ಮೈಸೂರು

ರಾಜ್ಯ ಸರ್ಕಾರದಿಂದ ವಿವಿಧ ಇಲಾಖೆಗಳಿಂದ ಮಹಿಳೆಯರಿಗೆ ಸಾಲ ಸೌಲಭ್ಯ

November 9, 2018

ಮೈಸೂರು:  ಉದ್ಯೋಗಿನಿ, ಹೈನುಗಾರಿಕೆ, ಕಿರುಸಾಲ, ಚೇತನ-ಲೈಂಗಿಕ ಅಲ್ಪಸಂಖ್ಯಾತರ ಸ್ವ-ಉದ್ಯೋಗ ಹಾಗೂ ಸಮೃದ್ಧಿ ಯೋಜನೆಗಳಡಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಸರ್ಕಾರದ ಸಹಾಯ ಧನದೊಂದಿಗೆ ಈ ಸೌಲಭ್ಯಗಳನ್ನು 2018-19ನೇ ಸಾಲಿನಲ್ಲಿ ಪಡೆದು ಕೊಳ್ಳಲು ಆಸಕ್ತರಾಗಿರುವ ಅರ್ಹ ಫಲಾನುಭವಿಗಳು ಸೂಕ್ತ ದಾಖಲೆ ಪತ್ರಗಳೊಡನೆ ಅರ್ಜಿ ಸಲ್ಲಿಸಬಹುದಾಗಿದೆ.

ಉದ್ಯೋಗಿನಿ: ಈ ಯೋಜನೆಯಡಿ ವಾಣಿಜ್ಯೋ ದ್ಯಮ ಚಟುವಟಿಕೆ ಆರಂಭಿಸಲು ಆಸಕ್ತರಾಗಿರುವ 18ರಿಂದ 55 ವರ್ಷ ವಯೋಮಿತಿಯ ಮಹಿಳೆಯರು ಅರ್ಜಿ ಸಲ್ಲಿಸಿ 50 ಸಾವಿರ ರೂ.ಗಳಿಂದ ಗರಿಷ್ಠ 3 ಲಕ್ಷ ರೂ.ಗಳವರೆಗೂ ಸಾಲವನ್ನು ಬ್ಯಾಂಕ್ ಮೂಲಕ ಪಡೆಯಬಹುದಾಗಿದೆ. ಅದಕ್ಕಾಗಿ ಅರ್ಜಿದಾರ ಮಹಿಳೆ ವಾಣಿಜ್ಯ ಉದ್ಯಮ ಘಟಕ ಆರಂಭಿಸಲು ಸಂಬಂಧಿ ಸಿದ ಇಲಾಖೆ/ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಉದ್ಯಮ ಪರವಾನಗಿ ಪಡೆದಿರಬೇಕು. ಈ ಯೋಜನೆ ಯಡಿ ಸಾಲ ಪಡೆಯಲು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಅರ್ಜಿ ಪಡೆದುಕೊಳ್ಳಬಹುದು.
ಹೈನುಗಾರಿಕೆ: ಈ ಯೋಜನೆಯಡಿ ಸಾಲ ಪಡೆ ಯಲು ಬಯಸುವವರು ಆಯಾ ಗ್ರಾಮದ ಹಾಲಿನ ಡೇರಿಯಿಂದ ಸದಸ್ಯತ್ವದ ಕಾರ್ಡ್ ಹೊಂದಿರಬೇಕು.

ಕಿರುಸಾಲ: ಈ ಯೋಜನೆಯಡಿ ಸಾಲ ಪಡೆದುಕೊಳ್ಳಲು ಇಚ್ಛಿಸುವ ಸ್ತ್ರೀಶಕ್ತಿ ಸಂಘದ ಗುಂಪುಗಳು ಸ್ವತಃ ಅರ್ಜಿಗಳನ್ನು ಸಿದ್ಧ ಪಡಿಸಿಕೊಂಡು ಸಲ್ಲಿಸುವುದು. 3 ವರ್ಷ ಮೇಲ್ಪಟ್ಟ ಸ್ತ್ರೀಶಕ್ತಿ ಗುಂಪುಗಳು ಅರ್ಜಿ ಸಲ್ಲಿಸಬಹುದು. ಈ ಗುಂಪಿನ ಸದಸ್ಯರು ಹೈನುಗಾರಿಕೆ ಹೊರತು ಪಡಿಸಿ ಕೋಳಿ ಸಾಕಾಣೆ, ಸಿದ್ಧ ಆಹಾರ ತಯಾರಿಕಾ ಘಟಕ, ನ್ಯಾಯಬೆಲೆ ಅಂಗಡಿ, ಲೇಡೀಸ್ ಕಾರ್ನರ್, ಕೇಟರಿಂಗ್, ಹೂ-ತರಕಾರಿ ಬೆಳೆದು ಮಾರಾಟ ಮಾಡುವುದು, ಸಮವಸ್ತ್ರ ಸಿದ್ಧ ಉಡುಪು ಘಟಕ, ವಿವಿಧ ಚಟುವಟಿಕೆಗಳಿಗೆ(ಒಟ್ಟು 2 ಉದ್ದೇಶಗಳಿಗೆ) ಸಾಲ ಪಡೆಯಬಹುದು.

ಚೇತನ-ಲೈಂಗಿಕ ಅಲ್ಪಸಂಖ್ಯಾತರ ಸ್ವ-ಉದ್ಯೋಗ: ಈ ಯೋಜನೆಯಡಿ ಸಹಾಯಧನ ಸಹಿತ ಸಾಲ ಪಡೆದುಕೊಳ್ಳಲು ಬಯಸುವವರು 19 ವರ್ಷ ಮೇಲ್ಪಟ್ಟ ವರಾಗಿರಬೇಕು. ಆಶೋದಯ ಸಮಿತಿ/ಅಕಾಡೆಮಿ ಯಲ್ಲಿ ನೋಂದಣಿಯಾಗಿರಬೇಕು. ಜಾತಿ-ಆದಾಯ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ, 3 ಭಾವಚಿತ್ರ, 20 ರೂ. ಛಾಪಾ ಕಾಗದ, ಬ್ಯಾಂಕ್ ಖಾತೆ ವಿವರಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಮೈಸೂರಿನ ಬಲ್ಲಾಳ ವೃತ್ತ ಸಮೀಪದಲ್ಲಿ ರುವ ಆಶೋದಯ ಸಮಿತಿ ಕಚೇರಿ ಯಿಂದ ಅರ್ಜಿ ನಮೂನೆ ಪಡೆದು ಕೊಂಡು ಭರ್ತಿ ಮಾಡಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನ.17 ಕಡೆ ದಿನ.

ಸಮೃದ್ಧಿ: ಈ ಯೋಜನೆಯಡಿ ಸಾಲ ಪಡೆಯಲು 18ರಿಂದ 60 ವರ್ಷ ವಯೋ ಮಿತಿಯ, ಬಿಪಿಎಲ್ ಕಾರ್ಡ್ ಹೊಂದಿ ರುವ ಮಹಿಳೆಯರು ಮಾತ್ರ ಅರ್ಹರು. ನಗರ, ಪಟ್ಟಣ, ಗ್ರಾಮಗಳಲ್ಲಿನ ಸ್ಥಳೀಯ ಸಂಸ್ಥೆಗಳಿಂದ `ಬೀದಿಬದಿ ವ್ಯಾಪಾರಿ’ ಎಂಬ ಗುರುತಿನ ಚೀಟಿ ಹೊಂದಿರಬೇಕು. ಮತದಾರರ ಗುರುತಿನ ಚೀಟಿ, ಆಧಾರ್, ಬಿಪಿಎಲ್ ಕಾರ್ಡ್ ಕಡ್ಡಾಯ ಹೊಂದಿರಬೇಕು. ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಖಾತೆ ಹೊಂದಿರಬೇಕು. ಈ ಯೋಜನೆಗಳಡಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಜಿದಾರರು ಕಡ್ಡಾಯವಾಗಿ ಬ್ಯಾಂಕ್ ಖಾತೆ ಹೊಂದಿರಬೇಕು. ಆ ಖಾತೆಯು ಆಧಾರ್ ಸಂಖ್ಯೆಗೆ ಜೋಡಣೆಯಾಗಿರಬೇಕು. ಖಾತೆ ಹೊಂದಿದ ಬ್ಯಾಂಕ್‍ನ ವ್ಯಾಪ್ತಿಯಲ್ಲಿ ಇರುವ ಇತರೆ ಬ್ಯಾಂಕ್‍ಗಳಿಂದ `ನೋ ಡ್ಯು’ (ಯಾವುದೇ ಸಾಲ ಬಾಕಿ ಇಲ್ಲ) ಎಂಬ ಪ್ರಮಾಣಪತ್ರ ಸಲ್ಲಿಸಬೇಕು. ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಡಿಐಸಿ ಕಚೇರಿಗಳಿಂದ ಯಾವುದೇ ಸಾಲ ಸೌಲಭ್ಯ ಪಡೆದಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಬೇಕು. ಉದ್ಯೋಗಿನಿ ಯೋಜನೆಯಡಿ ಉಪಾಹಾರ ಗೃಹ, ಕಾಫಿ-ಟೀ ಕೇಂದ್ರ, ಮೆಸ್ ನಿರ್ವಹಣೆ, ಮೀನು-ಚಿಕನ್ ಮಾರಾಟ ಕೇಂದ್ರ, ನಂದಿನಿ ಪಾರ್ಲರ್, ಹಣ್ಣು-ತರಕಾರಿ ಮಳಿಗೆ, ಜನರಲ್ ಸ್ಟೋರ್, ಸೀರೆ ಅಂಗಡಿ, ಸಿದ್ಧ ಉಡುಪು ಮಳಿಗೆ, ಬಾಟಿಕ್, ಬ್ಯೂಟಿ ಪಾರ್ಲರ್, ದಿನಸಿ ಅಂಗಡಿ, ಬೇಬಿ ಸಿಟ್ಟಿಂಗ್, ಹಿಟ್ಟಿನ ಗಿರಣಿ, ದೋಸೆ ಹಿಟ್ಟು ರುಬ್ಬುವ ಘಟಕ, ಕಂಪ್ಯೂಟರ್ ತರಬೇತಿ ಕೇಂದ್ರ, ಜಾಬ್ ವರ್ಕ್ ಕೇಂದ್ರ, ಜೆರಾಕ್ಸ್ ಮಳಿಗೆ, ಲೇಡೀಸ್ ಕಾರ್ನರ್ ಆರಂಭಿಸಲು ಸಾಲ ಸೌಲಭ್ಯ ಪಡೆಯಬಹುದು. ಈ ವಾಣಿಯ-ಉದ್ಯಮ ಘಟಕಗಳನ್ನು ಇತ್ತೀಚೆಗೆ ಆರಂಭಿಸಿದವರೂ ಉದ್ಯೋಗಿನಿ ಯೋಜನೆಯ ನೆರವು ಪಡೆದುಕೊಳ್ಳಬಹುದು ಎಂದು ವಾರ್ತಾ ಇಲಾಖೆ ಪ್ರಕಟಣೆ ತಿಳಿಸಿದೆ.

Translate »