ವಚನ ಕಲಿಕೆಯಿಂದ ಉತ್ತಮ ಸಮಾಜ ನಿರ್ಮಾಣ
ಚಾಮರಾಜನಗರ

ವಚನ ಕಲಿಕೆಯಿಂದ ಉತ್ತಮ ಸಮಾಜ ನಿರ್ಮಾಣ

December 2, 2018

ಗುಂಡ್ಲುಪೇಟೆ:  ವಚನಗಳು ಸಮಾಜದ ಜೀವನಾಡಿಗಳು. ಇದನ್ನು ಮಕ್ಕಳಿಗೆ ಕಲಿಸುವುದರೊಂದಿಗೆ ಉತ್ತಮ ಸಮಾಜವನ್ನು ನಿರ್ಮಿಸುವಂತಾ ಗಬೇಕು ಎಂದು ಪ್ರಾಂಶುಪಾಲರಾದ ಸವಿತಾ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಂದ ತೆರಕಣಾಂಬಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ ಕÀನ್ನಡ ನಿತ್ಯೋತ್ಸವ ಸಮಾರೋಪ ಸಮಾರಂ ಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಚನಗಳನ್ನು ಮಕ್ಕಳಿಗೆ ಕಲಿಸುವುದ ರೊಂದಿಗೆ ಅದರಲ್ಲಿ ಅಡಗಿರುವ ರೀತಿ, ನೀತಿ ಯನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮವಾದ ಸಮಾಜವನ್ನು ನಿರ್ಮಿಸಲು ಪೆÇೀಷಕರು ಮುಂದಾಗಬೇಕು ಎಂದರು.

ವಚನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್ಲೇ ಗೌಡ ಅವರು, ವಚನ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು. ವಚನ ಸಾಹಿತ್ಯದ ಮಹತ್ವ, ಇಂದಿನ ದಿನಗಳಲ್ಲಿ ಅದರ ಪ್ರಾಮುಖ್ಯ ಅವುಗಳ ಪ್ರಭಾವಗಳ ಬಗೆಗೆ ಮಕ್ಕಳಿಗೆ ವಿವರಿಸಿದರು. ಕಾರ್ಯಕ್ರಮ ವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಎನ್.ಚಿದಾನಂದ ಸ್ವಾಮಿ ಉದ್ಘಾಟಿಸಿದರು. ಈ ಸಂದರ್ಭ ದಲ್ಲಿ ಮಕ್ಕಳು, ಹಲವು ವಚನಕಾರರ ವಚನ ಗಳ ಹಾಡಿದರು. ಹಚ್ಚೇವು ಕನ್ನಡದೀಪದ ನೃತ್ಯ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿ ಷತ್ತಿನ ಅಧ್ಯಕ್ಷ ಶಾಂತಪ್ಪ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪುಟ್ಟತಾಯಮ್ಮ, ಪದಾ ಧಿಕಾರಿಗಳಾದ ಬಸಪ್ಪ, ಪ್ರಸಾದ್, ಆರ್.ಕೆ.ಮಧು, ನಾಗರಾಜಶರ್ಮ, ಸಂಜಯ್, ಜೈಜು, ಮಲ್ಲನಾ ಯಕ್, ಶಾಲಾ ಸಿಬ್ಬಂದಿ ಮತ್ತು ಮಕ್ಕಳಿದ್ದರು.

Translate »