ಎಸ್.ಎಂ.ನಂದೀಶ್‍ಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ
ಚಾಮರಾಜನಗರ

ಎಸ್.ಎಂ.ನಂದೀಶ್‍ಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ

December 2, 2018

ಚಾಮರಾಜನಗರ: ಚಾಮರಾಜನಗರದಲ್ಲಿ ಕಳೆದ 23 ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಎಂ.ನಂದೀಶ್ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಮಾಧ್ಯಮ ಅಕಾಡೆಮಿಯು 2018ನೇ ಸಾಲಿನ 51 ಪ್ರಶಸ್ತಿ ಪುರಸ್ಕøತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜಿಲ್ಲೆಯ ಎಸ್.ಎಂ.ನಂದೀಶ್ ಪ್ರಶಸ್ತಿ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರು ರೇಷ್ಮೆನಾಡು ಸ್ಥಳೀಯ ಪತ್ರಿಕೆ, ಈ ಟಿವಿ ಕನ್ನಡ, ಸಮಯ ನ್ಯೂಸ್ ಚಾನಲ್‍ನಲ್ಲಿ ಕರ್ತವ್ಯ ನಿರ್ವಹಿಸಿರುವ ನಂದೀಶ್ ಪ್ರಸ್ತುತ ನ್ಯೂಸ್ 18 ಕನ್ನಡ ಚಾನಲ್‍ನ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿ ಸುತ್ತಿದ್ದಾರೆ. ಜೊತೆಗೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರನ್ನು ಜಿಲ್ಲಾ ಪತ್ರಕರ್ತರು ಅಭಿನಂದಿಸಿದ್ದಾರೆ. ಈ ಹಿಂದೆ ಜಿಲ್ಲೆಯ ಅಬ್ರಹಾಂ ಡಿ ಸಿಲ್ವಾ, ಎ.ಸಿ.ಪ್ರಭಾಕರ್, ಎ.ಹೆಚ್.ಗೋವಿಂದ ಅವರಿಗೆ ಪ್ರಶಸ್ತಿ ಲಭಿಸಿತ್ತು. ನಂದೀಶ್ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪಡೆ ಯುತ್ತಿರುವ ನಾಲ್ಕನೇ ಪತ್ರಕರ್ತರಾಗಿದ್ದಾರೆ.

ಜಿಲ್ಲೆಯಲ್ಲಿ ನನಗಿಂತ ಹಿರಿಯ ಪತ್ರಕರ್ತರಿದ್ದು ಅವರಿಗೆ ಈ ಪ್ರಶಸ್ತಿ ಲಭಿಸಬೇಕಿತ್ತು ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ಆದರೂ, ಕಳೆದ 21 ವರ್ಷಗಳಿಂದ ಸಲ್ಲಿಸಿದ ನನ್ನ ಪ್ರಾಮಾಣಿಕ ಸೇವೆಗೆ ಸಂದ ಗೌರವ ಇದಾಗಿದೆ. ಚಾಮರಾಜನಗರ ಜಿಲ್ಲೆಯ ನನ್ನ ಪತ್ರಕರ್ತ ಗೆಳೆಯರ ಸಹಕಾರದಿಂದ ಇದೆಲ್ಲಾ ಸಾಧ್ಯವಾಗಿದೆ’ ಎಂದು ‘ಮೈಸೂರು ಮಿತ್ರ’ನಿಗೆ ಎಸ್.ಎಂ.ನಂದೀಶ್ ತಿಳಿಸಿದರು.

Translate »