ಯಳಂದೂರು: ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆನ್ನಲಾದ ಭ್ರಷ್ಟಚಾರದ ಬಗ್ಗೆ ಪ್ರಶ್ನಿಸಿದ ವ್ಯಕ್ತಿಗೆ ಅಂಬಳೆ ಗ್ರಾಮ ಪಂಚಾ ಯಿತಿ ಅಧ್ಯಕ್ಷರೇ ನಡು ರಸ್ತೆಯಲ್ಲಿ ರೌಡಿ ಯಂತೆ ಹಲ್ಲೆ ನಡೆಸಿರುವ ಘಟನೆ ಅಂಬಳೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ತಾಲೂಕಿನ ಅಂಬಳೆ ಗ್ರಾಪಂ ಅಧ್ಯಕ್ಷ ಸಿ.ಸಿದ್ದನಾಯಕ ಅದೇ ಗ್ರಾಮದ ವೀರ ಶೈವ ಬೀದಿಯ ಮಾಜಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಸಿ.ಚಾಮರಾಜು ಮೇಲೆ ನಡೆಸಿದ್ದಾರೆ.
ಗುರುವಾರ ಅಂಬಳೆ ಗ್ರಾಪಂನಲ್ಲಿ ನರೇಗಾ ಯೋಜನೆಯಲ್ಲಿ ಕಾಮಗಾರಿಗಳನ್ನು ನಡೆಸದೆ ಕೆಲವು ಕಾಮಗಾರಿಗಳಿಗೆ ಬಿಲ್ ಪಾವತಿಯಾಗಿರುವ ಬಗ್ಗೆಯೂ ಸಾಮಾ ಜಿಕ ಲೆಕ್ಕ ತಪಾಸಣಾ ಗ್ರಾಮ ಸಭೆ ಸಾರ್ವಜನಿಕರ ಸಮ್ಮುಖದಲ್ಲಿ ನಡೆಯದೆ ಗೌಪ್ಯವಾಗಿ ಸಭೆಯನ್ನು ಅಂಬಳೆ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂ ಗಣದಲ್ಲಿ ನಡೆಸಲಾಗಿತ್ತು.
ಈ ಬಗ್ಗೆ ಚಾಮರಾಜು ಅವರು ಲೆಕ್ಕ ತಪಾ ಸಣಾ ಶಿಬಿರವನ್ನು ಸಾರ್ವಜನಿಕ ಸ್ಥಳ ಅಥವಾ ಗ್ರಾಪಂ ಆವರಣದಲ್ಲಿ ನಡೆಸ ಬೇಕಾಗಿತ್ತು. ಆದರೆ ಈ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಇಲ್ಲ ಕೆಲವು ಸದಸ್ಯರು ಗೈರು ಹಾಜರಾಗಿದ್ದಾರೆ. ಅಲ್ಲದೆ ಸಭೆಗೆ ಅಧಿಕಾರಿಗಳು ಗೈರು ಹಾಜರಾಗಿರು ವುದರಿಂದ ಸಭೆಯನ್ನು ರದ್ದುಗೊಳಿಸ ಬೇಕೆಂದು ಅಧಿಕಾರಿಗಳ ಜತೆಯಲ್ಲಿ ಚಾಮ ರಾಜು, ಮಧುಕರ, ಮಹೇಶ್ ಸೇರಿದಂತೆ ಇತರರು ಒತ್ತಾಯಿಸಿದ್ದು, ಈ ವೇಳೆ ಪರಸ್ಪರ ಮಾತಿನ ಚಕಮಕಿ ಸಹ ನಡೆದಿತ್ತು.
ಆದರೆ ಶುಕ್ರವಾರ ಮನೆಯಿಂದ ಹಾಲು ಉತ್ಪಾದಕರ ಸಹಕಾರ ಸಂಘದ ಸಭೆಗೆ ಭಾಗವಹಿಸಲು ಬೈಕ್‍ನಲ್ಲಿ ಹೋಗುತ್ತಿದ್ದ ಸಿ.ಚಾಮರಾಜು ಅವರನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಸಿದ್ದನಾಯಕ ತಡೆದು ಹಲ್ಲೆ ನಡೆಸಿದ ಬಳಿಕ ನಮ್ಮ ಗ್ರಾಮ ಪಂಚಾ ಯಿತಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ದೂರು ನೀಡಿ ತಕರಾರು ಮಾಡಿದರೆ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿ ದ್ದಾರೆ ಎಂದು ಚಾಮರಾಜು ಯಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿ ಕರು ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿದರೆ ಧರ್ಮ ದೇಟು ಬೀಳುವುದು ಖಚಿತ ಎಂಬುವು ದಕ್ಕೆ ಅಂಬಳೆ ಗ್ರಾಮ ಪಂಚಾಯಿತಿಯಲ್ಲಿ ಇದು ಎರಡನೇ ಪ್ರಕರಣವಾಗಿದೆ. ಈ ಹಿಂದೆ ಪತ್ರಕರ್ತ ವೈ.ಕೆ.ಮೋಳೆ ನಾಗ ರಾಜು ಅವರು ಅಂಬಳೆ ಗ್ರಾಮ ಪಂಚಾ ಯಿತಿ ಬಗ್ಗೆ ಸಾರ್ವಜನಿಕರು ನೀಡಿದ್ದ ದೂರಿನನ್ವಯ ಸುದ್ದಿ ಮಾಡಿದ್ದಕ್ಕೆ ಅಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ವೈ.ಕೆ. ಮೋಳೆ ಶಿವರಾಮು ಗುಂಪುಕಟ್ಟಿ ಹಲ್ಲೆ ಮಾಡಿದನ್ನು ಸ್ಮರಿಸಬಹುದಾಗಿದೆ.