6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ಸಾಹಿತ್ಯ ಕ್ಷೇತ್ರಕ್ಕೆ ಯಳಂದೂರಿನ ಕೊಡುಗೆ ಅಪಾರ
ಚಾಮರಾಜನಗರ

6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ಸಾಹಿತ್ಯ ಕ್ಷೇತ್ರಕ್ಕೆ ಯಳಂದೂರಿನ ಕೊಡುಗೆ ಅಪಾರ

December 2, 2018

ಯಳಂದೂರು: ಯಳಂದೂರು ತಾಲೂಕು ಹಾಗೂ ಚಾಮ ರಾಜನಗರ ಜಿಲ್ಲೆಯ ಸಾಹಿತ್ಯಕ್ಕೆ ಸುಮಾರು 500 ವರ್ಷದ ಇತಿಹಾಸವಿದ್ದು, ಸಾಹಿತ್ಯ ಕ್ಷೇತ್ರಕ್ಕೆ ಇಲ್ಲಿನ ಕೊಡುಗೆ ಅಪಾರವಾಗಿದೆ ಎಂದು ಸಾಹಿತಿ ಶಂಕನಪುರ ಮಹದೇವ್ ಹೇಳಿದರು.

ಪಟ್ಟಣದ ದಿವಾನ್ ಪೂರ್ಣಯ್ಯನವರ ಪ್ರಾಚ್ಯವಸ್ತು ಸಂಗ್ರಹಾಲಯದ ಆವರಣದ ಎಂ.ಎನ್.ವ್ಯಾಸರಾವ್ ಸಭಾ ಮಂಟಪದ ವೇದಿಕೆಯಲ್ಲಿ ಶನಿವಾರ ನಡೆದ ಯಳಂ ದೂರು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಳಂದೂರು ತಾಲೂಕಿನ ಮೊದಲ ಕವಿ ಷಡಕ್ಷರಿ. ಇವರು ಕ್ರಿ.ಶ. 1500ರ ಸುಮಾರಿಗೆ ಜೀವಿಸಿದ್ದರು. ಯರಗಂಬಳ್ಳಿ ಗ್ರಾಮದಲ್ಲಿ ಇವರು ಗದ್ದುಗೆ ಮತ್ತು ಮಠ ಇದೆ. ಇವರು ಅನೇಕ ತತ್ವಪದಗಳನ್ನು ರಚಿಸಿದ್ದು, ಅವರ ‘ಸುಬೋಧಸಾರ’ ಕೃತಿಯಲ್ಲಿ ಅನೇಕ ಹಾಡು ಗಳಿವೆ. ಕನ್ನಡ ಸಾಹಿತ್ಯಲೋಕದಲ್ಲಿ ಮುಪ್ಪಿನ ಷಡಕ್ಷರಿಯ ‘ತಿರುಕನ ಕನಸು’ ಹೆಚ್ಚು ಪ್ರಸಿದ್ಧಿ ಪಡೆದಿದೆ. ಮೇಲ್ನೋಟಕ್ಕೆ ಮಕ್ಕಳ ಗೀತೆಗಳ ಲಯ ಹೊಂದಿರುವ ಈ ಹಾಡಿನ ಗರ್ಭ ದಲ್ಲಿ ಅಗೆದಷ್ಟೂ ಅರ್ಥವಂತಿಕೆ ಉಂಟು ಎಂದು ತಿಳಿಸಿದರು. ಇದೇ ತಾಲೂಕಿನ ಸಂಚಿಯ ಹೊನ್ನಮ್ಮ ಕ್ರಿ.ಶ.1680ರಲ್ಲಿ ಮೈಸೂರಿನ ಚಿಕ್ಕದೇವರಾಜ ಒಡೆಯರ ಸಂಚಿಯ ಊಳಿಗದಲ್ಲಿ ಇದ್ದ ಮಹಿಳೆ. ಚಿಕ್ಕ ದೇವರಾಜರ ಪಟ್ಟದರಸಿಯಾಗಿದ್ದ ದೇವ ರಾಜಮ್ಮಣ್ಣಿಯ ಬಾಲ್ಯ ಸ್ನೇಹಿತೆಯಾಗಿ ದ್ದಳು. ‘ಹದಿಬದೆಯ ಧರ್ಮ’ ಕೃತಿ ರಚಿ ಸಿದಳು ಎಂದು ವಿವರಿಸಿದರು.

ಇದರ ಜೊತೆಯಲ್ಲಿ ಬಿಳಿಗಿರಿರಂಗನಾಥ ಸ್ವಾಮಿಯ ಜನಪದ ಕಾವ್ಯ ಈ ತಾಲೂ ಕಿನ ಮಹತ್ವದ ಕೊಡುಗೆಯಾಗಿದೆ. ಬಿಳಿಗಿರಿ ರಂಗನಬೆಟ್ಟ ಪ್ರದೇಶ ಪ್ರಾಚೀನ ಮಾನವ ವಸತಿ ನೆಲೆಗಳಲ್ಲಿ ಒಂದಾಗಿದೆ. ಕರ್ನಾಟಕ ಚರಿತ್ರೆಯ ಪುಟಗಳಲ್ಲಿ ಈ ಕ್ಷೇತ್ರ ಅಗ್ರಸ್ಥಾನ ಪಡೆದಿದೆ ಎಂದರು.

ಶಾಸಕ ಎನ್. ಮಹೇಶ್ ಮಾತನಾಡಿ, ಕನ್ನ ಡಿಗರು ಬೇರೆ ಭಾಷೆಯನ್ನು ಗೌರವಿಸುವ ಮೂಲಕ ಹೃದಯ ವೈಶಾಲ್ಯತೆ ಬೆಳಸಿಕೊಳ್ಳ ಬೇಕು. ಕನ್ನಡ ಭಾಷೆ, ನಾಡು ಬೆಳಸುವ ನಿಟ್ಟಿ ನಲ್ಲಿ ಕಂಕಣ ಬದ್ಧರಾಗಬೇಕು ಎಂದರು.
ಗ್ರಾಮೀಣ ಜನರ ಶೋಭಾನೆ ಪದ, ಕೋಲಾಟ, ಭಕ್ತಿಗೀತೆ, ಕಥೆ ಕಟ್ಟುವುದು ನಮ್ಮ ಜಿಲ್ಲೆಯ ಕಲೆಯಾಗಿದೆ. ಜಿಲ್ಲೆಯ ಮಹ ದೇಶ್ವರ, ಮಂಟೇಸ್ವಾಮಿ, ಬಿಳಿಗಿರಿರಂಗ ಸ್ವಾಮಿ ಕಥೆಗಳು ಜನಪದರ ಹೃದಯ ಅಂತರಾಳದ ಧ್ವ್ವನಿಯಾಗಿದೆ ಎಂದರು.
ತಹಶೀಲ್ದಾರ್ ಗೀತಾ ಹುಡೇದ್, ಪಿಎಸ್‍ಐ ಶ್ರೀಧರ್ ಮಾತನಾಡಿದರು. ಎಂ.ಎನ್. ವ್ಯಾಸರಾವ್ ಸಮ್ಮೇಳನಾಧ್ಯಕ್ಷತೆ ವಹಿಸಿ ದ್ದರು. ಕಾರ್ಯಕ್ರಮದಲ್ಲಿ ಬಿಇಓಗಳಾದ ತಿರುಮಲ ಚಾರಿ, ಮಹದೇವ್, ಶಿಕ್ಷಕರ ಸಂಘದ ಅಧ್ಯಕ್ಷ ರಾಜು, ಬಿಆರ್‍ಸಿ ಶಿವ ಲಾಂಕರ, ಸರ್ಕಾರಿ ನೌಕರ ಸಂಘದ ರಾಜ್ಯ ಪರಿಷತ್ ಸದಸ್ಯ ವೀರಭದ್ರಸ್ವಾಮಿ, ಕಸಾಪ ಅಧ್ಯಕ್ಷ ಮದ್ದೂರು ವಿರೂಪಾಕ್ಷ, ಕಾರ್ಯ ದರ್ಶಿ ರವಿಕುಮಾರ್, ಮುಖಂಡರಾದ ಮಂಜು, ಪ್ರಕಾಶ್, ದೊರೆಸ್ವಾಮಿ, ಮಹದೇವಸ್ವಾಮಿ, ಬಸವರಾಜಪ್ಪ, ವೈ.ಡಿ.ಸೂರ್ಯ ನಾರಾಯಣ, ಗೋಪಾಲ ಸ್ವಾಮಿ, ಗ್ಯಾಸ್ ಏಜೇನ್ಸಿ ಮಾಲೀಕ ರಂಜನಿ, ಅರ್ಚಕ ಚಂದ್ರಮೌಳ್ಳಿ ಹಾಜರಿದ್ದರು.

ಅದ್ಧೂರಿಯಾಗಿ ಜರುಗಿದ ಸಮ್ಮೇಳನಾಧ್ಯಕ್ಷರ ಮೆರವಣಿಗೆ
ಯಳಂದೂರು:  ಪಟ್ಟಣದ ಮಹಾಕವಿ ಮುಪ್ಪಿನ ಷಡಕ್ಷರಿ ಗದ್ದಿಗೆಯಿಂದ ಸಮ್ಮೇ ಳನಾಧ್ಯಕ್ಷರ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಸಮ್ಮೇಳನದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಸಿರು ತೋರಣ ಹಾಗೂ ಕನ್ನಡ ಬಾವುಟ ಕಟ್ಟಲಾಗಿತ್ತು. ಇದರಿಂದ ಪಟ್ಟಣ ಕೆಂಪು, ಹಳದಿ ಬಣ್ಣದಿಂದ ಕಂಗೊಳಿಸುತ್ತಿತ್ತು.

ಮೆರವಣಿಯು ಪಟ್ಟಣ ಕೆ.ಕೆ.ರಸ್ತೆ. ಅಂಚೆ ಕಚೇರಿ ಬೀದಿ, ಬಳೆಪೇಟೆ, ದೊಡ್ಡ ಅಂಗಡಿ ಬೀದಿ, ವಾಲ್ಮೀಕಿ ಸರ್ಕಲ್, ಬಸ್ ನಿಲ್ದಾಣದಿಂದ ನಾಡಮೇಗಲಮ್ಮ ದೇವಾಲಯ ತಲುಪಿತ್ತು. ಬಳಿಕ ಸಮ್ಮೇಳನಾಧ್ಯಕ್ಷರನ್ನು ವೇದಿಕೆಗೆ ಕರೆದ್ಯೊಯಲಾಯಿತು. ಮೆರವಣಿಗೆಯಲ್ಲಿ ಕಂಸಾಳೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಪಾಲ್ಗೊಂಡಿದ್ದವು.

ಇದಕ್ಕೂ ಮೊದಲು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಪುಷ್ಪ ನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾಷೆ, ಜಲ, ನೆಲ, ನಾಡು ಉಳಿಸುವಲ್ಲಿ ಕನ್ನಡಿಗರು ಸ್ವಾಭಿಮಾನಿಗಳಾಗಿ ಹೋರಾಟ ಮಾಡಬೇಕು. 6ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭಲ್ಲಿ ತಾಪಂ ಅಧ್ಯಕ್ಷ ನಿರಂಜನ್, ಉಪಾಧ್ಯಕ್ಷೆ ಮಲ್ಲಾಜಮ್ಮ, ಸದಸ್ಯೆ ಶಾರದಾಂಬ, ನಾಗರಾಜು, ಚೈತ್ರಮಣಿ, ಕಸಾಪ ಜಿಲ್ಲಾಧ್ಯಕ್ಷ ವಿನಯ್, ಬಿಇಓ ತಿರುಮಲಚಾರಿ, ಇಓ ರಾಜು ಹಾಜರಿದ್ದರು.

Translate »