ಮೈಸೂರಲ್ಲಿ ಆಯುರ್ ದೀಪೋತ್ಸವ
ಮೈಸೂರು

ಮೈಸೂರಲ್ಲಿ ಆಯುರ್ ದೀಪೋತ್ಸವ

November 9, 2018

ಮೈಸೂರು: ಮೈಸೂರು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು ಸರ್ಕಾರಿ ಆಯುರ್ವೇದ ಹೈ-ಟೆಕ್ ಪಂಚ ಕರ್ಮ ಆಸ್ಪತ್ರೆ, ಮೈಸೂರು ಸರ್ಕಾರಿ ಆಯು ರ್ವೇದ ಸಂಶೋಧನಾ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ‘ರಾಷ್ಟ್ರೀಯ ಆಯುರ್ವೇದ ದಿನಾಚರಣೆ’, ‘ಧನ್ವಂತರಿ ಜಯಂತಿ’ ಹಾಗೂ ‘ಆಯುರ್ ದೀಪೋತ್ಸವ’ ನಡೆಯಿತು.

ಮೈಸೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಕಾವೇರಿ ಆಸ್ಪತ್ರೆ ನಿರ್ದೇಶಕ ಡಾ. ಜಿ.ಆರ್.ಚಂದ್ರಶೇಖರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ದೇಶ ದಲ್ಲಿ ಆಯುರ್ವೇದ ಔಷಧಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಹಲವಾರು ಕಾಯಿಲೆಗಳನ್ನು ಗುಣಪಡಿಸಬಹುದಾಗಿದೆ. ಸರ್ಕಾರ ಆಯುರ್ವೇದ ಕಾಲೇಜುಗಳ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಆದರೆ, ಯೋಜನೆಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.

ಸಂಸ್ಕೃತ ವಿಲಾಸ ಪಾಠಶಾಲೆಯ ಪ್ರಾಧ್ಯಾ ಪಕ ಗಣಪತಿ ಭಟ್ ಮಾತನಾಡಿ, ಭಾರ ತೀಯರ ಜೀವನ ಪದ್ದತಿ ಕೆಲವರಿಗೆ ವಿಚಿತ್ರವಾದರೆ, ಇನ್ನೂ ಕೆಲವರಿಗೆ ವಿಶೇಷವಾಗಿದೆ. ಅಂತ್ಯವಿಲ್ಲದ ಜಲರಾಶಿ ತೆರೆದು ಕೊಳ್ಳುವಂತೆ ಈ ದೇಶದ ಸಂಸ್ಕೃತಿ ತೆರೆದುಕೊಳ್ಳುತ್ತದೆ. ಬೆಳಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ನಾವು ಧಾರ್ಮಿಕ ಆವರಣದಲ್ಲಿ ಬದುಕುತ್ತಿದ್ದೇವೆ ಎಂದರು.

ಆಯುರ್ ದೀಪೋತ್ಸವ: ‘ಆರೋಗ್ಯಕ್ಕಾಗಿ ದೀಪ ಹಚ್ಚೋಣ ಬನ್ನಿ’ ಎಂಬ ಸಂದೇಶ ದೊಂದಿಗೆ ನೂರಾರು ವಿದ್ಯಾರ್ಥಿಗಳು ದೀಪಗಳನ್ನು ಹಿಡಿದು ಆಯುರ್ವೇದ ವೃತ್ತ ದಲ್ಲಿ ಬೆಳಕಿನ ಆಯುರ್ ದೀಪೋತ್ಸವ ನಡೆಸಿದರು.

ಇದಕ್ಕೂ ಮೊದಲು ಆಯುರ್ ದೀಪೋತ್ಸವಕ್ಕೆ ಆಕಾಶವಾಣಿ ಉಪನಿರ್ದೇ ಶಕ ಹೆಚ್.ಶ್ರೀನಿವಾಸ್ ಚಾಲನೆ ನೀಡಿ, ವಿದ್ಯಾರ್ಥಿಗಳೊಂದಿಗೆ ಭಾಗಿಯಾದರು. ನೂರಾರು ವಿದ್ಯಾರ್ಥಿಗಳು ದೀಪಗಳನ್ನು ಹಿಡಿದು ಆಯುರ್ವೇದ ವೃತ್ತವನ್ನು ಸುತ್ತಿ, ಆಯುರ್ವೇದಕ್ಕೆ ಹಾಗೂ ಧನ್ವಂತರಿಗೆ ಜೈಕಾರ ಕೂಗಿದರು. ನಂತರ ವೃತ್ತದ ಬಳಿ ವಿದ್ಯಾರ್ಥಿನಿಯರು ‘ಹಚ್ಚೇವು ಕನ್ನಡ ದೀಪ’ ಹಾಡಿಗೆ ಮನೋಜ್ಞವಾಗಿ ನೃತ್ಯ ಮಾಡಿ ಚಪ್ಪಾಳೆಗಿಟ್ಟಿಸಿದರು.

ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತೆ ಪ್ರಾಂಶು ಪಾಲ ಡಾ.ಗಜಾನನ ಹೆಗಡೆ, ಡಾ. ಕೆರೋಲಿನ್ ಇನ್ನಿತರರು ಉಪಸ್ಥಿತರಿದ್ದರು.

Translate »