ಎಪಿಎಂಸಿ ನೂತನ ಅಧ್ಯಕ್ಷರಾಗಿ ಲಕ್ಷ್ಮಮ್ಮ, ಉಪಾಧ್ಯಕ್ಷರಾಗಿ ಹೆಚ್.ಪಿ. ಕೆಂಡಗಣ್ಣಪ್ಪ ಅವಿರೋಧ ಆಯ್ಕೆ
ಮೈಸೂರು

ಎಪಿಎಂಸಿ ನೂತನ ಅಧ್ಯಕ್ಷರಾಗಿ ಲಕ್ಷ್ಮಮ್ಮ, ಉಪಾಧ್ಯಕ್ಷರಾಗಿ ಹೆಚ್.ಪಿ. ಕೆಂಡಗಣ್ಣಪ್ಪ ಅವಿರೋಧ ಆಯ್ಕೆ

October 16, 2018

ನಂಜನಗೂಡು: ನಂಜನಗೂಡು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೂತನ ಅಧ್ಯಕ್ಷರಾಗಿ ವರುಣಾ ಕ್ಷೇತ್ರದ ಲಕ್ಷ್ಮಮ್ಮ, ಉಪಾಧ್ಯಕ್ಷರಾಗಿ ನಂಜನಗೂಡು ಕ್ಷೇತ್ರದ ಹೆಚ್.ಪಿ.ಕೆಂಡಗಣ್ಣಪ್ಪ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾ ವಣೆ ಅಧಿಕಾರಿ ತಹಸೀದ್ದಾರ್ ದಯಾನಂದ್ ತಿಳಿಸಿದ್ದಾರೆ. 20 ತಿಂಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಹುಲ್ಲಹಳ್ಳಿ ಎಲ್. ಮಾದಪ್ಪ, ಉಪಾಧ್ಯಕ್ಷರಾಗಿ ಹದಿನಾರು ಸಿದ್ದರಾಜು ಅವಿರೋಧವಾಗಿ ಆಯ್ಕೆ ಯಾಗಿದ್ದರು.

ಇಂದು ಎಪಿಎಂಸಿಯಲ್ಲಿ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಯಲ್ಲಿ ಕಾಂಗ್ರೆಸ್ ವರಿಷ್ಠರ ನಿರ್ದೇಶನದಂತೆ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ನಡೆಯಿತು. ಕಾಂಗ್ರೆಸ್‍ನ 8, ಬಿಜೆಪಿಯ 4, ಪಕ್ಷೇಂತರ 1 ಹಾಗೂ ನಾಮ ನಿರ್ದೇಶನ ಸದಸ್ಯರು 3 ಸೇರಿ ಒಟ್ಟು 16 ಸದಸ್ಯರಿದ್ದು, ಕಾಂಗ್ರೆಸ್ ಬೆಂಬಲಿತರೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಎಪಿಎಂಸಿ ಕಾರ್ಯದರ್ಶಿ ಹರೀಶ್ ಕುಮಾರ್, ಸದಸ್ಯರುಗಳಾದ ಕೆ.ಮಾದಪ್ಪ, ಕೆ.ಜಿ ಮಹೇಶ್ ಎಲ್.ಸಿದ್ದರಾಜು, ಲಕ್ಷ್ಮಮ್ಮ, ಆರ್.ಮಹದೇವು, ಮುದ್ದುಮಾದ ಶೆಟ್ಟಿ, ಗುರುಸ್ವಾಮಿ, ಕೆ.ಎಂ.ಚಿಕ್ಕಲಿಂಗಣ್ಣ ಹೆಚ್.ಬಿ. ಕೆಂಡಗಣ್ಣಪ್ಪ, ಎ.ಎಸ್.ನಂಜುಂಡ ಸ್ವಾಮಿ, ಶ್ರೀಕಂಠ, ಶಿವಮ್ಮ, ಮಗ್ದುಮ್ ಭಾಗವಹಿ ಸಿದ್ದರು.

ವಿಜಯೋತ್ಸವ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯುತ್ತಿದ್ದಂತೆ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಹರ್ಷ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಕೇಶವಮೂರ್ತಿ, ಎಸ್.ಸಿ.ಬಸವರಾಜು, ವಿಜಯಕುಮಾರ್, ದಕ್ಷಿಣಾಮೂರ್ತಿ, ಮಹದೇವಪ್ಪ, ರಾಚನಾಯಕ, ಶ್ರೀಧರ್, ಮುದ್ದಮಾದೇಗೌಡ ಇದ್ದರು.

Translate »