ನಾಳೆ ಎರಡನೇ ಶನಿವಾರ ರಜೆ, ಅ.20ರಂದು ರಜೆ ಇಲ್ಲ
ಮೈಸೂರು

ನಾಳೆ ಎರಡನೇ ಶನಿವಾರ ರಜೆ, ಅ.20ರಂದು ರಜೆ ಇಲ್ಲ

October 12, 2018

ಬೆಂಗಳೂರು: ಎರಡನೇ ಶನಿವಾರ (ಅ.13)ದಂದು ಮಾಮೂಲಿನಂತೆ ಸರ್ಕಾರಿ ರಜೆ ಇದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಎರಡನೇ ಶನಿವಾರ (ಅ.13) ಇದ್ದ ರಜೆಯನ್ನು ರದ್ದುಪಡಿಸಿ ಮೂರನೇ ಶನಿವಾರಕ್ಕೆ (ಅ.20) ರಜೆ ನೀಡಿ ದಸರಾ ರಜೆ ಸತತವಾಗಿ ನಾಲ್ಕು ದಿನ ದೊರಕುವಂತೆ ಮಾಡಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿತ್ತು. ಹಾಗಾಗಿ ಸರ್ಕಾರ ಇದರ ಬಗ್ಗೆ ಸ್ಪಷ್ಟನೆ ನೀಡಿದೆ.

ಗುರುವಾರ (ಅ.18) ಆಯುಧ ಪೂಜೆ, ಶುಕ್ರವಾರ (ಅ.19) ವಿಜಯದಶಮಿಗೆ ಸರ್ಕಾರಿ ರಜೆ ಇದೆ. ಶನಿವಾರ (ಅ.20) ರಜೆ ನೀಡಿದರೆ ಮರುದಿನ ಭಾನುವಾರ (ಅ.21) ಸೇರಿ ಒಟ್ಟು ನಾಲ್ಕು ದಿನಗಳ ಸಾಲು ಸಾಲು ರಜೆ ಆಗುತ್ತದೆ. ಹಾಗಾಗಿ ಸರ್ಕಾರ ಈ ನಿರ್ಣಯ ಕೈಗೊಂಡಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಗಿತ್ತು.

ಆದರೆ ಇದೀಗ ಸರ್ಕಾರವು ಮೂರನೇ ಶನಿವಾರ ರಜೆ ಇಲ್ಲವೆಂದು ಸ್ಪಷ್ಟನೆ ನೀಡಿರುವ ಕಾರಣ ಸರ್ಕಾರಿ ನೌಕರರು ನಿರಾಸೆ ಅನುಭವಿಸುವಂತಾಗಿದೆ. ಸರ್ಕಾರ ರಜೆ ನೀಡದಿದ್ದರೂ ಸಹ ಅಂದು ಹೆಚ್ಚಿನ ಜನ ರಜೆ ತೆಗೆದುಕೊಳ್ಳುತ್ತಾರೆ.

Translate »