ಮೈಸೂರು: ನಂಜನಗೂಡು ತಾಲೂಕಿನ ಮಲ್ಲರಾಜನಹುಂಡಿ ಗ್ರಾಮ ದಲ್ಲಿ ಸುತ್ತೂರಿನ ಐಸಿಎಆರ್ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದಿಂದ 2018-19ನೇ ಸಾಲಿನಲ್ಲಿ ಜೂನ್ ತಿಂಗಳಿನಲ್ಲಿ ತರಬೇತಿ ಯನ್ನು ನೀಡಿ ಬೀಜೋತ್ಪಾದನೆಗಾಗಿ ಆಯ್ದ ರೈತರಿಗೆ ರಾಗಿ ತಳಿ ಕೆಎಂಆರ್-301 ಬೀಜ ಹಾಗೂ ಬೀಜೋಪಚಾರಕ್ಕಾಗಿ ಜೈವಿಕ ಗೊಬ್ಬರವನ್ನು ವಿತರಿಸಲಾಯಿತು.
ಬೀಜ ಪಡೆದ ರೈತರು ರಾಗಿಯನ್ನು ಯಶಸ್ವಿ ಯಾಗಿ ಬೆಳೆಯಲಾಗಿದ್ದು, ಅದರ ಅಂಗ ವಾಗಿ ಸುತ್ತೂರಿನ ಐಸಿಎಆರ್ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರ ರಾಗಿ ತಳಿ ಕೆಎಂಆರ್ -301 ಬೆಳೆಯ ಕ್ಷೇತ್ರೋತ್ಸವವನ್ನು ನಂಜನ ಗೂಡು ತಾಲೂಕಿನ ಮಲ್ಲರಾಜನಹುಂಡಿ ಗ್ರಾಮದಲ್ಲಿ ಇಂದು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ, ಐಸಿಎಆರ್ ಜೆಎಸ್‍ಎಸ್ ಕೆವಿಕೆಯ ವಿಜ್ಞಾನಿಗಳಾದ ಶ್ರೀಮತಿ ಹೆಚ್.ವಿ.ದಿವ್ಯಾ ಅವರು ಕೆಎಂಆರ್ 301 ತಳಿ ಬಗ್ಗೆ ಮಾಹಿತಿ ನೀಡಿದರು. ಈ ತಳಿಯು 120 ದಿನದ ಅವಧಿಯದಾಗಿದ್ದು, ನೀರಾವರಿಯಲ್ಲಿ 18-20 ಕ್ವಿಂಟಾಲಿನಷ್ಟು ಕಾಳಿನ ಇಳುವರಿ, 3-4 ಟನ್‍ನಷ್ಟು ಹುಲ್ಲು ಹಾಗೂ ಮಳೆಯಾಶ್ರಯದಲ್ಲಿ 12-15 ಕ್ವಿಂಟಾಲಿ ನಷ್ಟು ಕಾಳು ಹಾಗೂ 2-3 ಟನ್‍ನಷ್ಟು ಹುಲ್ಲಿನ ಇಳುವರಿಯನ್ನು ಪಡೆಯಬಹು ದೆಂದು ತಿಳಿಸಿದರು. ಈ ತಳಿಯು ಮುಂಗಾರು (ಜೂನ್-ಜುಲೈ)/ಚಳಿಗಾಲ (ಅಕ್ಪೋ ಬರ್ -ನವೆಂಬರ್) ತಿಂಗಳಿಗೆ ಸೂಕ್ತವೆಂದು ತಿಳಿಸಿದರು. ಬೀಜೋತ್ಪಾದನೆಗಾಗಿ ತಾಯಿ ತೆನೆಯನ್ನು ಆರೋಗ್ಯಕರವಾದ ಗಿಡದಿಂದ ಪ್ರತ್ಯೇಕವಾಗಿ ಕಟಾವು ಮಾಡಿ ಮುಂದಿನ ಬಿತ್ತನೆಗೆ ಉಪಯೋಗಿಸುವುದರಿಂದ ಇಳುವರಿ ಯಲ್ಲಿ ಗಣನೀಯವಾಗಿ ಹೆಚ್ಚಳ ಕಾಣ ಬಹುದು. ಬೀಜೋತ್ಪಾದನೆಗಾಗಿ ಆಸಕ್ತಿ ಇರುವ ರೈತರು ತಾಯಿ ತೆನೆಯನ್ನು ಪ್ರತ್ಯೇ ಕಿಸಿ ಒಕ್ಕಣೆ ಮಾಡಿ ತಂದುಕೊಟ್ಟರೆ, ಸಂಸ್ಕ ರಣೆ ಮಾಡಿ ಪೊಟ್ಟಣೀಕರಣ ಮಾಡಿಸಿ, ಬೀಜ ಪರೀಕ್ಷೆ ಮಾಡಿಸಿ, ಮೊಳಕೆ ಪ್ರಮಾಣ ಚೆನ್ನಾಗಿದ್ದರೆ, ಮಾರಾಟ ಮಾಡಲು ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿಕೊಟ್ಟರು. ಮುಂದಿನ ಹಂಗಾಮಿನಲ್ಲಿ ಬೀಜೋತ್ಪಾ ದನೆ ಮಾಡಲು ಆಸಕ್ತಿ ಇರುವ ರೈತರು ಒಗ್ಗಟ್ಟಾಗಿ ಗುಂಪಿನಲ್ಲಿ ಕನಿಷ್ಠ 10-15 ಎಕರೆಯಲ್ಲಿ ಬೀಜೋತ್ಪಾದನೆ ಮಾಡಲು ಮುಂದೆ ಬಂದರೆ ವಿ.ಸಿ. ಫಾರಂ ಮಂಡ್ಯಕ್ಕೆ ಒಡಂಬಡಿಕೆ ಮಾಡಿಸಿ ಕೊಡುವುದಾಗಿ ತಿಳಿಸಿದರು. ಬೀಜೋತ್ಪಾದನೆಯಿಂದ 1 ಕ್ವಿಂಟಾಲಿಗೆ ಕನಿಷ್ಠ ಒಂದು ಸಾವಿರ ದವರೆಗೂ ಹೆಚ್ಚಿನ ಲಾಭ ಸಿಗುವುದಾಗಿ ಮನವರಿಕೆ ಮಾಡಿಕೊಟ್ಟರು.
ರೈತರು ಮತ್ತು ರೈತ ಮಹಿಳೆಯರು ಕ್ಷೇತ್ರ ಭೇಟಿ ಮಾಡಿ ರಾಗಿ ತಳಿ ಕೆಎಂಆರ್-301 ಬೆಳೆಯನ್ನು ವೀಕ್ಷಿಸಿದರು. ಬೆಳೆಗೆ ಯಾವುದೇ ರೋಗ ಕೀಟ ಬಾಧೆಯಿಲ್ಲದೇ ಬೆಳೆದಿರುವು ದನ್ನು ಕಂಡು ಆಶ್ಚರ್ಯಪಟ್ಟರು. ತಮ್ಮ ಮನೆಯಲ್ಲಿಯ ಬಿತ್ತನೆ ಬೀಜ ಹಾಗೂ ಕೃಷಿ ಇಲಾಖೆಯಲ್ಲಿ ದೊರಕುವ ತಳಿಗಿಂತ ಹುಲ್ಲು ಹಾಗೂ ಕಾಳಿನ ಇಳುವರಿ ಚೆನ್ನಾಗಿದೆ ಎಂದು ಅಭಿಪ್ರಾಯಪಟ್ಟರು. ಮುಂದಿನ ಹಂಗಾಮಿನಲ್ಲಿ ತಾವುಗಳೂ ಈ ತಳಿಯನ್ನು ಈಗ ಬೆಳೆದಿರುವ ರೈತರ ಬಳಿ ಪಡೆದು ಬೆಳೆಯನ್ನು ಬೆಳೆಯುವು ದಾಗಿ ಒಲವು ತೋರಿದರು.
ಅಗ್ರಿಶ್ರೀ ಕಂಪನಿಯ ಶ್ರೀಧರ್‍ರವರು ಒಂದು ಕಣ್ಣಿನ ಕಬ್ಬಿನ ನಾಟಿ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಮಲ್ಲರಾಜನ ಹುಂಡಿ ಗ್ರಾಮದ ಮಹ ದೇವಸ್ವಾಮಿ, ನಾಗರಾಜ್, ಬಸವರಾಜು ಹಾಗೂ ಗ್ರಾಮದ 50ಕ್ಕೂ ಹೆಚ್ಚು ಮಂದಿ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು. ಐಸಿಎಆರ್ ಜೆಎಸ್‍ಎಸ್ ಕೃಷಿ ವಿಜ್ಞಾನ ಕೇಂದ್ರದ ಮಹದೇವಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.