಮೂಲವೇತನದ ಜತೆಗೆ ಬರುವ ಭತ್ಯೆಗಳು ಕಡಿಮೆ ಯಾಗುವುದರ ಜತೆಗೆ, ನಿವೃತ್ತಿ ನಂತರ ಕೆಲವು ಸವಲತ್ತುಗಳಿಂದ ವಂಚಿತರಾಗಬೇಕಾಗಿತ್ತು. ಸರಕಾರದ ಈ ಕ್ರಮಕ್ಕೆ ಶಿಕ್ಷಕರು, ಉಪ ನ್ಯಾಸಕರು ಹಾಗೂ ಪ್ರಾಂಶುಪಾಲರ ಸಂಘಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಸರಕಾರಿ, ಅನುದಾನಿತ ಪದವಿ ಪೂರ್ವ ಕಾಲೇಜು ಗಳಲ್ಲಿ 10 ವರ್ಷ ಸೇವೆ ಪೂರ್ಣಗೊಳಿಸಿರುವ ಹಿರಿಯ ಉಪನ್ಯಾ ಸಕರಿಗೆ 2012ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿಗದಿಪಡಿಸಲಾಗಿದ್ದ ‘ಆಯ್ಕೆ ಕಾಲಿಕ ವೇತನ ಶ್ರೇಣಿ’ಯನ್ನು 2017ರ ಜು.1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಿ ಹಾಗೂ ಇದರ ಆರ್ಥಿಕ ಲಾಭವನ್ನು 2018ರ ಏ.1ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಿ ಸರಕಾರ ಆದೇಶ ಹೊರಡಿಸಿದೆ. 10 ವರ್ಷ ಸೇವೆ ಪೂರ್ಣಗೊಳಿಸಿದ ಉಪನ್ಯಾಸಕರ 2018ರ ಪರಿಷ್ಕೃತ ವೇತನ ಶ್ರೇಣಿಯ 45,300-88,300 ನಿಗದಿಪಡಿಸಲಾಗಿದೆ. ಈ ಮೊದಲು ಬಡ್ತಿ ಹೊಂದಿದ ಹಿರಿಯ ಉಪನ್ಯಾಸಕರಿಗೆ 25300-40500 ರೂ. ವೇತನ ಶ್ರೇಣಿ ಇತ್ತು.

ಧರಣಿ ಕೈಬಿಟ್ಟ ಉಪನ್ಯಾಸಕರು: ಸರಕಾರದ ಆದೇಶವನ್ನು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘಗಳು ಸ್ವಾಗತಿಸಿವೆ. ಇದೇ ಬೇಡಿಕೆ ಮುಂದಿಟ್ಟು ಅ.22ರಿಂದ ನಡೆಸಲು ಉದ್ದೇಶಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರ ಕೈಬಿಟ್ಟಿರುವುದಾಗಿ ಪಿಯು ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದ್ದಾರೆ.

2008ರ ನಂತರ ನೇಮಕಾತಿ ಹೊಂದಿದ ಉಪನ್ಯಾಸಕರಿಗೆ ಮತ್ತು ಪಾಂಶುಪಾಲರ 1 ಸಾವಿರ ರೂ. ಎಕ್ಸ್‍ಗ್ರೇಷಿಯಾವನ್ನು ಮೂಲ ವೇತನಕ್ಕೆ ವಿಲೀನಗೊಳಿಸುವಂತೆ ಸಂಘಗಳು ಒತ್ತಾಯಿಸಿವೆ. ಪ್ರೌಢಶಾಲೆಯಿಂದ ಬಡ್ತಿ ಹೊಂದಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರು ವವರಿಗೆ ಕಾಲ ಮಿತಿ ವೇತನ ಬಡ್ತಿ, ಪಿಎಚ್‍ಡಿ, ಸ್ಲೆಟ್, ನೆಟ್ ಪದವಿ ಹೊಂದಿರುವ ಉಪನ್ಯಾಸಕರಿಗೆ ಪದವಿ ಕಾಲೇಜುಗಳಿಗೆ ಬಡ್ತಿ ನೀಡಬೇಕು. ಗುತ್ತಿಗೆ ಉಪನ್ಯಾಸಕರ ಸಮಸ್ಯೆ ಪರಿಹರಿಸಬೇಕು ಹಾಗೂ 2013ರ ಬ್ಯಾಚ್‍ನ ಡೈಸ್ ನಾನ್ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಆಗ್ರಹಿಸಿದ್ದಾರೆ.

Translate »