ರಾಜೀನಾಮೆ ಅಂಗೀಕರಿಸುವ ವಿಚಾರ ಆಮೇಲೆ ನೋಡೋಣ: ಸಿಎಂ
ಮೈಸೂರು

ರಾಜೀನಾಮೆ ಅಂಗೀಕರಿಸುವ ವಿಚಾರ ಆಮೇಲೆ ನೋಡೋಣ: ಸಿಎಂ

October 12, 2018

ಬೆಂಗಳೂರು: -ಶಿಕ್ಷಣ ಸಚಿವ ಎನ್.ಮಹೇಶ್ ಅವರು ರಾಜೀನಾಮೆ ನೀಡಿರುವುದು ಅವರ ಪಕ್ಷದ ಆಂತರಿಕ ವಿಚಾರವಾಗಿದ್ದು, ಸಚಿವರಾಗಿದ್ದರೆ ಪಕ್ಷ ಸಂಘಟನೆ ಸಾಧ್ಯವಿಲ್ಲವೆಂದು ಅವರು ರಾಜೀನಾಮೆ ಕೊಟ್ಟಿರಬಹುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧ ದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಹೇಶ್ ಅವರ ರಾಜೀನಾಮೆ ಅಂಗೀಕರಿಸುವ ವಿಚಾರ ಆಮೇಲೆ ನೋಡೊಣ ಎಂದ ರಲ್ಲದೆ, ಬಿಎಸ್‍ಪಿ ಮುಖಂಡರು ತಮ್ಮ ಸಂಪರ್ಕದಲ್ಲಿರುವುದಾಗಿ ತಿಳಿಸಿದರು. ಕೆಲ ವಿಷಯಗಳನ್ನು ಬಹಿರಂಗವಾಗಿ ಕೇಳಲು ಸಾಧ್ಯವಿಲ್ಲ. ಸೂಕ್ತ ಸಮಯ ದಲ್ಲಿ ಎಲ್ಲಾ ವಿಚಾರ ಕುರಿತು ಮಾತ ನಾಡುತ್ತೇನೆ ಎಂದ ಮುಖ್ಯಮಂತ್ರಿಗಳು, ಊಹಾಪೋಹ ಸುದ್ದಿಗಳಿಗೆಲ್ಲಾ ಪ್ರತಿ ಕ್ರಿಯಿಸಲು ಸಾಧ್ಯವಿಲ್ಲ ಎಂದು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.

Translate »