Tag: Begur

ಬೈಕ್‍ಗೆ ಸರಕು ವಾಹನ ಡಿಕ್ಕಿ; ಓರ್ವನಿಗೆ ಗಾಯ
ಚಾಮರಾಜನಗರ

ಬೈಕ್‍ಗೆ ಸರಕು ವಾಹನ ಡಿಕ್ಕಿ; ಓರ್ವನಿಗೆ ಗಾಯ

November 8, 2018

ಬೇಗೂರು: ಸರಕು ಸಾಗಾಣೆ ವಾಹನವೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿ ಣಾಮ ಬೈಕ್ ಸವಾರನ ಕೈಮೂಳೆ ಮುರಿದು, ತಲೆಗೆ ಪೆಟ್ಟಾಗಿರುವ ಘಟನೆ ಬೇಗೂರಿ ನಲ್ಲಿ ನಡೆದಿದೆ. ರಂಗೂಪುರ ಗ್ರಾಮದ ಆರ್.ಎಂ.ನಟರಾಜು ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯಲಾಗಿದೆ. ನಟರಾಜು ತಮ್ಮ ಪತ್ನಿಯೊಂದಿಗೆ ಬೈಕ್‍ನಲ್ಲಿ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ನಂಜನಗೂಡಿನಿಂದ ಬರುತ್ತಿದ್ದ ಸರಕು ಸಾಗಾಣೆ ವಾಹನ ಡಿಕ್ಕಿ ಹೊಡೆಯಿತೆನ್ನ ಲಾಗಿದೆ. ಇದರಿಂದ ನಟರಾಜು ಅವರ ತಲೆಗೆ ಪೆಟ್ಟಾಗಿದ್ದು, ಸ್ಥಳಕ್ಕೆ ಬೇಗೂರು ಠಾಣೆ ಪೊಲೀಸರು ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಯಂತ್ರಣ ತಪ್ಪಿ ಉರುಳಿ ಬಿದ್ದ ಲಾರಿ
ಚಾಮರಾಜನಗರ

ನಿಯಂತ್ರಣ ತಪ್ಪಿ ಉರುಳಿ ಬಿದ್ದ ಲಾರಿ

November 8, 2018

ಬೇಗೂರು:  ಸಮೀಪದ ಗರಗನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮಗುಚಿಬಿದ್ದಿರುವ ಘಟನೆ ನಡೆದಿದೆ. ಪಟ್ಟಣದಿಂದ ಬೇಗೂರಿನತ್ತ ಸಿಮೆಂಟ್ ಇಟ್ಟಿಗೆಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿ ಗರಗನಹಳ್ಳಿ ಬಳಿ ಚಾಲಕನ ನಿಯಂ ತ್ರಣ ತಪ್ಪಿ ಉರುಳಿಬಿದ್ದು ಇಟ್ಟಿಗೆಗಳು ರಸ್ತೆಗೆ ಬಿದ್ದಿವೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಸ್ವಲ್ಪಹೊತ್ತು ಸಂಚಾರಕ್ಕೆ ಅಡ್ಡಿ ಯುಂಟಾಗಿತ್ತು. ಸ್ಥಳಕ್ಕೆ ಬೇಗೂರು ಪೆÇಲೀ ಸರು ತೆರಳಿ ಇಟ್ಟಿಗೆಗಳನ್ನು ತೆರವುಗೊಳಿ ಸಿದರು. ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಜೋಗಿಕೊಪ್ಪಲು ಗ್ರಾಮ
ಹಾಸನ

ಆಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಜೋಗಿಕೊಪ್ಪಲು ಗ್ರಾಮ

November 5, 2018

ಬೇಲೂರು:ತಾಲೂಕಿನ ಬಿಕ್ಕೋಡು ಹೋಬಳಿಯ ಚೌಡನಹಳ್ಳಿ ದಾಖಲೆ ಗ್ರಾಮವಾದ ಜೋಗಿಕೊಪ್ಪಲು ಗ್ರಾಮವು ಮೂಲಭೂತ ಸೌಕರ್ಯದಿಂದ ವಂಚಿತವಾಗಿದ್ದು ಗ್ರಾಮದ ಅಭಿವೃದ್ಧಿಗೆ ಕುಶಾವರ ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಶಾಸಕ ಕೆ.ಎಸ್.ಲಿಂಗೇಶ್ ಗಮನ ಹರಿಸಬೇಕಿದೆ. ಪರಿಶಿಷ್ಟಜಾತಿಯ 40 ಕುಟುಂಬಗಳಿದ್ದು ಎಲ್ಲರೂ ಕೂಲಿಕಾರ್ಮಿಕರೇ ಆಗಿದ್ದಾರೆ. ಗ್ರಾಮದಲ್ಲಿ ಉತ್ತಮ ವಾದ ರಸ್ತೆಯಿಲ್ಲ. ಗ್ರಾಮ ಉಗಮವಾದಾಗನಿಂದಲೂ ಇದುವರೆಗೂ ಒಂದು ರಸ್ತೆಯೂ ಜಲ್ಲಿ ಕಂಡಿಲ್ಲ. ರಸ್ತೆ ಪಕ್ಕದಲ್ಲಿ ಚರಂಡಿ ಕಂಡಿಲ್ಲ. ಮಳೆ ಬಂದಾಗ ರಸ್ತೆಯ ನೀರು ಎಲ್ಲೆಂದರಲ್ಲಿ ಹರಿಯತೊಡುಗುತ್ತದೆ. ಕೆಲವೊಮ್ಮೆ ಮಳೆ ಹೆಚ್ಚಾದ ಸಂದರ್ಭ ಮನೆ, ಗುಡಿಸಲುಗಳಿಗೂ…

ಬೇಗೂರು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ
ಚಾಮರಾಜನಗರ

ಬೇಗೂರು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

October 23, 2018

ಬೇಗೂರು: ಬೇಗೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಗ್ರಾ.ಪಂ ಕಚೇರಿ ಆವರಣದಲ್ಲಿ ನಡೆಯಿತು. ಹಿಂದಿನ ಅಧ್ಯಕ್ಷ ಬಿ.ಎಸ್.ಚೇತನ್ ಹಾಗೂ ಉಪಾಧ್ಯಕ್ಷೆ ಚೈತ್ರಾ ಅವರ ವಿರುದ್ದ 12 ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿ ದ್ದರಿಂದ ಅ.22ರಂದು ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ವಿಶೇಷ ಸಭೆ ಕರೆಯ ಲಾಗಿತ್ತು. ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಮಹ ದೇವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಬೆಳಚಲ ವಾಡಿಯ ಸತೀಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪ್ರೇಮಾ…

ಬಾಲಕರಿಬ್ಬರು ಕೆರೆಯಲ್ಲಿ ಜಲಸಮಾಧಿ
ಚಾಮರಾಜನಗರ

ಬಾಲಕರಿಬ್ಬರು ಕೆರೆಯಲ್ಲಿ ಜಲಸಮಾಧಿ

October 12, 2018

ಬೇಗೂರು: ಸಮೀಪದ ಬೆಳಚಲವಾಡಿ ಗ್ರಾಮದ ಕೆರೆಗೆ ಈಜಲು ತೆರಳಿದ್ದ ಬಾಲಕರಿಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ. ಬೆಳಚಲವಾಡಿ ಗ್ರಾಮದ ಶಿವಣ್ಣ ಎಂಬುವರ ಮಗ ಬೇಗೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ 10 ನೇತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಚಂದನ್(17) ಹಾಗೂ ಇದೇ ಗ್ರಾಮದ ಮಹೇಶ್ ಎಂಬು ವರ ಮಗ 9ನೇ ತರಗತಿಯ ಪ್ರವೀಣ್ (15) ಮೃತಪಟ್ಟವರು. ಈ ಇಬ್ಬರು ಬಾಲಕರು ಬುಧವಾರ ಶಾಲೆಯಲ್ಲಿ ನಡೆದ ವಿಶ್ವಾಸ ಕಿರಣ ತರಗತಿಗೆ ಹಾಜರಾಗಿ ಮಧ್ಯಾಹ್ನ ಮನೆಗೆ ತೆರಳಿದ್ದು, ನಂತರ ಡ್ಯಾನ್ಸ್ ತರಗತಿಗೆ ತೆರಳುವುದಾಗಿ ಹೇಳಿ…

ಬೇಗೂರು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧದ ಅವಿಶ್ವಾಸಕ್ಕೆ ಬಹುಮತ
ಚಾಮರಾಜನಗರ

ಬೇಗೂರು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧದ ಅವಿಶ್ವಾಸಕ್ಕೆ ಬಹುಮತ

October 8, 2018

ಬೇಗೂರು:  ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಸಂಪೂರ್ಣ ಬಹುಮತ ದೊರಕಿದೆ. 15 ಸದಸ್ಯ ಬಲದ ಗ್ರಾಮಪಂಚಾಯಿತಿ ಹಾಲಿ ಅಧ್ಯಕ್ಷ ಬಿ.ಎಸ್.ಚೇತನ್ ಅವರು ಗ್ರಾಮಪಂಚಾಯಿತಿಗೆ ಬರುವ ಯಾವುದೇ ಅನುದಾನ ವಿತರಣೆಯಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಚೇತನ್ ಸ್ವಜನಪಕ್ಷಪಾತ ಮಾಡಿ ಆಡಳಿತ ದುರು ಪಯೋಗಮಾಡಿಕೊಂಡಿದ್ದಾರೆ ಎಂದು ಆರೋಪಿಸಿ 12 ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಲು ಉಪವಿಭಾಗಾ ಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ಉಪ ವಿಭಾ ಗಾಧಿಕಾರಿ ಅ.5 ರ ಮಧ್ಯಾಹ್ನ 12…

ಬೇಗೂರು ಸುತ್ತಮುತ್ತ ಗಾಳಿಮಳೆಗೆ ಬಾಳೆ ಬೆಳೆ ನಾಶ
ಚಾಮರಾಜನಗರ

ಬೇಗೂರು ಸುತ್ತಮುತ್ತ ಗಾಳಿಮಳೆಗೆ ಬಾಳೆ ಬೆಳೆ ನಾಶ

October 6, 2018

ಬೇಗೂರು:  ಬೇಗೂರು ಹೋಬಳಿಯ ಸುತ್ತ-ಮುತ್ತಲ ಗ್ರಾಮಗಳಲ್ಲಿ ಗುರುವಾರ ರಾತ್ರಿ ಸುರಿದ ಭಾರಿ ಗಾಳಿಮಳೆಗೆ ಬೇಗೂರು ಸಮೀಪದ ತಗ್ಗಲೂರು ಮತ್ತು ಕಮರಹಳ್ಳಿ ಗ್ರಾಮದ ರೈತರು ಬೆಳೆದಿದ್ದ ಬಾಳೆ ಗಿಡಗಳು ನೆಲ ಸಮವಾಗಿದ್ದು, ರೈತರು ನಷ್ಟಕ್ಕೆ ಸಿಲುಕಿದ್ದಾರೆ. ಬೇಗೂರು ಹೋಬಳಿಯ ತಗ್ಗಲೂರು ಗ್ರಾಮದ ಸುಬ್ಬಣ್ಣ ಎಂಬುವರ ಮಗ ವೀರ ಭದ್ರಪ್ಪ ಅವರಿಗೆ ಸೇರಿದ 3 ಎಕರೆ ನೇಂದ್ರ ಬಾಳೆ ಬೆಳೆ ನಾಶವಾಗಿದೆ. ಅದೇ ಗ್ರಾಮದ ಪುಟ್ಟಮ್ಮ ಎಂಬುವರ ಮನೆ ಗೋಡೆ ಕುಸಿ ದಿದ್ದು, ಬಡ ಮಹಿಳೆ ಸಂಕಷ್ಟಕ್ಕೆ ಸಿಲುಕಿ ದ್ದಾರೆ,…

ಬೇಗೂರಿನಲ್ಲಿ ಬೀದಿ ನಾಯಿಗಳ ಕಾಟ
ಚಾಮರಾಜನಗರ

ಬೇಗೂರಿನಲ್ಲಿ ಬೀದಿ ನಾಯಿಗಳ ಕಾಟ

October 5, 2018

ಬೇಗೂರು: ಬೇಗೂರು ಗ್ರಾಮದಲ್ಲಿ ಬೀದಿ ನಾಯಿಗಳ ಕಾಟ ಹೇಳತೀರದಾಗಿದೆ. ಎಲ್ಲೆಂದರಲ್ಲಿ ಗುಂಪು-ಗುಂಪಾಗಿ ತೆರಳುವ ನಾಯಿಗಳ ಹಿಂಡು ವಾಹನ ಸವಾರರಿಗೆ ಕಂಟಕ ಪ್ರಾಯವಾಗಿವೆ. ಗ್ರಾಮದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಯಿಗಳ ಕಾಟ ಹೆಚ್ಚಾಗಿದ್ದು, ಬೀದಿ ನಾಯಿಗಳನ್ನು ತಪ್ಪಿಸಲುಹೋಗಿ ಅನೇಕ ವಾಹನ ಸವಾರರು ಗಾಯಗೊಂಡಿದ್ದಾರೆ. ಶಾಲೆಗೆ ತೆರಳುವ ಮಕ್ಕಳುಗಳು ಆತಂಕದಿಂದ ಶಾಲೆಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಗ್ರಾಪಂನವರು ನಾಯಿಗಳನ್ನು ಹಿಡಿಸಿ ಮುಂದಾಗುವ ಅನಾಹುತ ತಪ್ಪಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಬೇಗೂರು ಗ್ರಾಪಂನಲ್ಲಿ ಇ-ಸ್ವತ್ತು ನೀಡಿಕೆಯಲ್ಲಿ ಅವ್ಯವಹಾರ ಆರೋಪ
ಚಾಮರಾಜನಗರ

ಬೇಗೂರು ಗ್ರಾಪಂನಲ್ಲಿ ಇ-ಸ್ವತ್ತು ನೀಡಿಕೆಯಲ್ಲಿ ಅವ್ಯವಹಾರ ಆರೋಪ

August 27, 2018

ಗುಂಡ್ಲುಪೇಟೆ:  ತಾಲೂಕಿನ ಬೇಗೂರು ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ನೀಡಿಕೆಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆಯುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‍ವಾದ) ಜಿಲ್ಲಾ ಸಂಘಟನಾ ಸಂಚಾ ಲಕ ಎಂ.ಬಿ.ಚಿಕ್ಕಣ್ಣ ಮತ್ತು ಮುಖಂಡ ಲಿಂಗಪ್ಪ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಮುಖ ಹೋಬಳಿ ಕೇಂದ್ರವಾದ ಬೇಗೂರು ಗ್ರಾಮಪಂಚಾಯಿತಿಯಲ್ಲಿ ಇ ಸ್ವತ್ತು ನೀಡಿಕೆಯಲ್ಲಿ ರಾಜಾರೋಷವಾಗಿ ಹಣ ಪೀಕಲಾಗುತ್ತಿದೆ. ಹಲವು ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೂ ಸಹ ಇ-ಸ್ವತ್ತು ನೀಡುವುದರೊಂದಿಗೆ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಇದಕ್ಕೆ ಪಿಡಿ ನೇರ…

ವೈದ್ಯರಿಲ್ಲದೆ ನಿತ್ಯ ರೋಗಿಗಳ ಪರದಾಟ
ಚಾಮರಾಜನಗರ

ವೈದ್ಯರಿಲ್ಲದೆ ನಿತ್ಯ ರೋಗಿಗಳ ಪರದಾಟ

August 26, 2018

ಬೇಗೂರು: – ಸಮೀಪದ ಹಸಗೂಲಿ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯೆ ರೂಪ ಅವರ ವರ್ಗಾವಣೆಯಾಗಿ ಒಂದು ವಾರ ಕಳೆದರೂ ಬೇರೊಬ್ಬ ವೈದ್ಯರನ್ನು ನಿಯೋಜನೆ ಮಾಡದ ಪರಿಣಾಮ ರೋಗಿಗಳು ವೈದ್ಯರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಸಗೂಲಿಯು ಸುತ್ತಮುತ್ತಲಿನ ಗ್ರಾಮಗಳಿಗೆ ಕೇಂದ್ರ ಭಾಗದಲ್ಲಿ ಇರುವುದರಿಂದ ಮಂಚಹಳ್ಳಿ, ಶೆಟ್ಟಹಳ್ಳಿ, ಪಾಳ್ಯ, ಆಲತ್ತೂರು, ಬೆಟ್ಟದಮಾದಳ್ಳಿ, ಗರಗನಹಳ್ಳಿ, ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಆದರೆ, ವಾರದಿಂದ ವೈದ್ಯರಿಲ್ಲದೆ ಪರದಾಡುವಂತಾಗಿದೆ. ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯಗಳಿವೆ. ಆದರೆ, ವೈದ್ಯರನ್ನು ನಿಯೋಜನೆ ಮಾಡದ ಕಾರಣ ರೋಗಿಗಳಿಗೆ ಸಮಸ್ಯೆಯಾಗಿದ್ದು…

1 2 3
Translate »