Tag: Begur

ಕಾರು-ಬೈಕ್ ಡಿಕ್ಕಿ: ಸವಾರ ಸಾವು
ಚಾಮರಾಜನಗರ

ಕಾರು-ಬೈಕ್ ಡಿಕ್ಕಿ: ಸವಾರ ಸಾವು

August 5, 2018

ಬೇಗೂರು:  ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸಮೀಪದ ಅರೇಪುರ ಗೇಟ್ ಬಳಿ (ರಾಷ್ಟ್ರೀಯ ಹೆದ್ದಾರಿ 766ರಲ್ಲಿ) ನಡೆದಿದೆ. ಮೈಸೂರು ಜಿಲ್ಲೆಯ ಪಡುವಾರಹಳ್ಳಿ ಗ್ರಾಮದ ಯೇಸುದಾಸ್(40) ಮೃತಪಟ್ಟವರು.ಯೇಸುದಾಸ್ ಮೈಸೂರಿನಿಂದ ಗುಂಡ್ಲುಪೇಟೆಗೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ನಂಜಗೂಡಿನ ಕಡೆಗೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಯೇಸುದಾಸ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇಲೂರು ಮುಖ್ಯರಸ್ತೆ ಅಗಲೀಕರಣ, ಹೊಳೆಬೀದಿ ಏಕಮುಖ ರಸ್ತೆ!
ಹಾಸನ

ಬೇಲೂರು ಮುಖ್ಯರಸ್ತೆ ಅಗಲೀಕರಣ, ಹೊಳೆಬೀದಿ ಏಕಮುಖ ರಸ್ತೆ!

July 20, 2018

ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶಾಸಕ ಲಿಂಗೇಶ್ ಚಿಂತನೆ ಬೇಲೂರು: ‘ಬೇಲೂರು ಪಟ್ಟಣದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಪಟ್ಟಣದ ಮುಖ್ಯರಸ್ತೆ ಅಗಲೀಕರಣದ ಜೊತೆಗೆ ಹೊಳೆ ಬೀದಿಯನ್ನು ಅಭಿವೃದ್ಧಿಪಡಿಸಿ ಏಕಮುಖ ರಸ್ತೆಯನ್ನಾಗಿ ಮಾರ್ಪಡಿಸಲಾಗುವುದು’ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು. ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆಯಿಂದ ನೀಡಲಾದ ಪೌರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ದೇಶ, ವಿದೇಶದಿಂದ ಸಾವಿರಾರು ಪ್ರವಾಸಿಗರು ಬೇಲೂರಿಗೆ ಬರುತ್ತಾರೆ. ವಾಹನ ದಟ್ಟಣೆ ಹೆಚ್ಚಾಗಿದೆ. ಇದರಿಂದ ಅನುಕೂಲಕರ ಸಂಚಾರಕ್ಕೆ ತೊಂದರೆ ಆಗಿದೆ. ಇದನ್ನು ಮನಗಂಡು ಮುಖ್ಯರಸ್ತೆ ಅಗಲೀಕರಣ ಮಾಡುವ ಉದ್ದೇಶದ…

ಜು.21, ಬೇಗೂರಿನಲ್ಲಿ ರಕ್ತದಾನ ಶಿಬಿರ
ಚಾಮರಾಜನಗರ

ಜು.21, ಬೇಗೂರಿನಲ್ಲಿ ರಕ್ತದಾನ ಶಿಬಿರ

July 19, 2018

ಬೇಗೂರು: ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜು.21ರ ಶನಿವಾರ ಬೆಳಿಗ್ಗೆ 10ಗಂಟೆಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ ಎಂದು ಓಂ ಶ್ರೀನಿಕೇತನ ಟ್ರಸ್ಟ್‍ನ ಎಲ್.ಮೂರ್ತಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ವಿಶ್ವ ರಕ್ತ ದಾನಿಗಳ ದಿನದ ಪ್ರಯುಕ್ತ ಬೇಗೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಿದ್ದು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು. 40 ವರ್ಷದ ತನಕ ಮಹಿಳೆಯರಿಗೆ ಹೆಚ್ಚು ಹೃದಯಾಘಾತ ಆಗುವುದಿಲ್ಲ. ವೈದ್ಯ ಕೀಯದ ಪ್ರಕಾರ ಪುರುಷರು ಪ್ರತಿ 3 ತಿಂಗಳಿಗೊಮ್ಮೆ ಮತ್ತು…

ರಂಗೂಪುರ ಪಿಎಸಿಸಿ ಬಿಜೆಪಿ ತೆಕ್ಕೆಗೆ
ಚಾಮರಾಜನಗರ

ರಂಗೂಪುರ ಪಿಎಸಿಸಿ ಬಿಜೆಪಿ ತೆಕ್ಕೆಗೆ

July 17, 2018

ಬೇಗೂರು:  ರಂಗೂ ಪುರ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರು ಜಯ ಭೇರಿ ಬಾರಿಸಿದ್ದು, ಕಾಂಗ್ರೆಸ್ ಬೆಂಬಲಿ ಗರು ಎಲ್ಲಾ ಕ್ಷೇತ್ರಗಳಲ್ಲಿ ಸೋಲು ಕಂಡು ಭಾರೀ ಮುಖಭಂಗ ಅನುಭವಿಸಿದ್ದಾರೆ. ಬ್ಯಾಂಕ್ ಕಚೇರಿಯಲ್ಲಿ ನಡೆದ ಚುನಾವಣೆ ಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿ ಗರು ಗೆದ್ದರೆ, 12 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಬೆಂಬಲಿಗರು ಸೋಲು ಕಂಡಿದ್ದಾರೆ. ಬ್ಯಾಂಕ್‍ನ ಮಾಜಿ ಅಧ್ಯಕ್ಷ ಆರ್.ಎಸ್.ನಾಗರಾಜು, ಆರ್.ಎಸ್.ರಾಜು, ವೈ.ಎಚ್.ಸಿದ್ದನಾಯಕ, ಸಿದ್ದಯ್ಯ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಆರ್.ಪಿ.ಲಿಂಗಣ್ಣ…

ದುಶ್ಚಟಗಳಿಂದ ದೂರವಿರಲು ವಿದ್ಯಾರ್ಥಿಗಳಿಗೆ ಕಿವಿ ಮಾತು
ಚಾಮರಾಜನಗರ

ದುಶ್ಚಟಗಳಿಂದ ದೂರವಿರಲು ವಿದ್ಯಾರ್ಥಿಗಳಿಗೆ ಕಿವಿ ಮಾತು

July 16, 2018

ಬೇಗೂರು:  ದುಶ್ಚಟ ಗಳು ಕುತೂಹಲಕ್ಕೆ ವಿದ್ಯಾರ್ಥಿಗಳು ಬಿದ್ದಲ್ಲಿ ಮಾದಕ ವಸ್ತುಗಳಿಗೆ ದಾಸರಾಗಬೇಕಾಗುತ್ತದೆ ಎಂದು ಜೆಎಂಎಫ್‍ಸಿ ಸಿವಿಲ್ ನ್ಯಾಯಾಧೀಶ ಎನ್.ಶರತ್‍ಚಂದ್ರ ಕಿವಿ ಮಾತು ಹೇಳಿದರು. ತಾಲೂಕಿನ ಬೇಗೂರು ಗ್ರಾಮದ ಕೈಗಾ ರಿಕೆ ತರಬೇತಿ ಸಂಸ್ಥೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಹಂಗಳ ಸೃಷ್ಠಿ ಗ್ರಾಮಾಭಿವೃದ್ಧಿ ಸಂಸ್ಥೆ, ಸಮಷ್ಠಿ ಸಮಗ್ರ ಅಭಿವೃದ್ಧಿ ಟ್ರಸ್ಟ್, ಕೈಲಾಸ್ ಸತ್ಯಾರ್ಥಿ ಚಿಲ್ಡ್ರನ್ ಫೌಂಡೇಶನ್ ಆಶ್ರಯದಲ್ಲಿ ನಡೆದ ಮಾದಕ ವ್ಯಸನಕ್ಕೆ ಒಳಗಾದ ಸಂತ್ರಸ್ಥರಿಗೆ ಕಾನೂನಿನ ನೆರವು ಮತ್ತು ಪ್ರಕೃತಿ ವಿಕೋಪಕ್ಕೆ ಒಳಗಾದ ಸಂತ್ರ…

ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಲು ಸಲಹೆ
ಚಾಮರಾಜನಗರ

ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಲು ಸಲಹೆ

July 10, 2018

ಬೇಗೂರು:  ‘ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಿದ್ದು, ಪಕ್ಷದ ಕಾರ್ಯಕರ್ತರು ಇದಕ್ಕೆ ಸಹಕಾರ ನೀಡಬೇಕು’ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು. ಸಮೀಪದ ಕುರುಬರಹುಂಡಿ ಗ್ರಾಮ ದಲ್ಲಿ ಸೋಮವಾರ ಬಿಜೆಪಿ ಕಾರ್ಯ ಕರ್ತರು ಏರ್ಪಡಿಸಿದ್ದ ಅಭಿನಂದನಾ ಸಮಾ ರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಇನ್ನೂ ಮೂಲ ಸೌಲಭ್ಯಗಳ ಕೊರತೆಯಿದೆ. ಇದನ್ನು ಕಲ್ಪಿಸಲು ಪ್ರಯತ್ನಿಸುತ್ತೇನೆ. ಕ್ಷೇತ್ರದಲ್ಲಿ ಹಲವು ಗ್ರಾಮಗಳಿಗೆ ಭೇಟಿ ನೀಡಿ ನನ್ನನ್ನು ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಹೋದಾಗ ಆಯಾಯ ಗ್ರಾಮಗಳ ಸಮಸ್ಯೆಯನ್ನು ಪಟ್ಟಿ ಮಾಡಿ…

ವಿದ್ಯುತ್ ಸಂಪರ್ಕ ಕಡಿತ ಖಂಡಿಸಿ ಗುಂಡ್ಲುಪೇಟೆ, ಬೇಗೂರಿನಲ್ಲಿ ಅನ್ನದಾತನ ಪ್ರತಿಭಟನೆ
ಚಾಮರಾಜನಗರ

ವಿದ್ಯುತ್ ಸಂಪರ್ಕ ಕಡಿತ ಖಂಡಿಸಿ ಗುಂಡ್ಲುಪೇಟೆ, ಬೇಗೂರಿನಲ್ಲಿ ಅನ್ನದಾತನ ಪ್ರತಿಭಟನೆ

June 23, 2018

ಗುಂಡ್ಲುಪೇಟೆ:  ರೈತರ ವಿದ್ಯುತ್ ಬಿಲ್ ಬಾಕಿ ಕಟ್ಟುವವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸುತ್ತಿ ರುವ ಸೆಸ್ಕ್ ಕ್ರಮದ ವಿರುದ್ಧ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಸಮಾ ವೇಶಗೊಂಡ ರೈತ ಸಂಘದ ಪದಾಧಿಕಾರಿ ಗಳು ಮತ್ತು ಮುಖಂಡರು ಮತ್ತು ಕಾರ್ಯ ಕರ್ತರು ಪ್ರಮುಖ ರಸ್ತೆಗಳಲ್ಲಿ ಸಾಗಿ ನಂತರ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಮಾನವ ಸರಪಳಿ ರಚಿಸಿ ಸೆಸ್ಕ್ ಕ್ರಮವನ್ನು ಖಂಡಿಸಿ ಘೋಷಣೆಗಳನ್ನು ಕೂಗಿ, ಕೆಲ ಕಾಲ ರಸ್ತೆ ತಡೆ ನಡೆಸಿ ಸೆಸ್ಕ್ ಅಧಿಕಾರಿಗಳ ವಿರುದ್ದ…

ಅಪರಿಚಿತ ವಾಹನ ಡಿಕ್ಕಿ: ಜಿಂಕೆಗೆ ಗಾಯ
ಚಾಮರಾಜನಗರ

ಅಪರಿಚಿತ ವಾಹನ ಡಿಕ್ಕಿ: ಜಿಂಕೆಗೆ ಗಾಯ

June 17, 2018

ಬೇಗೂರು:ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಸೇರಿದ ಓಂಕಾರ್ ಅರಣ್ಯ ವಲಯದಿಂದ ಆಹಾರ ಹುಡುಕಿ ಬಂದಿದ್ದ ಎರಡು ವರ್ಷದ ಗಂಡು ಜಿಂಕೆಗೆ ಅಪರಿಚಿತ ವಾಹನ ವೊಂದು ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರು-ನೀಲಗಿರಿ ರಾಷ್ಟ್ರೀಯ ಹೆದ್ದಾರಿಯ ಅರೇಪುರ ಸಮೀಪ ಶನಿವಾರ ಬೆಳಿಗ್ಗೆ ನಡೆದಿದೆ. ರಸ್ತೆ ದಾಟುವಾಗ ಅಪರಿಚಿತ ವಾಹನ ಜಿಂಕೆಗೆ ಡಿಕ್ಕಿ ಹೊಡೆದಿದೆ. ಇದರಿಂದ ಜಿಂಕಿಯ ಕಾಲಿಗೆ ಪೆಟ್ಟಾಗಿ ರಸ್ತೆ ಬದಿಯಲ್ಲಿ ಅಸ್ವಸ್ಥವಾಗಿ ಕುಳಿತಿದ್ದನ್ನು ಗಮನಿಸಿದ ದಾರಿ ಹೋಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು…

ಹುಲಿ ದಾಳಿ: ಎತ್ತು ಸಾವು
ಚಾಮರಾಜನಗರ

ಹುಲಿ ದಾಳಿ: ಎತ್ತು ಸಾವು

June 17, 2018

ಬೇಗೂರು:  ಗುಂಡ್ಲು ಪೇಟೆ ತಾಲೂಕಿನ ಬೇಗೂರು ಹೋಬಳಿ ಸಮೀಪದ ಕೂಡ್ಲೂರು ಗ್ರಾಮದ ಮಹದೇವಶೆಟ್ಟಿ ಎಂಬುವವರ ಜಮೀನಿನಲ್ಲಿ ಎತ್ತಿನ ಮೇಲೆ ಹುಲಿ ದಾಳಿ ನಡೆಸಿ ಎತ್ತಿನ ಕುತ್ತಿಗೆಯ ಭಾಗವನ್ನು ತಿಂದು ಹಾಕಿದೆ. ಸ್ಥಳಕ್ಕೆ ಓಂಕಾರ್ ವಲಯದ ಆರ್‍ಎಫ್‍ಓ ನವೀನಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದರು.

ಬೊಲೇರೋ ಪಿಕ್‍ಅಪ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಹಾಸನ

ಬೊಲೇರೋ ಪಿಕ್‍ಅಪ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

June 16, 2018

ಬೇಲೂರು: ಬಾಗಿನ ಅರ್ಪಿಸಲು ಹೋಗಿ ಕೆರೆಯಲ್ಲಿ ಮುಳುಗಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಬಿಕ್ಕೋಡು ಹೋಬಳಿ ಮದಘಟ್ಟ ಗ್ರಾಮದಲ್ಲಿ ನಡೆದಿದೆ. ರಂಗಶೆಟ್ಟಿ(46) ಮೃತರು. ಗ್ರಾಮದ ದೊಡ್ಡಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಲು ಹೋಗಿದ್ದ ರಂಗಶೆಟ್ಟಿ ನೀರುಪಾಲಾಗಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿ ಮೇಲೆ ಬರಲಾಗದೆ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಸಿಪಿಐ ಯೋಗೇಶ್ ಆಗಮಿಸಿ ಪರಿಶೀಲಿಸಿದರು. ಅಗ್ನಿಶಾಮಕ ಸಿಬ್ಬಂದಿ ಮೃತ ದೇಹಕ್ಕಾಗಿ ಶೋಧ ಕಾರ್ಯಾದಲ್ಲಿ ತೊಡಗಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 2 3
Translate »