ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸ್ಥಾನಕ್ಕೆ ಬಿಎಸ್‍ಪಿಯ ಎನ್. ಮಹೇಶ್ ನೀಡಿದ್ದ ರಾಜೀನಾಮೆ ಅಂಗೀಕಾರಗೊಂಡಿದೆ. ಇವರ ರಾಜೀ ನಾಮೆಯಿಂದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಂಪುಟದ ಗಾತ್ರ 26ಕ್ಕೆ ಇಳಿದಿದೆ. ಇದರಿಂದ ಜೆಡಿಎಸ್‍ಗೆ ಇನ್ನೂ ಇಬ್ಬರನ್ನು ಮಂತ್ರಿಮಂಡಲಕ್ಕೆ ತೆಗೆದುಕೊಳ್ಳುವ ಅವಕಾಶ ಇದೆ. ಎನ್. ಮಹೇಶ್ ಅವರನ್ನು ಸಚಿವರಾಗಿ ಮುಂದು ವರಿಸಲು ಅವರ ಪಕ್ಷದ ಅಧಿನಾಯಕಿ ಮಾಯಾವತಿ ಸುತಾರಾಂ ಒಪ್ಪಿಲ್ಲ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇ ಗೌಡ ಅವರು, ಮಾಯಾವತಿ ಅವರ ಮನವೊಲಿಸುವ ಪ್ರಯತ್ನ ವಿಫಲ ವಾದ ನಂತರ ಮುಖ್ಯಮಂತ್ರಿ ಅವರು, ಮಹೇಶ್ ರಾಜೀನಾಮೆ ಅಂಗೀಕರಿಸಿ ರಾಜ್ಯಪಾಲರಿಗೆ ಇಂದು ಬೆಳಿಗ್ಗೆ ಶಿಫಾರಸು ಮಾಡಿದ್ದರು.